ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

Public TV
1 Min Read

ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಅಲ್ಲಿ ವಾಸವಾಗಿರುವ ಜನರ ಪರಿಸ್ಥಿತಿ ಹದಗೆಟ್ಟಿದೆ. ಉಕ್ರೇನ್ ಸೈನ್ಯವನ್ನು ಗುರಿಯಾಗಿಸಿ ರಷ್ಯಾ ಪಡೆಗಳು ದಾಳಿ ನಡೆಸಲು ಮುಂದಾಗಿದ್ದರು. ಆದರೆ ಈಗ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಸಾರ್ವಜನಿಕರು ವಾಸಿಸುವ ವಸತಿ ಪ್ರದೇಶಗಳನ್ನೂ ಗುರಿಯಾಗಿಸಿಕೊಂಡಿದ್ದಾರೆ. ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆಯನ್ನು ಹಾಕಲಾಗಿದ್ದು, ಕೂಡಲೇ ಆ ಕಟ್ಟಡಗಳ ತೊರೆಯುವಂತೆ ಜನತೆಗೆ ಅಧಿಕಾರಿಗಳ ಸೂಚನೆ ನೀಡಿದ್ದಾರೆ.

ಉಕ್ರೇನ್‍ನಲ್ಲಿ ವಸತಿ ಪ್ರದೇಶಗಳಲ್ಲಿ ಕೆಲವು ಕೆಂಪು ಗುರುತುಗಳು ಕಾಣುತ್ತಿದೆ. ದಾಳಿಗಳನ್ನು ನಡೆಸಲು ರಷ್ಯಾದ ಪಡೆಗಳು ಈ ಚಿಹ್ನೆಗಳನ್ನು ಬಳಸಿದವು ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ಕಟ್ಟಡದ ಮೇಲ್ಭಾಗದಲ್ಲಿ x ಚಿಹ್ನೆಗಳ ಆಕಾರದಲ್ಲಿ ಗುರುತುಗಳು ಕಾಣುತ್ತಿದೆ. ಅದರಲ್ಲೂ ಅವು ಕೆಂಪು ಬಣ್ಣದಲ್ಲಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಈ ಚಿಹ್ನೆಗಳನ್ನ ಯಾರು ಬರೆದರು ಎಂಬುದು ಅನಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

ಕೆಂಪು ಬಣ್ಣದ ಚಿಹ್ನೆಗಳು ಇದ್ದಕ್ಕಿದ್ದಂತೆ ಬೆಳಕಿಗೆ ಬಂದಿರುವುದರಿಂದ ಉಕ್ರೇನಿಯನ್ ಅಧಿಕಾರಿಗಳು ಗಾಬರಿಗೊಂಡಿದ್ದಾರೆ. ವಸತಿ ಗೃಹಗಳ ಮೇಲ್ಭಾಗದಲ್ಲಿ ಕೆಂಪು ಗುರುತುಗಳಿದ್ದರೆ, ಕಟ್ಟಡದ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಿಸಲು ಆದೇಶಿಸಲಾಗಿದೆ. ಉಕ್ರೇನ್ ಅಧಿಕಾರಿಗಳು ತಮ್ಮ ಕಟ್ಟಡಗಳನ್ನು ಕೂಡಲೆ ಪರಿಶೀಲಿಸುವಂತೆ ಮತ್ತು x ಗುರುತು ಕಂಡು ಬಂದರೆ ಆ ಕಟ್ಟಡವನ್ನ ತೊರೆಯುವಂತೆ ತಿಳಿಸಿದ್ದೇವೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *