NDA ಪರೀಕ್ಷೆಯಲ್ಲಿ ಮಹಿಳೆಯರ ಪ್ರವೇಶ ಮುಂದೂಡಲು ಸಾಧ್ಯವಿಲ್ಲ- ಸುಪ್ರೀಂಕೋರ್ಟ್

Public TV
1 Min Read

ನವದೆಹಲಿ: ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ(NDA) ಪರೀಕ್ಷೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಪುನರ್ ಉಚ್ಚರಿಸಿದೆ. ಮುಂದಿನ ವರ್ಷದವರೆಗೂ ವಿನಾಯಿತಿ ಕೋರಿ ಕೇಂದ್ರ ಸರ್ಕಾರ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಕೇಂದ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಸಂಜಯ್ ಕಿಶನ್ ಕೌಲ್ ನೇತೃತ್ವದ ದ್ವಿ ಸದಸ್ಯ ಪೀಠ, ಎನ್‍ಡಿಎ ಪರೀಕ್ಷೆಯಲ್ಲಿ ಮಹಿಳೆಯರ ಪ್ರವೇಶ ತಡೆಯಲು ಸಾಧ್ಯವಿಲ್ಲ ಎಂದು ಹೇಳಿತು. ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಶಸ್ತ್ರ ಪಡೆಗಳು ಉತ್ತಮ ತರಬೇತಿ ಪಡೆದಿವೆ, ಅದನ್ನು ಈಗ ಬಳಕೆ ಮಾಡಬಹುದು ಆದ್ದರಿಂದ ಶೀಘ್ರದಲ್ಲೇ ಮಹಿಳೆಯರ ಪ್ರವೇಶವನ್ನು ಸುಲಭಗೊಳಿಸಲು ಶೀಘ್ರ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸೂಚಿಸಿತು. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

ಪರೀಕ್ಷಾರ್ಥಿಗಳ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡರೇ ಕೇಂದ್ರ ಸರ್ಕಾರದ ಮನವಿ ಒಪ್ಪಲು ಸಾಧ್ಯವಿಲ್ಲ, ಹೀಗಾಗಿ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ. ಎನ್‍ಡಿಎ ತನ್ನ ಪ್ರಯತ್ನಗಳನ್ನು ಆರಂಭಿಸಲು ಎಷ್ಟು ಮಹಿಳೆಯರು ಪ್ರವೇಶ ಪಡೆದುಕೊಳ್ಳುತ್ತಾರೆ ಎಂದು ನೋಡೋಣ, ಅವಶ್ಯಕತೆ ಬಿದ್ದರೇ ಮತ್ತೊಮ್ಮೆ ವಿಚಾರಣೆ ನಡೆಸಿ ಸೂಕ್ತ ದಾರಿ ಕಂಡುಕೊಳ್ಳೊಣ ಎಂದು ಪೀಠ ನಿರ್ದೇಶನ ನೀಡಿದೆ. ಇದನ್ನೂ ಓದಿ: ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಶಿಫಾರಸು

ಎನ್‍ಡಿಎ ಪರೀಕ್ಷೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲು ಸುಪ್ರೀಂಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೆ ಮಹಿಳೆಯರಿಗೆ ಅವಕಾಶ ನೀಡುವ ಕಾರಣ ಪಠ್ಯವೂ ಸೇರಿ ಪರೀಕ್ಷೆ ಮತ್ತು ತರಬೇತಿ ಮಾದರಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಿದ್ದು ಇದಕ್ಕೆ ಕಾಲಾವಕಾಶ ಬೇಕಿದ್ದು ಮಹಿಳಾ ಅಭ್ಯರ್ಥಿಗಳು ಮುಂದಿನ ವರ್ಷದ ಮೇ ನಿಂದ ಪರೀಕ್ಷೆ ಬರೆಯಲು ಸರ್ಕಾರ ಸೂಚಿಸಿತ್ತು. ಇದನ್ನು ಪ್ರಶ್ನೆ ಮಾಡಿ ಹಲವು ಮಂದಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *