ಗರ್ಲ್‍ಫ್ರೆಂಡ್ ರೇಪ್ ಮಾಡಿ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ ಹಾಕಿದ ವಿವಾಹಿತ!

Public TV
1 Min Read

ಗಾಂಧಿನಗರ: ಸೂರತ್‍ (Surat) ನಲ್ಲಿ ವ್ಯಕ್ತಿಯೊಬ್ಬ ತನ್ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ನಿಕುಂಜ್ ಕುಮಾರ್ ಅಮೃತ್ ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಆದರೆ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಆರೋಪಿಗಳು ಆಕೆಯ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ (Chilli Powder) ಹಾಕಿ ವಿಕೃತಿಯನ್ನು ಕೂಡ ಮೆರೆದಿದ್ದು, ಸದ್ಯ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಕುಂಜ್‍ಗೆ ಈಗಾಗಲೇ ಮದುವೆಯಾಗಿರುವ ಸತ್ಯವನ್ನು ಆತ ತನ್ನ ಗರ್ಲ್ ಫ್ರೆಂಡ್‍ಗೆ ಹೇಳಿರಲಿಲ್ಲ. ಆದರೆ ಕೆಲ ದಿನಗಳ ಬಳಿಕ ಆತನ ವೈವಾಹಿಕ ಸ್ಥಿತಿಯ ಬಗ್ಗೆ ಗೆಳತಿಗೆ ತಿಳಿದಾಗ, ಇಬ್ಬರ ಮಧ್ಯೆ ಜಗಳ ನಡೆದಿದೆ. ಅಲ್ಲದೆ ಯುವತಿ, ಪಟೇಲ್‍ನಿಂದ ದೂರವಿರಲು ನಿರ್ಧರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಕೆಲವೇ ತಿಂಗಳಲ್ಲಿ ರಾಜಕೀಯ ಬದಲಾವಣೆ ಆಗಲಿದೆ: ಹೆಚ್‌ಡಿಕೆ ಭವಿಷ್ಯ

ಆಕೆಯ ನಿರ್ಧಾರದಿಂದ ಕೋಪಗೊಂಡ ಪಟೇಲ್, ತನ್ನ ಗೆಳತಿಯನ್ನು ಕೇಬಲ್ ವೈರ್ ನಿಂದ ಹೊಡೆದು ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ಗೆಳೆಯರ ಜೊತೆ ಸೇರಿ ಆಕೆಯ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ ತುಂಬಿದ್ದಾರೆ. ಬಳಿಕ ಆಕೆಯ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.  ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಯನ್ನು ಓಲಪಾಡ್ ಠಾಣೆಯ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ 376 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share This Article