ಸ್ವಾಮೀಜಿ ನಕ್ಸಲೈಟ್ ಆಗ್ಬೇಕಿತ್ತು, ದುರ್ದೈವ ಖಾವಿ ಹಾಕಿದ್ದಾರೆ: ಯತ್ನಾಳ್ ಕಿಡಿ

Public TV
1 Min Read

ಚಾಮರಾಜನಗರ: ಹಿಂದೂ ಧರ್ಮದ ಆಧಾರದ ಮೇಲೆ ನಾವು ವೀರಶೈವ ಲಿಂಗಾಯತರಾಗಿದ್ದೇವೆ. ಪಾಪ ಆ ಸ್ವಾಮೀಜಿ ನಕ್ಸಲೈಟ್ (Naxalite) ಆಗಬೇಕಿತ್ತು. ಕಮ್ಯೂನಿಸ್ಟ್ (Communist) ಆಗಿದ್ದಾರೆ. ದುರ್ದೈವ ಅವರು ಖಾವಿ ಹಾಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.

ಚಾಮರಾಜನಗರ (Chamarajanagar) ಜಿಲ್ಲೆ ಬರ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂಬ ಸಾಣೇಹಳ್ಳಿ ಶ್ರೀ (Sanehalli Shree) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಕೇಜ್ರಿವಾಲ್ ಪತ್ನಿಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್

ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಮುಂದಿನ ಬಾರಿಯಾದರೂ ಕೊಡಲಿ ಎಂಬುದು ಅವರ ಉದ್ದೇಶವಾಗಿದೆ. ಈಗಾಗಲೇ ಒಬ್ಬ ಸ್ವಾಮೀಜಿಗೆ ಕೊಟ್ಟಿದ್ದಾರೆ. ಪ್ರಶಸ್ತಿ, ಜೀವನ ವೆಚ್ಚ ಎಲ್ಲವನ್ನೂ ಕೊಡುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮೋದಿಗೆ ನಾಚಿಕೆ ಆಗಬೇಕು: ಹೆಚ್‌ಕೆ ಪಾಟೀಲ್ ಕಿಡಿ

ಹಿಂದೂ ಧರ್ಮದ ವಿರುದ್ಧ ಮಾತನಾಡಲೂ ಪೇಯ್ಡ್ ಸಾಹಿತಿಗಳಿದ್ದರೆ, ಪೇಯ್ಡ್ ಭಗವಾಧ್ವಜ ಹಾಕಿಕೊಂಡ ಕಳ್ಳರಿದ್ದಾರೆ. ಹಿಂದೂ ವಿರೋಧಿ ಹೇಳಿಕೆ ಕೊಟ್ಟರೆ ಮಠಕ್ಕೆ ಕೋಟ್ಯಂತರ ರೂ. ಅನುದಾನ ಕೊಡುತ್ತಾರೆ ಎಂಬ ನಂಬಿಕೆ. ಹೀಗಾಗಿ ಹಿಂದೂ ಸನಾತನ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರಗಿಟ್ಟಿದ್ದಾರೆ: ರೇಣುಕಾಚಾರ್ಯ ಅಸಮಾಧಾನ

Share This Article