ಶರಣಾದ 6 ನಕ್ಸಲರು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌

Public TV
0 Min Read

ಬೆಂಗಳೂರು: ಶಸ್ತ್ರ ತ್ಯಾಗ ಮಾಡಿ ಸಿಎಂ ಮುಂದೆ ಶರಣಾಗತರಾದ 6 ನಕ್ಸಲರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಹೈ ಸೆಕ್ಯೂರಿಟಿ ಬ್ಯಾರಕ್‌ಗೆ ಪುರುಷ ನಕ್ಸಲರು ಹಾಗೂ ಮಹಿಳಾ ಬ್ಯಾರಕ್‌ಗೆ ಮಹಿಳಾ ನಕ್ಸಲರು ಶಿಫ್ಟ್‌ ಆಗಿದ್ದಾರೆ. ಹೈ ಸೆಕ್ಯೂರಿಟಿ ಫೋರ್ಸ್‌ನಲ್ಲಿ ಪೊಲೀಸರು ಕರೆತಂದರು.

ಮೂರು ಕೆಎಸ್‌ಆರ್‌ಪಿ, ಐದಕ್ಕೂ ಹೆಚ್ಚು ವಾಹನಗಳ ಹೈ ಸೆಕ್ಯೂರಿಟಿ ಇತ್ತು. ಬಿಗಿ ಭದ್ರತೆಯೊಂದಿಗೆ ಆರು ಮಂದಿ ಶರಣಾಗತ ನಕ್ಸಲರು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

ಶರಣಾಗತರಾದ ನಕ್ಸಲರನ್ನು ಗುರುವಾರ ಮಧ್ಯಾಹ್ನ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. 6 ಮಂದಿಗೂ ಜ.30 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶಿಸಿದೆ.

Share This Article