ಸ್ವರಾ ಭಾಸ್ಕರ್ ಮತ್ತೊಂದು ಮದುವೆ: ಆಹ್ವಾನ ಪತ್ರಿಕೆ ವಿಶೇಷತೆ ಏನು?

Public TV
1 Min Read

ತ್ತೀಚೆಗಷ್ಟೇ ನಟಿ ಸ್ವರಾ ಭಾಸ್ಕರ್  (Swara Bhaskar) ಸರಳವಾಗಿ ವಿವಾಹವಾಗಿದ್ದರು. ಅದೊಂದು ಅನ್ಯ ಧರ್ಮೀಯ ಮದುವೆಯಾಗಿದ್ದರಿಂದ ಅತ್ಯಂತ ಸರಳವಾಗಿತ್ತು. ಆದರೆ, ಸ್ವರಾ ಕುಟುಂಬಕ್ಕೆ ಈ ಮದುವೆ (Marriag) ಇಷ್ಟವಾಗಿಲ್ಲ. ಹಾಗಾಗಿ ಅದ್ಧೂರಿಯಾಗಿ ಮತ್ತೆ ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹೊಸ ರೀತಿಯಲ್ಲಿ ಮದುವೆ ಕಾರ್ಡ್ (Card) ಅನ್ನೂ ಅವರು ರೆಡಿ ಮಾಡಿಕೊಂಡಿದ್ದಾರೆ.

ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmed) ಅವರನ್ನು ಮದುವೆ ಆಗುವ ಮೂಲಕ ಅಚ್ಚರಿಯ ಸುದ್ದಿಯನ್ನು ನೀಡಿದ್ದರು. ಅನ್ಯ ಧರ್ಮೀಯರನ್ನು ಮದುವೆಯಾದ ಕಾರಣದಿಂದಾಗಿ ಸಾಕಷ್ಟು ಟ್ರೋಲ್ ಗೂ ಅವರು ಗುರಿಯಾಗಿದ್ದರು. ಫಹಾದ್ ಅವರನ್ನು ಮದುವೆಯಾದ ಕಾರಣದಿಂದಾಗಿ ಟೀಕೆಯನ್ನೂ ಅವರು ಎದುರಿಸಬೇಕಾಯಿತು. ಆದರೂ, ಸ್ವರ ತಲೆಕೆಡಿಸಿಕೊಂಡಿಲ್ಲ. ಈ ನಡುವೆ ಮತ್ತೊಂದು ಮದುವೆ ಸಂಭ್ರಮಕ್ಕೆ ಸ್ವರಾ ಕುಟುಂಬ ಸಜ್ಜಾಗಿದೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

ಮಾರ್ಚ್ 15 ಮತ್ತು 16ರಂದು ದೆಹಲಿಯಲ್ಲಿ ಎರಡು ದಿನಗಳ ಕಾಲ ಸ್ವರಾ ಮತ್ತು ಫಹಾದ್ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕಾಗಿ ಈಗಿನಿಂದಲೇ ಅವರ ಕುಟುಂಬ ಸಿದ್ಧತೆಯಲ್ಲಿ ತೊಡಗಿದೆ. ಈ ಮದುವೆಯಾಗಿಯೇ ಪ್ರತೀಕ್ ವಿನ್ಯಾಸಗೊಳಿಸಿರುವ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಮಗಳ ಮದುವೆಗೆ ನಿಮ್ಮ ಉಪಸ್ಥಿತಿ ಇರಲಿ ಎಂದು ಬರೆಯಿಸಲಾಗಿದೆ. ಅಲ್ಲದೇ, ಅಳಿಯನನ್ನು ನಮ್ಮ ಕುಟುಂಬ ಅಭಿನಂದಿಸುತ್ತದೆ ಎಂದೂ ಬರಹ ಇದೆ. ಸ್ವರಾ ಕುಟುಂಬವು ತಮ್ಮ ಆಪ್ತರಿಗೆ ಇದೇ ಮದುವೆಯ ಕಾರ್ಡ್ ಅನ್ನು ನೀಡಿದೆ.

ಸದಾ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸ್ವರಾ, ಮೊನ್ನೆಯಷ್ಟೇ ತಮ್ಮ ಮೊದಲ ರಾತ್ರಿಗಾಗಿ ಸಿದ್ಧವಾಗಿದ್ದ ಮಂಚದ ಫೋಟೋವನ್ನು ಹಂಚಿಕೊಂಡಿದ್ದರು. ಆ ಮಂಚವನ್ನು ಸಿಂಗರಿಸಿದ್ದಕ್ಕಾಗಿ ಅವರ ತಾಯಿಗೆ ಧನ್ಯವಾದಗಳನ್ನೂ ಅವರು ಹೇಳಿದ್ದರು. ಮದುವೆಯ ಮಹತ್ವವನ್ನೂ ಅವರು ಹಂಚಿಕೊಂಡಿದ್ದರು. ಈ ಕಾರಣಕ್ಕಾಗಿ ಮತ್ತೆ ಅವರು ವಿವಾದದ ಕೇಂದ್ರಬಿಂದುವಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *