Delhi Liquor Scam | ಸಿಸೋಡಿಯಾಗೆ ಜಾಮೀನು ಮಂಜೂರು

Public TV
1 Min Read

ನವದೆಹಲಿ: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ (Manish Sisodia) ಸುಪ್ರೀಂ ಕೋರ್ಟ್‌ (Supreme Court) ಜಾಮೀನು ಮಂಜೂರು ಮಾಡಿದೆ.

2 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು, ಪಾಸ್‌ಪೋರ್ಟ್ ವಶಕ್ಕೆ ಕೊಡಬೇಕು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂದು ಕೋರ್ಟ್‌ ಷರತ್ತು ವಿಧಿಸಿದೆ.

ಅಬಕಾರಿ ನೀತಿ ಪ್ರಕರಣದಲ್ಲಿ (New Excise Policy) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮನೀಶ್‌ ಸಿಸೋಡಿಯಾ ಅವರನ್ನು ಫೆ 26, 2023 ರಂದು ಸಿಬಿಐ ಬಂಧಿಸಿತ್ತು. ಎರಡು ವಾರದ ಬಳಿಕ ಜಾರಿ ನಿದೇಶನಾಲಯ (CBI) ಬಂಧನ ಮಾಡಿತ್ತು, ಈಗ ಎರಡೂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

Share This Article