ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

Public TV
1 Min Read

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಜಾಮೀನು ವಿಸ್ತರಣೆ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್‌ನ (Supreme Court) ರಜಾಕಾಲದ ಪೀಠವು ಮಂಗಳವಾರ ನಿರಾಕರಿಸಿತು. ಅರ್ಜಿಯ ಪಟ್ಟಿಯನ್ನು ವಿಚಾರಣೆಗೆ ಹೆಚ್ಚಿನ ನಿರ್ದೇಶನಕ್ಕಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಕಳುಹಿಸಿದೆ ಎಂದು ತಿಳಿಸಿದೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ವೈದ್ಯಕೀಯ ಕಾರಣಗಳಿಗಾಗಿ ಜೂನ್ 1 ರಂದು ಮುಕ್ತಾಯಗೊಳ್ಳಲಿರುವ ಅವರ ಮಧ್ಯಂತರ ಜಾಮೀನಿಗೆ ಏಳು ದಿನಗಳ ವಿಸ್ತರಣೆಯನ್ನು ಕೋರಿದ್ದರು. ಇದರ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಮನವಿ ಮಾಡಿದರು. ಇದನ್ನೂ ಓದಿ: ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು?

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಜೆ.ಕೆ.ಮಹೇಶ್ವರಿ ಮತ್ತು ಕೆ.ವಿ.ವಿಶ್ವನಾಥನ್ ಅವರ ರಜಾಕಾಲದ ಪೀಠ ತುರ್ತು ವಿಚಾರಣೆಗೆ ನಿರಾಕರಿಸಿತು. ಪ್ರಕರಣವನ್ನು ನಾವು ಆಲಿಸಿದ್ದೇವೆ. ಆದರೆ ಇದನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕಾಗಿದೆ. ಈ ಹಿನ್ನೆಲೆ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.

ಇದೇ ವೇಳೆ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದಾಗ, ಇದನ್ನು ಏಕೆ ಉಲ್ಲೇಖಿಸಲಿಲ್ಲ ಎಂದು ಪೀಠವು ಕೇಳಿತು. ಇದಕ್ಕೆ ಉತ್ತರಿಸಿದ ವಕೀಲ ಸಿಂಘ್ವಿ, ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ವರದಿಯನ್ನು ಪಡೆದ ಬಳಿಕ ಜಾಮೀನು ವಿಸ್ತರಣೆ ಅರ್ಜಿಯನ್ನು ಏಳು ದಿನಗಳ ವರೆಗೆ ವಿಸ್ತರಿಸಲು ನಿರ್ಧರಿಸಿ ಅರ್ಜಿ ಸಲ್ಲಿಸಲಿದೆ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಂಡಿತು ಎಂದು ಹೇಳಿದರು. ಅದಾಗ್ಯೂ ಪ್ರಕರಣ ಸಿಜೆಐ ಪೀಠಕ್ಕೆ ವರ್ಗಾವಣೆಗೊಂಡಿದೆ. ಇದನ್ನೂ ಓದಿ: ಪಾಕ್‌ ಪರಿಸ್ಥಿತಿ ಕೆಟ್ಟದ್ದಾಗಿದೆ, ಮೊದಲು ನಿಮ್ಮದನ್ನು ನೋಡಿಕೊಳ್ಳಿ – ಪಾಕ್‌ ಮಾಜಿ ಸಚಿವರ ಟ್ವೀಟ್‌ಗೆ ಕೇಜ್ರಿವಾಲ್‌ ತಿರುಗೇಟು

Share This Article