ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ನಿಷೇಧಿಸಿ, ಮರು ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ

Public TV
1 Min Read

– ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಚುನಾವಣೆಗಳಲ್ಲಿ ನೋಟಾ (Nota) ಅತಿ ಹೆಚ್ಚು ಗಳಿಸಿದರೆ ಆ ಚುನಾವಣೆಯನ್ನು ಅನುರ್ಜಿತ ಎಂದು ಘೋಷಿಸಬೇಕು. ನೋಟಾಗಿಂತ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಐದು ವರ್ಷಗಳ ಕಾಲ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court), ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಶಿವಖೇರಾ ಎನ್ನುವವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ನೋಟಾವನ್ನು ಕಾಲ್ಪನಿಕ ಅಭ್ಯರ್ಥಿಯನ್ನು ಆಯೋಗ ಪ್ರಚಾರ ನಡೆಸಬೇಕು. ನೋಟಾದೆದುರು ಸೋತ ಅಭ್ಯರ್ಥಿಗಳಿಗೆ ಮುಂದಿನ ಐದು ವರ್ಷ ಯಾವ ಚುನಾವಣೆಯಲ್ಲೂ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ವಾದ ಮಂಡಿಸಲಾಯಿತು‌. ಇದನ್ನೂ ಓದಿ: 100% ವಿವಿಪ್ಯಾಟ್ ಸ್ಲಿಪ್ ಎಣಿಕೆ ಸಾಧ್ಯವಿಲ್ಲ: ಸುಪ್ರೀಂ ಹೇಳಿದ್ದೇನು?

ವಾದ ಮಂಡನೆ ವೇಳೆ ಗುಜುರಾತ್‌ನ ಸೂರತ್‌ ಕ್ಷೇತ್ರ ಉದಾಹರಣೆ ನೀಡಿ, ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು ಇತರೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಕಾರಣ ಯಾವುದೇ ಚುನಾವಣೆಯಿಲ್ಲದೆ ಬಿಜೆಪಿ ಅಭ್ಯರ್ಥಿ ವಿಜಯಿ ಎಂದು ಘೋಷಿಸಲಾಯಿತು. ಒಬ್ಬರೇ ಅಭ್ಯರ್ಥಿ ಇದ್ದರೂ ಮತದಾರರಿಗೆ ನೋಟಾಕ್ಕೆ ಮತ ಹಾಕುವ ಅವಕಾಶವಿರುವುದರಿಂದ ಚುನಾವಣೆ ನಡೆಯಬೇಕು ಎಂದು ಹೇಳಿದರು.

ನೋಟಾ ನಿಯಮವನ್ನು ಇನ್ನಷ್ಟು ಅಭಿವೃದ್ದಿಪಡಿಸುವ ವಾದವನ್ನು ಒಪ್ಪಿಕೊಂಡ ಸಿಜೆಐ ಡಿ.ವೈ ಚಂದ್ರಚೂಡ್ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದರು‌. ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೋಟಾ ಆಯ್ಕೆಯನ್ನ ಇವಿಎಂನಲ್ಲಿ ಚುನಾವಣಾ ಆಯೋಗ ಸೇರಿಸಿತ್ತು. ಇದನ್ನೂ ಓದಿ: ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ಇಲ್ಲ – ಇವಿಎಂ ಬಗ್ಗೆ ಸಲ್ಲಿಕೆಯಾದ ಎಲ್ಲಾ ಅರ್ಜಿ ವಜಾ

Share This Article