ಕೈಗೆ ಬಂದ ಕ್ಯಾಚ್‌ ಬಿಟ್ಟ ಕುಲ್ದೀಪ್‌, ಅಭಿ – ಪವರ್‌ ಪ್ಲೇನಲ್ಲೇ 34 ರನ್‌ ಚಚ್ಚಿಸಿಕೊಂಡ ಬುಮ್ರಾ

Public TV
2 Min Read

– 8 ಓವರ್‌ಗಳಲ್ಲಿ 5 ಕ್ಯಾಚ್‌ ಕೈಚೆಲ್ಲಿದ ಭಾರತ

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯ ನಡೆಯುತ್ತಿದೆ. ಮೊದಲು ಕ್ರೀಸ್‌ಗಿಳಿದ ಪಾಕ್‌ ಸ್ಫೋಟಕ ಪ್ರದರ್ಶನಕ್ಕೆ ಮುಂದಾಗಿದೆ. ಮೊದಲ ಪಂದ್ಯದಲ್ಲಿ ಭಾರೀ ಮುಖಭಂಗ ಅನುಭವಿಸಿದ್ದ ಪಾಕ್‌ 2ನೇ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲೇಬೇಕೆಂದು ಮುಂದಾಗಿದೆ. ಆದ್ರೆ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿರುವ ಭಾರತೀಯ ಆಟಗಾರರು ಇಂದೇಕೋ ಫೀಲ್ಡಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿದಂತೆ ಕಾಣುತ್ತಿದೆ.

ಹೌದು. ಅತ್ತ ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ ಪವರ್‌ ಪ್ಲೇನಲ್ಲಿ 3 ಓವರ್‌ಗಳಲ್ಲಿ 34 ರನ್‌ ಬಿಟ್ಟುಕೊಟ್ಟರೆ, ಇತ್ತ ಫೀಲ್ಡರ್‌ಗಳು ಕೈಗೆ ಬಂದ ಕ್ಯಾಚ್‌ಗಳನ್ನೇ ಕೈಚೆಲ್ಲುತ್ತಿದ್ದಾರೆ. ಇದು ಪಾಕ್‌ ದುಬಾರಿ ರನ್‌ ಕಲೆಹಾಕಲು ನೆರವಾಗುತ್ತಿದೆ.

ಮೊದಲ ಓವರ್‌ನ 3ನೇ ಎಸೆತದಲ್ಲೇ ಸಾಹಿಬ್‌ಜಾದಾ ಫರ್ಹಾನ್ ನೀಡಿದ್ದ ಕ್ಯಾಚ್‌ ಅನ್ನು ಅಭಿಷೇಕ್‌ ಶರ್ಮಾ ಕೈಚೆಲ್ಲಿದರು. ಇದಾದ ಬಳಿಕ 5ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವರುಣ್‌ ಬೌಲಿಂಗ್‌ಗೆ ಸೈಮ್‌ ಅಯೂಬ್‌ ನೀಡಿದ್ದ ಈಸಿ ಕ್ಯಾಚನ್ನು‌, ಕುಲ್ದೀಪ್‌ ಯಾದವ್‌ ಬಿಟ್ಟರು. ಆಗ ಪಾಕ್‌ ತಂಡದ ಮೊತ್ತ 1 ವಿಕೆಟ್‌ ಕಳೆದುಕೊಂಡು 38 ರನ್‌ಗಳನ್ನಷ್ಟೇ ಗಳಿಸಿತ್ತು. ಅದೇ ಓವರ್‌ ಕೊನೆ ಎಸೆತದಲ್ಲಿ ಮತ್ತೆ ಫರ್ಹಾನ್‌ ನೀಡಿದ ಕೀಪರ್‌ ಕ್ಯಾಚನ್ನೂ ಸಂಜು ಕೈಚೆಲ್ಲಿದರು.

ಇದಾದ ಬಳಿಕ 8ನೇ ಓವರ್‌ನ 3ನೇ ಎಸೆತದಲ್ಲಿ ಫರ್ಹಾನ್‌ ನೀಡಿದ್ದ ಕ್ಯಾಚನ್ನು ಲಾಂಗ್‌ ಆನ್‌ನಲ್ಲಿ ಅಭಿಷೇಕ್‌ ಶರ್ಮಾ ಕೈಚೆಲ್ಲಿದರಲ್ಲದೇ, ಸಿಕ್ಸ್‌ಗೆ ತಳ್ಳಿದರು. ಅದೇ ಓವರ್‌ 5ನೇ ಎಸೆತದಲ್ಲಿ ಸೈಮ್‌ ಅಯೂಬ್‌ ನೀಡಿದ್ದ ಸುಲಭ ಕ್ಯಾಚ್‌ ಫೀಲ್ಡಿಂಗ್‌ ಸೆಟ್‌ನಿಂದ ಕೈತಪ್ಪಿತು. ಒಟ್ಟಾರೆ, ಟೀಂ ಇಂಡಿಯಾ ಮಾಡಿದ ಈ ಯಡವಟ್ಟು ಪಾಕಿಸ್ತಾನ 10 ಓವರ್‌ಗಳಲ್ಲಿ 90 ರನ್‌ ಪೇರಿಸಲು ಕಾರಣವಾಯಿತು.

ಭಾರತ ಪ್ಲೇಯಿಂಗ್‌-11
ಅಭಿಷೇಕ್‌ ಶರ್ಮಾ, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ಜಸ್ಪ್ರೀತ್‌ ಬುಮ್ರಾ.

ಪಾಕಿಸ್ತಾನ ಪ್ಲೇಯಿಂಗ್‌-11
ಸಾಹಿಬ್‌ಜಾದಾ ಫರ್ಹಾನ್, ಸೈಮ್‌ ಅಯೂಬ್‌, ಫಖರ್‌ ಝಮಾನ್‌, ಸಲ್ಮಾನ್‌ ಅಘಾ (ನಾಯಕ), ಮೊಹಮ್ಮದ್‌ ನವಾಜ್‌, ಫಾಹಿಮ್‌ ಅಶ್ರಫ್‌, ಮೊಹಮ್ಮದ್‌ ಹ್ಯಾರಿಸ್‌, ಶಾಹೀನ್‌ ಶಾ ಅಫ್ರಿದಿ, ಹ್ಯಾರಿಸ್‌ ರೌಫ್‌, ಅಬ್ರಾರ್‌ ಅಹ್ಮದ್‌, ಹುಸೇನ್ ತಲಾತ್.

Share This Article