ವಿವಾಹ ವಯಸ್ಸು ನಿರ್ಣಯದಿಂದ ಹಿಂದೂಗಳ ಸಂಖ್ಯೆಗೆ ಕುತ್ತು- ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನ

Public TV
1 Min Read

ಉಡುಪಿ: ಮಹಿಳೆಯರ ವಿವಾಹದ ವಯಸ್ಸು 21ಕ್ಕೆ ಏರಿಸಿ ಕೇಂದ್ರ ಸರ್ಕಾರ ಮಾಡಿರುವ ನಿರ್ಣಯದ ವಿರುದ್ಧ ಸ್ವರ್ಣವಲ್ಲಿ ಸ್ವಾಮಿಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು. ಈ ನಿರ್ಧಾರ ಹಿಂದೂಗಳಿಗೆ ಅನ್ಯಾಯವಾಗುತ್ತದೆ ಎಂದು ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

ಉಡುಪಿಯ ಕೃಷ್ಣಮಠದ ವಿಶ್ವಾರ್ಪಣಂ ಧಾರ್ಮಿಕ ಸಭೆಯಲ್ಲಿ ಮಾತಮಾಡಿದ ಸ್ವಾಮೀಜಿ, ಕ್ರೈಸ್ತರಿಗೆ ಮುಸ್ಲಿಮರಿಗೆ ವಿವಾಹದ ಕಾನೂನು ಬೇರೆ ಇದೆ. ನೀವು ಮಾಡುತ್ತಿರುವ ಹೊಸ ನಿರ್ಣಯ ಹಿಂದೂಗಳಿಗೆ ಮಾತ್ರ ಯಾಕೆ? ಎಲ್ಲರಿಗೂ ಅನ್ವಯವಾಗುವ ರೀತಿ ನೀವು ಯಾಕೆ ಕಾನೂನು ಕಾಯ್ದೆ ಯಾಕೆ ರೂಪಿಸುತ್ತಿಲ್ಲ. ಎಲ್ಲರಿಗೆ ಸಮಾನ ಕಾಯ್ದೆ ಜಾರಿಗೆ ತನ್ನಿ ಅದಕ್ಕೆ ನಮ್ಮ ಪೂರ್ತಿ ಬೆಂಬಲವಿದೆ. ಮುಸ್ಲಿಮರ ಕಾನೂನಲ್ಲಿ ವಿವಾಹದ ವಯಸ್ಸು ಈಗಲೂ 15 ಇದೆ. ಈ ಕಾನೂನಿನ ಪ್ರಕಾರ ಮುಸ್ಲಿಮರ ಜನಸಂಖ್ಯೆ ಏರಿಕೆ ಪ್ರಮಾಣ ಜಾಸ್ತಿ ಇದೆ. ಹಿಂದೂಗಳ ಜನಸಂಖ್ಯೆ ಕಮ್ಮಿ ಇದೆ. ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಷ್ಟ್ರಮಟ್ಟದಲ್ಲಿ ಸಂತರು ಕಳವಳಗೊಂಡಿದ್ದಾರೆ. ನಮ್ಮ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಅಪಾಯ ಇದೆ. ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಿವಿ ಹಿಂಡಿದ್ದಾರೆ.

ಜಪಾನ್ ಬ್ರಿಟನ್ ಅಮೆರಿಕದಲ್ಲಿ ಮದುವೆಗೆ 16ರಿಂದ 18 ವಯೋಮಿತಿ ಇದೆ. ಸರ್ಕಾರ ಕೊಡುವ ವೈಜ್ಞಾನಿಕ ಕಾರಣಗಳು ಬಗ್ಗೆ ನಮಗೆ ಒಪ್ಪಿಗೆ ಇದೆ ಆದರೆ ಹೆಣ್ಣುಮಕ್ಕಳಿಗೆ ತೊಂದರೆ ಆಗಬಾರದು. ತಡವಾದ ವಿವಾಹದಿಂದ ವಿಚ್ಛೇದನ ಜಾಸ್ತಿಯಾಗಿದೆ. ಕುಟುಂಬ ವ್ಯವಸ್ಥೆ ಶಿಥಿಲಗೊಂಡಿದೆ. ವಿವಾಹದ ವಯಸ್ಸನ್ನು ಸರ್ಕಾರ ಏರಿಕೆ ಮಾಡಿರುವುದರಿಂದ ಇನ್ನಷ್ಟು ಸಮಸ್ಯೆಗಳು ಬಾಧಿಸಲಿದೆ ಎಂದರು. ಇದನ್ನೂ ಓದಿ: ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ

Share This Article
Leave a Comment

Leave a Reply

Your email address will not be published. Required fields are marked *