ಪಾನಮತ್ತರಾಗಿ ಜನರಿಂದ ಬಾಸುಂಡೆ ಬರುವಂತೆ ಹೊಡೆಸಿಕೊಂಡ ವಿಜಯಪುರದ ಸ್ವಾಮೀಜಿಗೆ ಪಟ್ಟಾಭಿಷೇಕ

Public TV
1 Min Read

ಧಾರವಾಡ: ಇತ್ತೀಚಿಗೆ ಪಾನಮತ್ತನಾಗಿ ಸಾರ್ವಜನಿಕರಿಂದ ಒದೆ ತಿಂದಿದ್ದ ಸ್ವಾಮೀಜಿಯೊಬ್ಬರಿಗೆ ಮಠವೊಂದು ಪಟ್ಟಾಭಿಷೇಕ ಮಾಡಲು ಮುಂದಾಗಿದೆ.

ವಿಜಯಪುರದ ಷಣ್ಮುಖಾರೂಢ ಮಠದ ಕಿರಿಯ ಸ್ವಾಮಿ ಕುಮಾರ ದೇವ್ರು ಕೆಲವು ತಿಂಗಳ ಹಿಂದೆ ಸಾರ್ವಜನಿಕರಿಂದ ಬಾಸುಂಡೆ ಬರುವ ಹಾಗೆ ಹೊಡೆತಗಳನ್ನು ತಿಂದಿದ್ದರು. ಕುಮಾರ ದೇವ್ರು ಸ್ವಾಮೀಜಿ ವಿಜಯಪುರದ ಕಡೆ ಕಾರಿನಲ್ಲಿ ಹೋಗುವಾಗ ಧಾರವಾಡದಲ್ಲಿ ಸಿಕ್ಕಿಬಿದ್ದಿದ್ರು. ಕಾರಣ ಸ್ವಾಮೀಜಿ ಕಾರನ್ನ ಎರ್ರಾಬಿರ್ರಿಯಾಗಿ ಓಡಿಸಿದ್ರು. ಆಗ ಸಾರ್ವಜನಿಕರು ಕಾರು ತಪಾಸಣೆ ಮಾಡಿದಾಗ ಕಾರಿನಲ್ಲಿ ಬಿಯರ್ ಬಾಟೆಲ್‍ಗಳು ಸಿಕ್ಕಿದ್ವು. ಇದನ್ನು ನೋಡಿದ ಜನ, ಸ್ವಾಮೀಜಿಯ ಪಂಚೆ ಬಿಚ್ಚಿ ಬಾಸುಂಡೆ ಬರೋ ಹಾಗೆ ಬಾರಿಸಿ ಓಡಿಸಿದ್ರು.

ಈ ಎಣ್ಣೆ ಸ್ವಾಮೀಜಿಗೆ ಈಗ ಹುಬ್ಬಳ್ಳಿಯ ಆರೂಢ ಮಠದ ಪೀಠಾಧಿಪತಿ ಆಗ್ತಿದ್ದಾರೆ. ಆಗಸ್ಟ್ 13ರಂದು ಅಥಣಿಯಲ್ಲಿ ಪಟ್ಟಾಭಿಷೇಕ ಮಾಡಲಾಗ್ತಿದ್ದು, ಅಥಣಿ ಶಾಸಕ ಲಕ್ಷ್ಮಣ ಸವದಿ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ವಿಜಯಪುರದ ಷಣ್ಮುಖಾರೂಢ ಮಠದ ಕಿರಿಯ ಸ್ವಾಮಿ ಕುಮಾರ ದೇವ್ರು 2015ರಲ್ಲಿ ಅಭಿನವ ಸಿದ್ಧಾರೂಢ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮದ್ಯವ್ಯಸನಿ ಖಾವಿಧಾರಿಗೆ ಬಿತ್ತು ಗೂಸಾ- ಪಂಚೆಬಿಟ್ಟು ಎದ್ನೋ ಬಿದ್ನೋ ಅಂತಾ ಓಡಿದ ಕಳ್ಳ ಸ್ವಾಮಿ

ಕುಮಾರ ದೇವ್ರು ಸ್ವಾಮಿಜಿಗೆ ಪಟ್ಟ ಕಟ್ಟುವುದಕ್ಕೆ ಕೆಲವು ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಲಜ್ಜೆಗೆಟ್ಟ ಸ್ವಾಮೀಜಿಗೆ ಸಿದ್ಧಾರೂಢರ ಹೆಸರು ಇಟ್ಟಿದ್ದೇ ತಪ್ಪಾಗಿದೆ. ಉತ್ತಮ ಪರಂಪರೆ ಇರುವ ಮಠಕ್ಕೆ ಇಂತಹ ಸ್ವಾಮೀಜಿಯನ್ನು ತರಬೇಡಿ ಎಂಬ ಕೂಗು ಜೋರಾಗಿದೆ.

https://www.youtube.com/watch?v=cwFX5NvYWLA

 

Share This Article
Leave a Comment

Leave a Reply

Your email address will not be published. Required fields are marked *