ಮೀಸಲಾತಿ ಪಡೆದವರು ಅದರಿಂದ ಹೊರಬಂದು ಹಿಂದುಳಿದವರಿಗೆ ಅವಕಾಶ ಕೊಡಲಿ: ಸುಪ್ರೀಂ

By
1 Min Read

ನವದೆಹಲಿ: ಹಿಂದುಳಿದ ಜಾತಿಗಳಲ್ಲಿದ್ದುಕೊಂಡು ಮೀಸಲಾತಿ (Reservation) ಲಾಭ ಪಡೆದವರು ಮೀಸಲು ಕೆಟಗರಿಯಿಂದ ಹೊರಬಂದು ಇನ್ನಷ್ಟು ಹಿಂದುಳಿದ ಜನರಿಗೆ ಮೀಸಲಾತಿಯ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ.

ಎಸ್‍ಟಿ ಎಸ್‍ಟಿ ಸಮುದಾಯಕ್ಕೆ ರಾಜ್ಯ ಸರ್ಕಾರಗಳು ಒಳಮೀಸಲಾತಿ (Internal Reservation) ನೀಡುವ ವಿಷಯದ ಕುರಿತು ಪರಿಶೀಲನೆ ನಡೆಸುತ್ತಿರುವ ಸುಪ್ರೀಂನ ಸಂವಿಧಾನ ಪೀಠ ವಿಚಾರಣೆ ವೇಳೆ ಈ ಅಭಿಪ್ರಾಯ ತಿಳಿಸಿದೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‍ಗೆ ಕೋಟಿ ಕೋಟಿ ಅನುದಾನ ಬಾಕಿ – ಬಳ್ಳಾರಿಯಲ್ಲಿ ಸಿಎಂ ಕನಸಿನ ಯೋಜನೆ ಬಂದ್

ನಿರ್ದಿಷ್ಟ ಸಮುದಾಯದಲ್ಲಿರುವ ಒಳಪಂಗಡಗಳು ಮೀಸಲಾತಿ ಲಾಭ ಪಡೆದು ಮುಂದೆ ಬಂದಿದ್ದರೆ ಅಂತಹವರು ಅದರಿಂದ ಹೊರಬಂದು ಸಾಮಾನ್ಯ ವರ್ಗದವರೊಂದಿಗೆ ಸ್ಪರ್ಧೆ ಮಾಡಬೇಕು. ಇದರಿಂದ ತಮ್ಮದೇ ವರ್ಗದ ಹಿಂದುಳಿದವರಿಗೆ ಅನುಕೂಲವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳಲ್ಲಿರುವ ಪ್ರತಿಯೊಬ್ಬರು ಅದೇ ಜಾತಿ ಹಾಗೂ ಪಂಗಡಕ್ಕೆ ಸೇರಿದ ಕಾರಣ ಅವರೆಲ್ಲ ಒಂದೇ ಎಂದು ಹೇಳಬಹುದು. ಈ ವಿಚಾರವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಾನಮಾನಗಳಲ್ಲಿ ನೋಡಿದಾಗ ಎಲ್ಲರೂ ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಈ ಅಸಮಾನತೆ ವ್ಯಕ್ತಿಯಿಂದ ವ್ಯಕ್ತಿಗೆ, ಜಾತಿಯಿಂದ ಜಾತಿಗೆ ಭಿನ್ನವಾಗಿರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಉದ್ಘಾಟನೆ ದಿನವೇ ಬಾಗಿಲು ಮುಚ್ಚಿದ ತುಮಕೂರು KSRTC ಹೈಟೆಕ್‌ ಬಸ್ ನಿಲ್ದಾಣ!

Share This Article