ಶಸ್ತ್ರ ಚಿಕಿತ್ಸೆ ಎಫೆಕ್ಟ್ : ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ನಿಧನ

Public TV
1 Min Read

ಟ್ರಾನ್ಸಿಲ್ ತೆಗೆದುಹಾಕಲು ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ವಿದೇಶಿ ಮಾಧ್ಯಮಗಳ ಪ್ರಕಾರ ಟ್ರಾನ್ಸಿಲ್ ತಗೆದುಹಾಕುವ ಶಸ್ತ್ರ ಚಿಕಿತ್ಸೆ ನಂತರ ಅವರು ಕೋಮಾಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ತೀವ್ರ ರಕ್ತಸಾವ್ರ ಆದ ಕಾರಣಕ್ಕಾಗಿ ಏಪ್ರಿಲ್ 4 ರಂದು ಅವರಿಗೆ ಹೃದಯಾಘಾತ ಕೂಡ ಆಗಿತ್ತು ಎನ್ನಲಾಗುತ್ತಿದೆ.

ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಆಗಿದ್ದರಿಂದ, ಅವರು ಎರಡು ತಿಂಗಳಿಂದ ಕೋಮಾದಲ್ಲಿ ಇದ್ದರಂತೆ. ಏಪ್ರಿಲ್ 4 ರಂದು ಹೃದಯಾಘಾತವಾದ ನಂತರ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ಅವರನ್ನು ಉಳಿಸಿಕೊಳ್ಳಲು ವೈದ್ಯರು ಭಾರೀ ಕಸರತ್ತು ನಡೆಸಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಲಿವುಡ್ ಗೆ ನಿರ್ದೇಶಕ ಹರಿಸಂತು ಎಂಟ್ರಿ : ಜುಲೈನಿಂದ ಲಂಡನ್ ನಲ್ಲಿ ಶೂಟಿಂಗ್

ಗ್ಲೇಸಿ ಕೊರಿಯಾ 2018ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಆಗಿದ್ದವರು. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲೂ ಅವರು ಭಾಗಿಯಾಗಿದ್ದರು. ಕಡಿಮೆ ಸಮಯದಲ್ಲೇ ಸೌಂದರ್ಯ ಲೋಕದಲ್ಲಿ ಹೆಸರು ಮಾಡಿದ್ದ ಅವರಿಗೆ ಈಗ ಕೇವಲ 27 ವರ್ಷ ವಯಸ್ಸು ಮಾತ್ರ.

Live Tv

Share This Article
Leave a Comment

Leave a Reply

Your email address will not be published. Required fields are marked *