ಸತತ 13 ಪಂದ್ಯ ಗೆಲ್ಲುವ ಕನಸು ಭಗ್ನ – ಸೋತರೂ ಮೊದಲ ಸ್ಥಾನದಲ್ಲಿದೆ ಭಾರತ

1 Min Read

ಅಹಮದಾಬಾದ್‌: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಹೀನಾಯ ಸೋಲಿನಿಂದಾಗಿ ಸತತ 13 ಟಿ20 ವಿಶ್ವಕಪ್‌ (T20 World Cup) ಪಂದ್ಯ ಗೆಲ್ಲುವ ಭಾರತದ(Team India) ಕನಸು ಭಗ್ನಗೊಂಡಿದೆ.

2024 ರ ಟಿ20 ವಿಶ್ವಕಪ್‌ ಪಂದ್ಯಗಳು ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ ನೆಲದಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಸತತ 8 ಪಂದ್ಯಗಳನ್ನು ಭಾರತ ಗೆದ್ದು 2ನೇ ಬಾರಿ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್‌, ನಮೀಬಿಯಾ ವಿರುದ್ಧ ಗೆಲ್ಲುವ ಮೂಲಕ ಸತತ 12 ಪಂದ್ಯಗಳಲ್ಲಿ ಜಯಶಾಲಿಯಾಗಿ ಭಾರತ ಸೂಪರ್‌ 8ಕ್ಕೆ ಅರ್ಹತೆ ಪಡೆದಿತ್ತು. ಆದರೆ ಈಗ ಆಫ್ರಿಕಾ ವಿರುದ್ಧ ಸೋಲಿನಿಂದಾಗಿ ಗೆಲುವಿನ ಓಟ ಅಂತ್ಯಗೊಂಡಿದೆ. ಇದನ್ನೂ ಓದಿ: ಕಳಪೆ ಬೌಲಿಂಗ್‌, ಬ್ಯಾಟಿಂಗ್‌ಗೆ ಬೆಲೆತೆತ್ತ ಭಾರತ – ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು

 


ಮೊದಲು ಬ್ಯಾಟ್‌ ಬೀಸಿದ ದಕ್ಷಿಣ ಆಫ್ರಿಕಾ 7 ವಿಕೆಟ್‌ ನಷ್ಟಕ್ಕೆ 187 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್‌ ಆಯ್ತು. ಇಂದಿನ ಪಂದ್ಯದಲ್ಲಿ ಸೋತರೂ ಟಿ20 ವಿಶ್ವಕಪ್‌ನಲ್ಲಿ ಸತತ ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ.

ಟಿ20ಯಲ್ಲಿ ಸತತ ಜಯಗಳು
12 – ಭಾರತ – 2024, 2026
8 – ದಕ್ಷಿಣ ಆಫ್ರಿಕಾ – 2024
8– ಆಸ್ಟ್ರೇಲಿಯಾ – 2022, 2024
7 – ಭಾರತ – 2012, 2014
6 – ಭಾರತ -2007, 2009

Share This Article