ನಾವು ಹೇಗಿದ್ದರೂ ಮೊದಲು ಬ್ಯಾಟ್ ಮಾಡುತ್ತಿದ್ದೆವು: ಸೂರ್ಯ

1 Min Read

ಅಹಮದಾಬಾದ್‌: ಟಿ20 ವಿಶ್ವಕಪ್‌ ಫೈನಲ್‌ (T20 World Cup Final) ಪಂದ್ಯದಲ್ಲಿ ಟಾಸ್‌ ಗೆದ್ದಿರುವ ನ್ಯೂಜಿಲೆಂಡ್‌(New Zealand) ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ರವಿಶಾಸ್ತ್ರಿ ಜೊತೆ ಮಾತನಾಡಿದ ಸೂರ್ಯಕುಮಾರ್‌ (Suryakumar Yadav) ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಮೊದಲು ಬ್ಯಾಟ್ ಮಾಡಲು ಸಂತೋಷಪಡುತ್ತೇವೆ. ನಾವು ಹೇಗಾದರೂ ಮೊದಲು ಬ್ಯಾಟ್ ಮಾಡುತ್ತಿದ್ದೆವು ಎಂದು ತಿಳಿಸಿದರು.

ಸೆಮಿಫೈನಲ್‌ನಲ್ಲೂ ನಾವು ಮೊದಲು ಬ್ಯಾಟಿಂಗ್‌ ಮಾಡಿದ್ದೇವೆ. ಇಲ್ಲೂ ಮೊದಲು ಬ್ಯಾಟಿಂಗ್‌ ಮಾಡುತ್ತೇವೆ. ಆಗ ಬೌಲರ್‌ಗಳ ಮೇಲೆ ಯಾವುದೇ ಒತ್ತಡ ಇರುವುದಿಲ್ಲ ಎಂದು ಹೇಳಿದರು.

ನ್ಯೂಜಿಲೆಂಡ್‌ ಒಂದು ಬದಲಾವಣೆ ಮಾಡಿದ್ದು ಕೋಲ್ ಮೆಕ್‌ಕಾಂಚಿ ಜಾಗದಲ್ಲಿ ಜಾಕೋಬ್ ಡಫ್ಫಿ ಆಡುತ್ತಿದ್ದಾರೆ.

ಭಾರತ ಗೆದ್ದರೆ ಸತತ ಎರಡನೇ ಬಾರಿ ಟಿ20 ಗೆದ್ದ ಸಾಧನೆ ಮಾಡಿದಂತಾಗುತ್ತದೆ. ನ್ಯೂಜಿಲೆಂಡ್‌ ಗೆದ್ದರೆ ಮೊದಲ ಬಾರಿಗೆ ಟಿ20 ಚಾಂಪಿಯನ್‌ ಅಲಂಕರಿಸಿದಂತಾಗುತ್ತದೆ.

Share This Article