ನವವಿವಾಹಿತೆ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಗಾನವಿ ಬೇರೊಬ್ಬನನ್ನು ಲವ್ ಮಾಡ್ತಿದ್ಲು; ಸೂರಜ್ ಕುಟುಂಬಸ್ಥರಿಂದ ದೂರು

2 Min Read

– ಆತ್ಮಹತ್ಯೆ ಮಾಡಿಕೊಂಡ ಗಾನವಿ ಕುಟುಂಬದವರ ವಿರುದ್ಧ ದೂರು ದಾಖಲು
– ಸೂರಜ್ ಸಾವಿಗೆ ಗಾನವಿ, ತಾಯಿ ರುಕ್ಮಿಣಿ, ರಾಧ, ಬಾಬುಗೌಡ ಕಾರಣ ಅಂತ ಆರೋಪ

ಬೆಂಗಳೂರು: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಂಡ ಗಾನವಿ (Ganavi) ಕುಟುಂಬದವರ ವಿರುದ್ಧ ದೂರು ದಾಖಲಾಗಿದೆ.

ಪತ್ನಿ ಗಾನವಿ ಆತ್ಮಹತ್ಯೆ ಬೆನ್ನಲ್ಲೇ ಪತಿ ಸೂರಜ್ (Suraj) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂರಜ್ ಮೇಲೆ ಗಾನವಿ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದರು. ಇದರಿಂದ ಮನನೊಂದು ಮಹಾರಾಷ್ಟ್ರದಲ್ಲಿ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಜೊತೆ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಗಾನವಿ ಮೇಲೆ ಸೂರಜ್ ಕುಟುಂಬ ಆರೋಪ ಮಾಡಿದೆ. ಇದನ್ನೂ ಓದಿ: ನವವಿವಾಹಿತೆ ಆತ್ಮಹತ್ಯೆ ಕೇಸ್‌ – ಈಗ ಪತಿಯೂ ಸೂಸೈಡ್‌, ಅತ್ತೆ ಗಂಭೀರ

ಗಾನವಿ ಈ ಹಿಂದೆ ಹರ್ಷಾ ಎಂಬಾತನನ್ನ ಪ್ರೀತಿ ಮಾಡ್ತಿದ್ಲು. ಆತನನ್ನೇ ಮದುವೆಯಾಗ್ಬೇಕು ಅಂತ ಗಾನವಿ ನಿರ್ಧಾರ ಮಾಡಿದ್ದಳು. ಆದರೆ, ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್‌ನನ್ನ ಮದುವೆಯಾಗಿದ್ದಳು. ಶ್ರೀಲಂಕಾಗೆ ಹನಿಮೂನ್ ಹೋದಾಗ ಈ ವಿಚಾರ ಸೂರಜ್‌ಗೆ ಗಾನವಿ ಹೇಳಿದ್ದಳು. ಹರ್ಷಾನ ಲವ್ ವಿಚಾರ ಕೇಳಿ ಸೂರಜ್ ಶಾಕ್ ಆಗಿದ್ದ. ಇದರಿಂದ ಅರ್ಧದಲ್ಲೇ ಬೆಂಗಳೂರಿಗೆ ನವಜೋಡಿ ವಾಪಸ್ಸಾಗಿತ್ತು.

ನಂತರ ಗಾನವಿಯನ್ನ ಆಕೆಯ ಕುಟುಂಬವರು ತಮ್ಮ ಮನೆಗೆ ಕರೆದೊಯ್ದಿದ್ದರು. ಕಳೆದ 24 ರಂದು ತನ್ನ ತಾಯಿ ಮನೆಯಲ್ಲೇ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆ ನಂತರ ಸೂರಜ್ ಮೇಲೆ ಗಾನವಿ ತಾಯಿ ರುಕ್ಮಿಣಿ ಕಿರುಕುಳ ಆರೋಪ ಮಾಡಿದ್ದರು. ಸೂರಜ್ ಫ್ಯಾಮಿಲಿ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ಡೌರಿ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಸೂರಜ್ ಮತ್ತು ತಾಯಿ ಜಯಂತಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಕಿರುಕುಳ ಆರೋಪದಿಂದ ಮನನೊಂದು ಲಾಡ್ಜ್‌ನಲ್ಲಿ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಗಾನವಿ ಕುಟುಂಬದ ವಿರುದ್ಧ ಸೂರಜ್ ಬಾವ ರಾಜ್‌ಕುಮಾರ್ ದೂರು ದಾಖಲಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ – ಮತ್ತೋರ್ವ ಗಾಯಾಳು‌ ಲಕ್ಷ್ಮಿ ಸಾವು

ಸೂರಜ್ ಸಾವಿಗೆ ಗಾನವಿ, ತಾಯಿ ರುಕ್ಮಿಣಿ, ರಾಧ, ಬಾಬುಗೌಡ, ಸತೀಶ್ ಕಾರಣ. ಗಾನವಿ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಿದ್ದಾರೆ. ಮಾನಹಾನಿ ಮತ್ತು ಸುಳ್ಳು ಆರೋಪ ಮಾಡಿ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ. ಈಗ ಸೂರಜ್ ಪಾರ್ಥಿವ ಶರೀರ ವಿದ್ಯಾರಣ್ಯಪುರದ ಮನೆ ತಲುಪಿದೆ. ಅಂತಿಮಯಾತ್ರೆಗೆ ಕೊಂಡೊಯ್ಯಲು ಸಿದ್ಧತೆ ನಡೆದಿದೆ.

Share This Article