ಅಧಿಕಾರದಲ್ಲಿ ತೃಪ್ತಿ ಅನ್ನೋದು ಇರಲ್ಲ: ಟಿ.ಬಿ ಜಯಚಂದ್ರ

Public TV
1 Min Read

– ಬಿಜೆಪಿ, ಜೆಡಿಎಸ್‌ ನೀರಾವರಿ ಯೋಜನೆ ಬಗ್ಗೆ ಚರ್ಚಿಸಲಿ

ಬೆಂಗಳೂರು: ಅಧಿಕಾರದಲ್ಲಿ ತೃಪ್ತಿ ಅನ್ನೋದು ಇರಲ್ಲ ಎಂದು ಕಾಂಗ್ರೆಸ್‌ನ (Congress) ಹಿರಿಯ ನಾಯಕ ಟಿ.ಬಿ ಜಯಚಂದ್ರ (T.B Jayachandra) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸಚಿವ ಸಂಪುಟ ಪುನರ್‌ರಚನೆ ಆಗಬೇಕಾ? ಬೇಡ್ವಾ? ಎಂಬುದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಸುದೀರ್ಘ ರಾಜಕಾರಣ ಮಾಡಿಕೊಂಡು ಬರ್ತಿದ್ದಾರೆ. ಅವರು ಇಡುತ್ತಿರೋ‌ ಹೆಜ್ಜೆ ಏನು ಅನ್ನೋದು ಗೊತ್ತಿಲ್ಲ. ನಾನು ಅವರನ್ನು ಭೇಟಿ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.

ನೀರಾವರಿ ಸಚಿವರೊಂದಿಗೆ ಭೇಟಿ ಮಾಡುತ್ತೇವೆ, ಡಿ.ಕೆ ಶಿವಕುಮಾರ್ (D.K Shivakumar) ಸಹ ಬರ್ತಾರೆ.‌ ಅಧಿಕಾರದಲ್ಲಿ ತೃಪ್ತಿ ಎಲ್ಲಿಯೂ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೊಟ್ಟಿರೋ ಹುದ್ದೆಯಲ್ಲಿ ಸಾಗುತ್ತಿದ್ದೇವೆ. ಏನಾದರೂ ಖರ್ಗೆಯವರು ಸಂಪುಟ ವಿಸ್ತರಣೆ ಆಗುತ್ತೆ ಅಂದ್ರೆ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.

ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸಬೇಕು. ಅದರ ಜವಾಬ್ದಾರಿ ಅಧ್ಯಕ್ಷರ ಮೇಲೆ ಇರುತ್ತದೆ. ಕಾರ್ಯಾಚರಣೆ ಹೇಗೆ ಮಾಡಬೇಕು ಅನ್ನೋದು ಅವರಿಗೆ ಗೊತ್ತಿದೆ, ಅದನ್ನು ಮಾಡುತ್ತಿದ್ದೇವೆ. 2028ರಲ್ಲಿ ಸಾಕಷ್ಟು ನಾಯಕರು ಸಿಎಂ ರೇಸ್‌ನಲ್ಲಿ ಇದ್ದಾರೆ. ನಾನು ಇದ್ದೇನೆ ಎಂದು ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 2028ರ ಭವಿಷ್ಯ ಈಗ ಮಾತಾಡೋದು ಬೇಡ. ಇನ್ನೂ ಮೂರು ವರ್ಷ ಇದೆ, ಹೀಗಾಗಿ ಅಭಿವೃದ್ಧಿ ಕಡೆಗೆ ಗಮನ ಹರಿಸೋಣ. ನೀರಾವರಿ ಯೋಜನೆ ಕುರಿತು ಕೆಲಸ ಮಾಡೋಣ ಎಂದಿದ್ದಾರೆ.

ಬಿಜೆಪಿ ಜೆಡಿಎಸ್ ಮೈತ್ರಿಯಿಂದ ನೀರಾವರಿ ವಿವಾದಕ್ಕೆ ತೆರೆ ಬೀಳುತ್ತದೆ ಎನ್ನುವುದಾದರೆ ರಾಜ್ಯದಲ್ಲಿ ಇರೋ ನೀರಾವರಿ ಯೋಜನೆ ಕುರಿತು ಚರ್ಚೆ ಮಾಡಲಿ. ಗೋದಾವರಿ ಅಂತರಾಜ್ಯ ವಿವಾದವಾಗಿದೆ. ಈ ರಾಜ್ಯದಲ್ಲಿ ಮೇಕೆ ದಾಟು, ಮಹಾದಾಯಿ ಯೋಜನೆ ಮಾಡಿ ಎಂದು ಹೇಳಬೇಕು ಆ ಕೆಲಸವನ್ನು ಎಂಪಿಗಳು ಮಾಡಬೇಕು ಎಂದಿದ್ದಾರೆ.

ಉಸ್ತುವಾರಿ ಸಚಿವರ ಮೇಲೆ ಕೆಲವು ಕಡೆ ಅಸಮಧಾನ ವಿಚಾರ‌ವಾಗಿ, ಉಸ್ತುವಾರಿ ಸಚಿವರು ಸಚಿವರ ಬಗ್ಗೆ ಯಾರಾದರೂ ಆಕ್ಷೇಪ ಎತ್ತಿದ್ದಾರಾ? ಸಣ್ಣ ಸಣ್ಣ ವಿಚಾರ ಇರಬಹುದು ಅಷ್ಟೇ, ಅದನ್ನ ಚರ್ಚೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

Share This Article