ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ಇಲ್ಲ – ಇವಿಎಂ ಬಗ್ಗೆ ಸಲ್ಲಿಕೆಯಾದ ಎಲ್ಲಾ ಅರ್ಜಿ ವಜಾ

Public TV
1 Min Read

ನವದೆಹಲಿ: ಇವಿಎಂನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ಹೇಳಿ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಮುಂದುವರಿದ ದೇಶಗಳಲ್ಲಿ ಇವಿಎಂ ಬಳಕೆ ಇಲ್ಲ. ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಬೇಕು. ಇದರ ಜೊತೆ ವಿವಿಪ್ಯಾಟ್‌ನಲ್ಲಿ ಮುದ್ರಣವಾದ ಎಲ್ಲಾ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕೆಂದು ಕೆಲವರು ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ವಿವಿಪ್ಯಾಟ್‌ನಲ್ಲಿ ಮುದ್ರಣವಾದ ಸ್ಲಿಪ್‌ಗಳನ್ನು ಮತದಾರರ ಕೈಗೆ ನೀಡಿ ಆತ ಅದನ್ನು ಬಾಕ್ಸ್‌ ಹಾಕಬೇಕೆಂದು ಕೋರಿ ಹಲವು ಮಂದಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

ಈ ಎಲ್ಲಾ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ  ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಂಕರ್ ದತ್ತಾ ಇದ್ದ ಪೀಠ ಇವಿಎಂನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ.  ಎಲ್ಲಾ ವಿವಿಪ್ಯಾಟ್‌ ಸ್ಲಿಪ್‌ ಎಣಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ  ಅರ್ಜಿಗಳನ್ನು ವಜಾಗೊಳಿಸಿದೆ.

ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಿದರೆ ಮತ ಎಣಿಕೆಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಇವಿಎಂನಲ್ಲಿ ಯಾವುದೇ ದೋಷ ಇಲ್ಲ. ಇವಿಎಂ ಮೊದಲೇ ಸಿದ್ಧವಾಗಿರುತ್ತದೆ. ಇವಿಎಂ ತಯಾರಿಸುವ ಕಂಪನಿಗೆ ಯಾವ ಜಾಗದಲ್ಲಿ ಯಾರು ಅಭ್ಯರ್ಥಿ ಇರುತ್ತಾರೆ ಎನ್ನುವುದು ತಿಳಿದಿರುವುದಿಲ್ಲ. ಹೀಗಾಗಿ ಇವಿಎಂ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ವಾದ ಮಂಡಿಸಿತ್ತು.

Share This Article