ಗಮನಿಸಿ, ವೈರಲ್ ಆಗಿರುವ ಸ್ಫೋಟದ ವಿಡಿಯೋ ಪುಲ್ವಾಮ ದಾಳಿಯದ್ದು ಅಲ್ಲ!

Public TV
1 Min Read

ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಬಸ್ಸಿಗೆ ಆತ್ಮಾಹುತಿ ವ್ಯಕ್ತಿಯಿದ್ದ ಕಾರು ಡಿಕ್ಕಿಹೊಡೆದ ಸ್ಫೋಟದ ದೃಶ್ಯ ಎಂದು ವಿಡಿಯೋ ಒಂದು ವೈರಲ್ ಆಗಿದೆ. ಆದರೆ ವೈರಲ್ ಆಗಿರುವ ವಿಡಿಯೋ ಸಿರಿಯಾದಲ್ಲಿ ನಡೆದ ಘಟನೆ ಎನ್ನುವುದು ದೃಢಪಟ್ಟಿದೆ.

ಪುಲ್ವಾಮದಲ್ಲಿ ದಾಳಿ ನಡೆದ ಬಳಿ 9 ಸೆಕೆಂಡ್ ಇರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದ ಇಮೇಜ್ ತೆಗೆದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಆನೇಕ ವೆಬ್‍ಸೈಟ್‍ಗಳಲ್ಲಿ ಈ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.

ವಿಡಿಯೋ ಎಲ್ಲಿಯದ್ದು?
ವೈರಲ್ ಆಗಿರುವ ಸ್ಫೋಟ ನಡೆದಿದ್ದು ಸಿರಿಯಾ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿರು ಅಲ್-ರಾಯ್ ಎಂಬ ಪಟ್ಟಣದಲ್ಲಿ. ಫೆಬ್ರವರಿ 12 ರಂದು ನಡೆದ ಈ ಕಾರು ಬಾಂಬ್ ಸ್ಫೋಟದಲ್ಲಿ ಮೂವರು ಭದ್ರತಾ ಸಿಬ್ಬಂದಿ ಹಾಗೂ ನಾಲ್ಕು ಜನ ಸಾರ್ವಜನಿಕರು ಗಾಯಗೊಂಡಿದ್ದಾರೆ. ಈ ವಿಡಿಯೋ ಫೆ.12 ರಂದೇ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಆಗಿದೆ.

ಉತ್ತರ ಸಿರಿಯಾದ ಪಟ್ಟಣ ಅಲ್-ರಾಯ್ 2016ರವರೆಗೂ ಐಸಿಸ್ ಉಗ್ರರ ಹಿಡಿತದಲ್ಲಿತ್ತು. ಸದ್ಯ ಅದ ಮೇಲೆ ಟರ್ಕಿ ಬೆಂಬಲಿತ ಭಿನ್ನಮತೀಯರ ಗುಂಪು ಹಿಡಿತ ಸಾಧಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *