ಸುರ್ಜೇವಾಲಾ ಇದ್ದ ಸಭೆ ಅಧಿಕೃತ ಅಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Public TV
2 Min Read

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಅವರು ಇದ್ದ ಸಭೆ ಅಧಿಕೃತ ಅಲ್ಲ ಎಂದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ನಡೆದಿರುವುದು ಬಿಬಿಎಂಪಿ (Meeting With BBMP Officers) ಅಧಿಕಾರಿಗಳ ಜೊತೆಗಿನ ಸಭೆ ಅಲ್ಲ. ಸುರ್ಜೇವಾಲಾ ಅಧಿಕೃತ ಸಭೆ ನಡೆಸಿಲ್ಲ. ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ ಅಷ್ಟೇ ಎಂದು ಹೇಳಿದರು.

ಡಿಸಿಎಂ ಪಾಲ್ಗೊಂಡಿದ್ದ ಸಭೆ ಅದು. ಚುನಾವಣೆ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯಲಾಗಿತ್ತು. ಕುಮಾರಸ್ವಾಮಿ (HD Kumaraswamy) ಸುಮ್ನೆ ಆರೋಪ ಮಾಡುತ್ತಾರೆ. ಸುರ್ಜೇವಾಲಾ ಅವರು ಅಧಿಕಾರಿಗಳ ಸಭೆ ಕರೆಯೋಕ್ಕಾಗುತ್ತಾ..?, ಬಿಜೆಪಿಯವರು ಬೇಕಾದರೆ ರಾಜ್ಯಪಾಲರಿಗೆ ದೂರು ಕೊಡಲಿ ಎಂದು ತಿಳಿಸಿದರು.  ಇದನ್ನೂ ಓದಿ: BBMP ಅಧಿಕಾರಿಗಳ ಜೊತೆ ಸುರ್ಜೇವಾಲ ಸಭೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ: ಅಶ್ವಥ್ ನಾರಾಯಣ್

ಇದೇ ವೇಳೆ ಪ್ರತಾಪ್ ಸಿಂಹ (Pratap Simha) ವಿರುದ್ಧ ಕಿಡಿಕಾರಿದ ಸಿಎಂ, ಯಾರು ಹೊಂದಾಣಿಕೆ ರಾಜಕೀಯ ಮಾಡ್ತಿರೋರು ಅಂತ ಪ್ರತಾಪ್ ಸಿಂಹ ಹೇಳಲಿ. ಯಾರು ಅವರು ಹೊಂದಾಣಿಕೆ ರಾಜಕೀಯ ಮಾಡ್ತಿರೋರು..? ತನಿಖೆ ಮಾಡಿಸಿ ಅಂತ ಈ ಪ್ರತಾಪ್ ಸಿಂಹ ಹೇಳಿದ್ನಾ?, ಪ್ರತಾಪ್ ಸಿಂಹ ಎಳಸು ಎಂದರು.

ಬಿಬಿಎಂಪಿ ಸಭೆ: ಮಂಗಳವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿದ್ರು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪಾಲ್ಗೊಂಡಿದ್ದರು. ಇದರ ಫೋಟೋವನ್ನು ಜಮೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಸಭೆಯಲ್ಲಿ ಸುರ್ಜೇವಾಲಾ ಇರುವುದನ್ನು ಕೂಡ ಉಲ್ಲೇಖಿಸಿದ್ದರು. ಈ ಫೋಟೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇತ್ತ ಆಗಬಹುದು ಎಂಬ ಕಾರಣಕ್ಕೆ ಗೌಪ್ಯತೆ ಕಾಪಾಡಿಕೊಂಡಿದ್ದ ಸಭೆಯ ಫೋಟೋ ಲೀಕ್ ಮಾಡಿದ್ದ ಜಮೀರ್ ವಿರುದ್ಧ ಸುರ್ಜೇವಾಲಾ ಆಕ್ರೋಶ ಹೊರಹಕಿದ್ದರು. ಕೂಡಲೇ ಜಮೀರ್ ಟ್ವಿಟ್ಟರ್‍ನಿಂದ ಫೋಟೋ ಡಿಲೀಟ್ ಮಾಡಿದ್ದರು. ಇತ್ತ ಡಿಕೆಶಿ ಮೀಟಿಂಗ್ ಇರಲಿಲ್ಲ ಎಂದಿದ್ದು, ಮತ್ತಷ್ಟು ಟೀಕೆಗೆ ಕಾಂಗ್ರೆಸ್ ಗುರಿಯಾಗಿದೆ.

 

Share This Article