ನಿಗೂಢ ಸ್ಫೋಟ | ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
1 Min Read

ಬೆಂಗಳೂರು: ನಗರದ (Bengaluru) ಆಡಗೊಡಿಯಲ್ಲಿ (Adugodi) ಸಂಭವಿಸಿದ ಸ್ಫೋಟದಲ್ಲಿ (Cylinder Explosion) ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದ್ದಾರೆ.

ಸಿದ್ದರಾಮಯ್ಯ ಅವರು ಸ್ಪೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಕಸ್ತೂರಮ್ಮ ಎಂಬುವರ ಮನೇಲಿ ಈ ಸ್ಫೋಟ ಸಂಭವಿಸಿದೆ. ವರಾಂಡ ರೀತಿಯ ಮನೆ ಆಗಿದ್ದರಿಂದ ಎಲ್ಲಾ ಮನೆಗಳು ಬಿದ್ದಿವೆ. ಹಾನಿಯಾದ ಮನೆ ರಿಪೇರಿಗೆ ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಬೆಂಗಳೂರು | ನಿಗೂಢ ಸ್ಫೋಟ – ಬಾಲಕ ಸಾವು, 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮುಬಾರಕ್ ಎಂಬ ಹುಡುಗ ಸಾವನ್ನಪ್ಪಿದ್ದಾನೆ. 9 ಜನರಿಗೆ ಗಾಯಗಳಾಗಿವೆ. ಕಸ್ತೂರಮ್ಮಗೆ ಜಾಸ್ತಿ ಸುಟ್ಟ ಗಾಯಗಳಾಗಿದ್ದು, ಆಕೆಯ ಚಿಕಿತ್ಸೆಯನ್ನು ಸರ್ಕಾರ ಭರಿಸುತ್ತದೆ. ಪಕ್ಕದ ಮನೆಯವರ ಕಟ್ಟಡಗಳಿಗೂ ಹಾನಿಯಾಗಿದೆ. ಇದರ ಬಗ್ಗೆಯೂ ಗಮನಹರಿಸಲಾಗುತ್ತದೆ ಎಂದರು.

ಘಟನೆಗೆ ಅಸಲಿ ಕಾರಣ ಗೊತ್ತಾಗಿಲ್ಲ. ಸಿಲಿಂಡರ್ ಬ್ಲಾಸ್ಟ್ ಎನ್ನಲಾಗ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಜೈಲಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗದ ದರ್ಶನ್‌, ಪ್ರಜ್ವಲ್‌ ರೇವಣ್ಣ

Share This Article