ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ

Public TV
2 Min Read

ಕ್ಯಾನ್ಬೆರಾ: ನೆದರ್‌ಲ್ಯಾಂಡ್ (Netherland) ವಿರುದ್ಧ ಸ್ಫೋಟಕ ಅರ್ಧಶತಕ ಗಳಿಸಿದ ಟೀಂ ಇಂಡಿಯಾ (Team India) ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಪಾಕಿಸ್ತಾನದ (Pakistan) ಓಪನರ್ ಮೊಹಮ್ಮದ್ ರಿಜ್ವಾನ್ (Mohammad Rizwan) ದಾಖಲೆಯನ್ನು ಸರಿಗಟ್ಟಿದ್ದು, ಈ ವರ್ಷದಲ್ಲಿ ಅತಿಹೆಚ್ಚು ರನ್‌ಗಳಿದ ಮೊದಲ ಆಟಗಾರ ಎನ್ನಿಸಿಕೊಂಡಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ (Australia) ವಿರುದ್ಧದ T20 ಸರಣಿಯಲ್ಲೂ ಅಬ್ಬರಿಸಿದ ಸೂರ್ಯಕುಮಾರ್ ಐಸಿಸಿ ಟಿ20 (ICC T20) ರ‍್ಯಾಂಕಿಂಗ್‌ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದರು. ಅಲ್ಲದೇ 573 ಎಸೆತಗಳಲ್ಲಿ ವೇಗದ 1 ಸಾವಿರ ರನ್ ಪೂರೈಸಿದ ಖ್ಯಾತಿ ಗಳಿಸಿದ್ದರು. ಇದೀಗ ಮತ್ತೊಮ್ಮೆ ಸ್ಪೋಟಕ ಅರ್ಧ ಶತಕ (25 ಎಸೆತಗಳಲ್ಲಿ 50 ರನ್) ಸಿಡಿಸುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ನನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಇದನ್ನೂ ಓದಿ: T20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಸೂರ್ಯ

ಪ್ರಸ್ತುತ ವರ್ಷದಲ್ಲಿ 19 ಇನ್ನಿಂಗ್ಸ್‌ಗಳನ್ನಾಡಿರುವ ಮೊಹಮ್ಮದ್ ರಿಜ್ವಾನ್ 124 ಸ್ಟ್ರೈಕ್‌ರೇಟ್‌ ನಲ್ಲಿ 662 ಎಸೆತಗಳಿಗೆ 825 ರನ್‌ಗಳಿಸಿ ಈ ವರ್ಷದ ಟಿ20 ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಮೊದಲ ಸ್ಥಾನದಲ್ಲಿದ್ದರು. ಆದರೆ ಸತತ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಸೂರ್ಯಕುಮಾರ್ 25 ಇನ್ನಿಂಗ್ಸ್‌ಗಳನ್ನು ಎದುರಿಸಿದರೂ 184.86 ಸ್ಟ್ರೈಕ್‌ರೇಟ್‌ನಲ್ಲಿ 469 ಎಸೆತಗಳಲ್ಲೇ 867 ರನ್ ಬಾರಿಸಿ ರಿಜ್ವಾನ್ ಅವರನ್ನು ಹಿಂದಿಕ್ಕಿದ್ದರು. ಇದನ್ನೂ ಓದಿ: ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

ಸೂರ್ಯನ ಈ ದಾಖಲೆಯಲ್ಲಿ 1 ಶತಕ, 7 ಅರ್ಧಶತಕ, 77 ಬೌಂಡರಿ ಹಾಗೂ 52 ಸಿಕ್ಸರ್‌ಗಳು ಸೇರಿವೆ. ಇದರಿಂದಾಗಿ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಸುವ ಸೂರ್ಯ ಓಪನರ್ ರಿಜ್ವಾನ್‌ಗಿಂತಲೂ ಉತ್ತಮವಾಗಿ ಆಡಿದ್ದಾರೆ ಎಂಬುದನ್ನು ತೋರಿಸಿದೆ.

ಗುರುವಾರ ನೆದರ್‌ಲ್ಯಾಂಡ್ (Netherland) ವಿರುದ್ಧ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. 180 ರನ್‌ಗಳ ಗುರಿ ಬೆನ್ನತ್ತಿದ್ದ ನೆದರ್‌ಲ್ಯಾಂಡ್ ಟೀಂ ಇಂಡಿಯಾದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *