ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!

Public TV
2 Min Read

– ಜೂನ್ 4ರಿಂದ ಆನ್‍ಲೈನ್‍ನಲ್ಲಿ ಲಿಮಿಟೆಡ್ ಎಡಿಷನ್ ಬಾತ್ ಸೋಪ್ ಲಭ್ಯ
– 100 ಅದೃಷ್ಟಶಾಲಿಗಳಿಗೆ ಫ್ರೀ ಸೋಪ್‌!

ಹಾಲಿವುಡ್‌ನ (Hollywood) ಪ್ರಸಿದ್ಧ ನಟಿ ಸಿಡ್ನಿ ಸ್ವೀನಿ (27) (Sydney Sweeney) ಸ್ನಾನ ಮಾಡಿದ ನೀರಲ್ಲಿ ಸೋಪ್‌ (Soap) ತಯಾರಾಗುತ್ತಿದೆ! ಈ ಮಾಹಿತಿಯನ್ನು ಸ್ವತಃ ಸಿಡ್ನಿ ಸ್ವೀನಿ ಹಂಚಿಕೊಂಡಿದ್ದಾರೆ. ಸೋಪ್‌ ಬಿಡುಗಡೆಯಾಗುವ ದಿನಕ್ಕಾಗಿ ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ.

ನಟಿ ಬಾತ್‌ವಾಟರ್ ಬ್ಲಿಸ್ ಎಂಬ ಸೋಪ್‌ನ್ನು (Sydney’s Bathwater Bliss) ಪರಿಚಯಿಸುತ್ತಿದ್ದಾರೆ. ಇದು ಅವರ ಸ್ನಾನದ ನೀರಲ್ಲೇ ತಯಾರಾಗ್ತಿರೋದು ವಿಶೇಷ. ಡಾ. ಸ್ಕ್ವಾಚ್ ಎಂಬ ಸೋಪ್ ಕಂಪನಿಯೊಂದಿಗೆ ಅವರು ಈ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಸಿಡ್ನಿ ಸ್ವೀನಿ ಹಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿದ್ದು, ಅವರು ʻಮೇಡಮ್ ವೆಬ್ʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.

 

View this post on Instagram

 

A post shared by Dr. Squatch (@drsquatch)

ಸೋಪ್‌ ಬೆಲೆ, ಬಿಡುಗಡೆ ದಿನಾಂಕ, ಖರೀದಿಸೋದು ಹೇಗೆ?
ಈ ಸೋಪ್‌ನ ಬೆಲೆ 8 ಡಾಲರ್ ಆಗಿದ್ದು, ಕೇವಲ 5,000 ಪೀಸ್‌ ಮಾತ್ರ ತಯಾರಾಗಲಿವೆ. ಜೂನ್ 4 ರಿಂದ ಆನ್‌ಲೈನ್‌ನಲ್ಲಿ ಸೋಪ್ ಲಭ್ಯವಿರುತ್ತದೆ.

ಸೋಪ್‌ ಬಿಡುಗಡೆ ಬಗ್ಗೆ ಮೇ 29 ರಂದು ಇನ್ಸ್ಟಾದಲ್ಲಿ ಸಿಡ್ನಿ ಸ್ವೀನಿ ಮಾಹಿತಿ ಹಂಚಿಕೊಂಡಿದ್ದರು. ಪೋಸ್ಟ್‌ನಲ್ಲಿ ʻನನ್ನ ಸ್ನಾನದ ನೀರಲ್ಲೇ ಈ ಸೋಪ್‌ ತಯಾರಾಗುತ್ತದೆʼ ಎಂದು ಅವರು ಬರೆದುಕೊಂಡಿದ್ದರು. ಅಲ್ಲದೇ ಅತ್ಯಂತ ಸೀಮಿತ ಆವೃತ್ತಿಯ ಸೋಪ್, ಜೂನ್‌ 4 ರಂದು drsquatch.com ವೆಬ್‌ಸೈಟ್‌ನಲ್ಲಿ ನಲ್ಲಿ ಲಭ್ಯವಿರಲಿದೆ ಎಂದು ಬರೆದುಕೊಂಡಿದ್ದರು.

ಬಾತ್‌ವಾಟರ್ ಬ್ಲಿಸ್ ಸೋಪ್‌ನ ಸ್ಪೆಷಲ್‌ ಏನು ಗೊತ್ತಾ?
ಎಫ್ಫೋಲಿಯೇಟಿಂಗ್ ಸ್ಯಾಂಡ್, ಪೈನ್ ಮರದ ತೊಗಟೆಯ ಎಣ್ಣೆ ಮತ್ತು ಸಿಡ್ನಿ ಸ್ವೀನಿಯ ಸ್ನಾನದ ನೀರಿನಿಂದ ಈ ಸೋಪ್‌ ತಯಾರಗುತ್ತದೆ. ಕೇವಲ 5,000 ಸೋಪ್‌ ತಯಾರಿಸುವುದರಿಂದ, ಇವು ಅದೃಷ್ಟ ಇರುವ ಅಭಿಮಾನಿಗಳ ಪಾಲಿಗೆ ಮಾತ್ರ ಸಿಗಲಿವೆ. ಇನ್ನೂ 100 ಜನ ಅದೃಷ್ಟ ಶಾಲಿಗಳಿಗೆ ಕಂಪನಿ ಉಚಿತವಾಗಿ ಒಂದೊಂದು ಸೋಪ್‌ ನೀಡಲಿದೆ ಎಂದು ವರದಿಯಾಗಿದೆ.

Share This Article