ಭಾರತದ ವಿರುದ್ಧ ಪಾಕ್‌ ಪಂದ್ಯವಾಡಲ್ಲ: ಶೆಹಾಬಾಜ್ ಷರೀಫ್

1 Min Read

ಇಸ್ಲಾಮಾಬಾದ್‌: ಭಾರತದ (Team India) ವಿರುದ್ಧ ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಾಬಾಜ್ ಷರೀಫ್ (Pakistan PM Shehbaz Sharif ) ಹೇಳಿದ್ದಾರೆ.

ಕ್ಯಾಬಿನೆಟ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾವು ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು; ಇದು ನಮ್ಮ ಸ್ಪಷ್ಟ ನಿಲುವು. ಎಚ್ಚರಿಕೆಯಿಂದ ಚರ್ಚಿಸಿದ ನಂತರ ನಾವು ಈ ನಿಲುವನ್ನು ತೆಗೆದುಕೊಂಡಿದ್ದೇವೆ. ನಾವು ಬಾಂಗ್ಲಾದೇಶದೊಂದಿಗೆ ಇದ್ದೇವೆ ಮತ್ತು ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ:  ಪಾಕ್‌ ಬಹಿಷ್ಕಾರ ಹಾಕಿದ್ರೂ ಲಂಕಾಗೆ ತೆರಳಲಿದೆ ಟೀಂ ಇಂಡಿಯಾ!


ಭದ್ರತಾ ಕಾಣ ನೀಡಿ ಬಾಂಗ್ಲಾದೇಶ ಭಾರತಕ್ಕೆ ಬರುವುದಿಲ್ಲ. ಶ್ರೀಲಂಕಾದಲ್ಲಿ ಟೂರ್ನಿ ಆಡಿಸುವಂತೆ ಬೇಡಿಕೆ ಇಟ್ಟಿತ್ತು. ಬಾಂಗ್ಲಾದ ಈ ನಿಲುವಿಗೆ ಪಾಕ್‌ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಐಸಿಸಿ ಬಾಂಗ್ಲಾದ ಬೇಡಿಕೆಯನ್ನು ತಿರಸ್ಕರಿಸಿತ್ತು. ಇದನ್ನೂ ಓದಿ: ಭಾರತ-ಪಾಕ್‌ ಪಂದ್ಯ ರದ್ದಾದ್ರೆ 2,200 ಕೋಟಿ ಲಾಸ್‌!

ಫೆಬ್ರವರಿ 15 ರಂದು ಕೊಲಂಬೋದಲ್ಲಿರುವ (Colombo) ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ, ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.
Share This Article