ಭಾರತ ಹಿಂದೂ ರಾಷ್ಟ್ರವಲ್ಲ, ಆಗಿರಲೂ ಇಲ್ಲ: RSS ವಿರುದ್ಧ ಎಸ್‌ಪಿ ನಾಯಕ ಕಿಡಿ

Public TV
2 Min Read

ನವದೆಹಲಿ: ಭಾರತ ಎಂದಿಗೂ ಹಿಂದೂ ರಾಷ್ಟ್ರವಲ್ಲ, ಹಿಂದೂ ರಾಷ್ಟ್ರ ಆಗಿರಲೂ ಇಲ್ಲ ಎಂದು ಸಮಾಜವಾದಿ ಪಕ್ಷದ (SP) ನಾಯಕ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya), ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕಿಡಿ ಕಾರಿದ್ದಾರೆ.

ಭಾರತವು ಹಿಂದೂ ರಾಷ್ಟ್ರ ಎಂದು ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಟ್ವೀಟ್‌ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.

ಭಾರತ ಹಿಂದೂ ರಾಷ್ಟ್ರ ಅಲ್ಲ, ಅದು ಎಂದಿಗೂ ಹಿಂದೂ ರಾಷ್ಟ್ರ ಆಗಿರಲಿಲ್ಲ. ಭಾರತವು ಅಂತರ್ಗತವಾಗಿ ಒಂದು ಬಹುತ್ವದ ದೇಶವಾಗಿದೆ. ನಮ್ಮ ಸಂವಿಧಾನವು ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಆಧಾರದಲ್ಲಿ ರಚನೆಯಾಗಿದೆ. ಭಾರತದಲ್ಲಿ ಇರುವ ಎಲ್ಲಾ ಜನರೂ ಭಾರತೀಯರೇ. ನಮ್ಮ ಭಾರತೀಯ ಸಂವಿಧಾನವು ಎಲ್ಲಾ ಧರ್ಮ, ನಂಬಿಕೆಗಳು, ಪಂಥ ಹಾಗೂ ಸಂಸ್ಕೃತಿಗಳ ಪ್ರಾತಿನಿಧಿತ್ವ ಪ್ರತಿನಿಧಿಸುತ್ತದೆ ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮೋಹನ್‌ ಭಾಗವತ್ ಹೇಳಿದ್ದೇನು?
ನಾಗಪುರದಲ್ಲಿ ಮಧುಕರ ಭವನ ಉದ್ಘಾಟಿಸಿ ಮಾತನಾಡಿದ್ದ ಮೋಹನ್ ಭಾಗವತ್, ಭಾರತವು ಒಂದು ಹಿಂದೂ ರಾಷ್ಟ್ರ. ಎಲ್ಲಾ ಭಾರತೀಯರೂ ಹಿಂದೂಗಳು ಮತ್ತು ಹಿಂದೂಗಳು ಎಲ್ಲಾ ಭಾರತೀಯರನ್ನ ಪ್ರತಿನಿಧಿಸುತ್ತಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ʻಐರಾವತʼಬೆಡಗಿ – ಊರ್ವಶಿ ರೌಟೇಲಾ ಕಾಲೆಳೆದ ಟ್ರೋಲ್‌ ಗೆಳೆಯರು

ಹಿಂದೂಸ್ತಾನವು ಒಂದು ಹಿಂದೂ ದೇಶ ಮತ್ತು ಇದು ವಾಸ್ತವ. ಸೈದ್ಧಾಂತಿಕವಾಗಿ, ಎಲ್ಲಾ ಭಾರತೀಯರೂ ಹಿಂದೂಗಳು ಮತ್ತು ಹಿಂದೂಗಳು ಎಂದರೆ ಭಾರತೀಯರು. ಭಾರತದಲ್ಲಿ ಇಂದು ಇರುವವರೆಲ್ಲರೂ ಹಿಂದೂ ಸಂಸ್ಕೃತಿಗೆ, ಹಿಂದೂ ಪೂರ್ವಜರಿಗೆ ಮತ್ತು ಹಿಂದೂ ಭೂಮಿಗೆ ಸಂಬಂಧಿಸಿದವರು. ಇದಕ್ಕಿಂತ ಬೇರೇನೂ ಅಲ್ಲ ಎಂದು ತಿಳಿಸಿದ್ದರು.

ಅಸ್ಸಾಂನ ಗುವಾಹಟಿಯಲ್ಲಿನ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಭಾಗವತ್, ಇಂಡಿಯಾ ಹೆಸರಿನ ಬದಲು ದೇಶವನ್ನ ಭಾರತ ಎಂಬ ಹೆಸರಿನಿಂದ ಕರೆಯಬೇಕು. ಏಕೆಂದರೆ ಭಾರತ ಎನ್ನುವುದು ಬಹಳ ಪುರಾತನ ಕಾಲದಿಂದ ಇದೆ ಅಂತ ಹೇಳಿದ್ದರು. ಇದನ್ನೂ ಓದಿ: Asia Cup 2023: ಕೈಕೊಟ್ಟ ಕೊಹ್ಲಿ, ರೋಹಿತ್‌, ಗಿಲ್‌ – ಪಾಕಿಸ್ತಾನಕ್ಕೆ 267 ರನ್‌ ಗುರಿ ನೀಡಿದ ಭಾರತ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್