ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

Public TV
2 Min Read

ದುಬೈ: ಟಿ20 ವಿಶ್ವಕಪ್‍ನ ಮೊದಲ ಎರಡು ಪಂದ್ಯಗಳನ್ನು ಸೋತ ಭಾರತದ ಸೆಮಿಫೈನಲ್ ಕನಸು ಬಹುತೇಕ ಮುಚ್ಚಿದೆ. ಆದರೆ ಮೂರನೇ ಪಂದ್ಯದ ಭರ್ಜರಿ ಜಯದ ಬಳಿಕ ಟೀಂ ಇಂಡಿಯಾಗೆ ಅವಕಾಶವೊಂದು ತೆರೆದುಕೊಂಡಿದೆ ಆದರೆ ಇದು ಇತರ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರದೊಂದಿಗೆ ನಿಂತಿದೆ.

ವಿಶ್ವಕಪ್‍ನ ಸೂಪರ್-12, ಗ್ರೂಪ್-2 ರಲ್ಲಿ ಸ್ಥಾನ ಪಡೆದಿರುವ ಭಾರತ ಅಂಕಪಟ್ಟಿಯಲ್ಲಿ ಸದ್ಯ 2 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‍ಗೆ ಲಗ್ಗೆ ಇಡಲಿದೆ. ಇದೀಗ ಅಂಕಪಟ್ಟಿಯನ್ನು ಗಮನಿಸಿದಾಗ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ಆಡಿರುವ 4 ಪಂದ್ಯಗಳನ್ನು ಗೆದ್ದು 8 ಅಂಕದೊಂದಿಗೆ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡರೆ, 2ನೇ ಸ್ಥಾನದಲ್ಲಿರುವ ಅಘ್ಘಾನಿಸ್ತಾನ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 4 ಅಂಕ ಪಡೆದಿದೆ. ನ್ಯೂಜಿಲೆಂಡ್ ತಂಡ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು 4 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದೀಗ 2ನೇ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್ ಮತ್ತು ಅಘ್ಘಾನಿಸ್ತಾನ ತಂಡಗಳ ನಡುವೆ ಪೈಪೋಟಿ ಮೂಡಿದೆ. ಈ ಮೂರು ತಂಡಗಳು ಕೂಡ ಇನ್ನೂಳಿದ ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ನೆಟ್ ರನ್‍ರೇಟ್ ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಏಕದಿನ ನಾಯಕತ್ವದ ಮೇಲೆ ತೂಗುಗತ್ತಿ 

ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಅಘ್ಘಾನಿಸ್ತಾನ ವಿರುದ್ಧ 66 ರನ್‍ಗಳ ಜಯ ದಾಖಲಿಸಿ, -1.609 ಇದ್ದ ರನ್ ರೇಟ್ +0.073 ಬಂದಿದೆ. ಇನ್ನೂ ಭಾರತಕ್ಕೆ 2 ಪಂದ್ಯಗಳು ಬಾಕಿ ಉಳಿದಿದ್ದು ಈ ಎರಡು ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದು ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ನ್ಯೂಜಿಲೆಂಡ್ ಮತ್ತು ಅಘ್ಘಾನಿಸ್ತಾನ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋಲು, ಗೆಲುವಿನೊಂದಿಗೆ ನಡೆದರೆ ಭಾರತಕ್ಕೆ ಸೆಮಿಫೈನಲ್ ಆಸೆ ಜೀವಂತವಾಗಿರಲಿದೆ. ಈ ನಡುವೆ ಯಾವುದಾದರು ಒಂದು ಫಲಿತಾಂಶ ತಲೆ ಕೆಳಗಾದರೆ ಭಾರತ ಟೂರ್ನಿಯಿಂದ ನಿರ್ಗಮಿಸಲಿದೆ. ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

ಭಾರತ ಸೆಮಿಫೈನಲ್ ಆಡಬೇಕಾದರೆ ನ್ಯೂಜಿಲೆಂಡ್ ತಂಡ ಇನ್ನೂಳಿದಿರುವ 2 ಪಂದ್ಯಗಳನ್ನು ಸೋಲಬೇಕು. ಎರಡು ಪಂದ್ಯಗಳನ್ನು ಸೋಲದಿದ್ದರು 1 ಪಂದ್ಯವನ್ನಾದರು ಸೋಲಬೇಕು. ಒಂದು ವೇಳೆ ನ್ಯೂಜಿಲೆಂಡ್ ಎರಡು ಪಂದ್ಯಗಳನ್ನು ಸೋತರೆ ಆಗ ಭಾರತ ಅಘ್ಘಾನಿಸ್ತಾನ ತಂಡಗಳ ನಡುವೆ ನೆಟ್ ರನ್ ರೇಟ್ ಆದರದಲ್ಲಿ ಸೆಮಿಫೈನಲ್ ಟಿಕೆಟ್ ದೊರೆಯಲಿದೆ.

ಭಾರತ ತಂಡ ಉಳಿದಿರುವ ಎರಡು ಪಂದ್ಯಗಳ ಪೈಕಿ 1 ಪಂದ್ಯ ಸೋತರು ಮನೆ ದಾರಿ ಹಿಡಿಯಲಿದೆ. ಮುಂದಿನ ಎದುರಾಳಿ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ಎದುರು ಭಾರತ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿದರೆ 60 ರನ್‍ಗಳ ಅಂತರದಿಂದ ಗೆಲುವು ದಾಖಲಿಸಬೇಕು. ಚೇಸಿಂಗ್ ಮಾಡಿದರೆ 13 ಓವರ್‍ ಗಳ ಮೊದಲು ಚೇಸ್ ಮಾಡಿ ಗೆಲ್ಲಬೇಕು. ಜೊತೆಗೆ ಅಘ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಉಳಿದ ಪಂದ್ಯಗಳಲ್ಲಿ ಅಲ್ಪ ಅಂತರದಲ್ಲಿ ಗೆಲ್ಲಬೇಕು. ಹೀಗೆಲ್ಲ ನಡೆದರೆ ಲೆಕ್ಕಾಚಾರದ ಪ್ರಕಾರ ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲಿದೆ. ಇದನ್ನೂ ಓದಿ: 14 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದ ರೋಹಿತ್, ರಾಹುಲ್ ಜೋಡಿ

Share This Article
Leave a Comment

Leave a Reply

Your email address will not be published. Required fields are marked *