ಜುಬಾ: ದಕ್ಷಿಣ ಸೂಡಾನ್‌ನಲ್ಲಿ ನಡೆಯುತ್ತಿರುವ ಯುಎನ್ ಮಿಷನ್‌ನಲ್ಲಿ (United Nations) ಉತ್ತಮ ಸೇವೆ ಸಲ್ಲಿಸಿದ ಬೆಂಗಳೂರು (Bengaluru) ಮೂಲದ ಮೇಜರ್ ಸ್ವಾತಿ ಶಾಂತಕುಮಾರ್ (Swathi Shanthakumar) ಅವರಿಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ ಲಭಿಸಿದೆ.
ಯುಎನ್ ಸೆಕ್ರೆಟರಿ ಜನರಲ್ ಅಂಟೋನಿಯೊ ಗುಟೆರೆಸ್ ಅವರು ಈ ಪ್ರಶಸ್ತಿ ಘೋಷಿಸಿದ್ದಾರೆ. ಸಮಾನ ಪಾಲುದಾರರು, ಶಾಶ್ವತ ಶಾಂತಿ ಎಂಬ ಯೋಜನೆಗಾಗಿ 2025 ರ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಯನ್ನು ಅವರು ಗೆದ್ದಿದ್ದಾರೆ. ವಿಶ್ವದಾದ್ಯಂತದ ಎಲ್ಲಾ ಯುಎನ್ ಶಾಂತಿಪಾಲನಾ ಮಿಷನ್‌ಗಳು ಮತ್ತು ಏಜೆನ್ಸಿಗಳಿಂದ ಬಂದ ನಾಮನಿರ್ದೇಶನಗಳ ಪೈಕಿ ಫೈನಲ್‌ಗೆ ನಾಲ್ಕು ತಂಡಗಳು ಆಯ್ಕೆಯಾಗಿದ್ದವು. ಈ ತಂಡಗಳ ಪೈಕಿ ಭಾರತೀಯ ತಂಡ ಅತಿ ಹೆಚ್ಚು ಮತಗಳನ್ನು ಪಡೆದು ವಿಜೇತವಾಗಿದೆ. ಇದನ್ನೂ ಓದಿ: ಆಪರೇಷನ್ ಹಾಕೈ | ಅಮೆರಿಕ ಏರ್‌ಸ್ಟ್ರೈಕ್ – ಸಿರಿಯಾದಲ್ಲಿ 36 ಐಸಿಸ್ ಉಗ್ರರ ನೆಲೆಗಳು ಉಡೀಸ್
ಮೇಜರ್ ಸ್ವಾತಿ ಅವರ ನೇತೃತ್ವದಲ್ಲಿ ಭಾರತೀಯ ತಂಡವು ಗ್ರಾಮೀಣ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಅಪಾರ ಕೊಡುಗೆ ನೀಡಿದೆ. ದೂರದ ಪ್ರದೇಶಗಳಲ್ಲಿ ಸಣ್ಣ-ದೊಡ್ಡ ಪೇಟ್ರೋಲಿಂಗ್, ನದಿ ಪ್ರದೇಶದ ಪೇಟ್ರೋಲ್ ಮತ್ತು ಡೈನಾಮಿಕ್ ಏರ್ ಪೇಟ್ರೋಲ್‌ಗಳನ್ನು ಯಶಸ್ವಿಯಾಗಿ ನಡೆಸಿ, ಸಂಘರ್ಷ ಪೀಡಿತ ದೇಶದಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತೆ ಒದಗಿಸಿದೆ. ಇದರಿಂದ ಮಹಿಳೆಯರ ಸಮುದಾಯದಲ್ಲಿ ಭಾಗವಹಿಸುವಿಕೆ ಹೆಚ್ಚಾಗಿ, ನಂಬಿಕೆ ಮತ್ತು ಸಂವಹನ ಬಲಗೊಂಡಿದೆ.
ಸದ್ಯ ದಕ್ಷಿಣ ಸುಡಾನ್‌ನಲ್ಲಿ ಸ್ವಾತಿ ಶಾಂತಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: Swabhiman Parv | ಸೋಮನಾಥನ ಸನ್ನಿಧಿಯಲ್ಲಿ ʻಓಂಕಾರʼ ಪಠಿಸಿದ ʻನಮೋʼ

