ದ್ವೇಷ ಭಾಷಣಕ್ಕೆ ಕಡಿವಾಣ ಹಾಕಿ – ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ

Public TV
2 Min Read

ನವದೆಹಲಿ: ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗದಂತೆ ದ್ವೇಷ ಭಾಷಣ (Hate Speech) ನಿಯಂತ್ರಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಸೂಚಿಸಿದೆ.

ಇನ್‌ಸ್ಟಾಗ್ರಾಮ್ (Instagram) ಇನ್‌ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿ ವಿರುದ್ಧದ ಪ್ರಕರಣದ ದೂರುದಾರ ವಜಾಹತ್ ಖಾನ್ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ರೀತಿಯ ಸೂಚನೆ ನೀಡಿದೆ. ದ್ವೇಷದ ಭಾಷಣವನ್ನು ʻಅಭಿವ್ಯಕ್ತಿ ಸ್ವಾತಂತ್ರ‍್ಯʼ ಎಂದು ಹೇಳುವುದಕ್ಕೆ ವಿಷಾದ ವ್ಯಕ್ತಪಡಿಸಿದ ನ್ಯಾ. ಬಿ.ವಿ ನಾಗರತ್ನ (BV Nagrathna) ಮತ್ತು ನ್ಯಾ. ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಅದನ್ನ ನಿಯಂತ್ರಿಸಲು ರಾಜ್ಯವು ಮುಂದಾಗುವುದನ್ನು ಯಾರೂ ಬಯಸುವುದಿಲ್ಲ. ಹೀಗಾಗಿ ವಾಕ್ ಸ್ವಾತಂತ್ರ‍್ಯದ ಮೌಲ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಸಲಹೆ ನೀಡಿತು.

ದ್ವೇಷ ಮೂಡಿಸುವ ಭಾಷಣಗಳು ಅಸಮರ್ಪಕ ಅಂತ ಜನರಿಗೆ ಯಾಕೆ ಕಾಣಿಸುತ್ತಿಲ್ಲ? ಎಂದು ಪ್ರಶ್ನಿಸಿದ ನ್ಯಾಯಪೀಠ, ಇಂತಹ ಕೆಲವು ಭಾಷಣಗಳಿಗೆ ನಿಯಂತ್ರಣ ಇರಬೇಕು. ಜನರು ಅಂತಹ ದ್ವೇಷದ ಭಾಷಣ ಹಂಚಿಕೊಳ್ಳುವುದು ಮತ್ತು ಲೈಕ್ ಮಾಡುವುದನ್ನ ನಿರ್ಬಂಧಿಸಬೇಕು ಎಂದು ಹೇಳಿತು. ಇದನ್ನೂ ಓದಿ: ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

ದ್ವೇಷ ಮತ್ತು ಕೋಮು ಸೌಹಾರ್ದತೆಯನ್ನ ಪ್ರಚೋದಿಸುವ ವಿಷಯವನ್ನ ಸೋಷಿಯಲ್‌ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿದ ಆರೋಪದ ಮೇಲೆ ವಜಾಹತ್ ಖಾನ್ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಈಗಾಗಲೇ ಒಂದು ಎಫ್‌ಐಆರ್‌ನಲ್ಲಿ (FIR) ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಮತ್ತು ಇನ್ನೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ, ಇಬ್ಬರ ವಿರುದ್ಧವೂ ಪಶ್ಚಿಮ ಬಂಗಾಳದಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್‌ | ರಾಹುಲ್, ಸೋನಿಯಾ ವಿರುದ್ಧದ ಆರೋಪ ಪರಿಗಣನೆ ಕುರಿತು ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್‌

ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗದಂತೆ ದ್ವೇಷ ಭಾಷಣವನ್ನ ನಿಯಂತ್ರಿಸುವ ಮಾರ್ಗಗಳನ್ನ ಸೂಚಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವಜಾಹತ್ ಖಾನ್ ಪರ ಹಾಜರಿದ ವಕೀಲರಿಗೆ ಸುಪ್ರೀಂ ಸೂಚಿಸಿತು. ಪಶ್ಚಿಮ ಬಂಗಾಳದ ಹೊರಗೆ ಅವರ ವಜಾಹತ್ ಖಾನ್ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳಲ್ಲಿ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ತಡೆ ನೀಡಿದ ಮೂರು ವಾರಗಳ ನಂತರ ಈ ಬಗ್ಗೆ ವಿಚಾರಣೆ ನಡೆಸಿತು. ಅವರಿಗೆ ಈ ಪರಿಹಾರವನ್ನು ಮುಂದುವರೆಸಿದ ನ್ಯಾಯಾಲಯ, ಇನ್ನಷ್ಟು ಎಫ್‌ಐಆರ್‌ಗಳನ್ನು ಹಾಕಿ ವ್ಯಕ್ತಿಯನ್ನು ಜೈಲಿಗೆ ಹಾಕುವುದರಲ್ಲಿ ಏನು ಪ್ರಯೋಜನ? ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಖಾನ್ ಅವರ ವಕೀಲರು, ತಮ್ಮ ಕಕ್ಷಿದಾರರು ಹಿಂದಿನ ಟ್ವೀಟ್‌ಗಳಿಗೆ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕೇರಳದ ನರ್ಸ್‌ಗೆ ಜು.16ರಂದು ಯೆಮೆನ್‌ನಲ್ಲಿ ನೇಣು; ಮರಣದಂಡನೆ ತಡೆಯಲು ಸಾಧ್ಯವಿಲ್ಲ – ಸುಪ್ರೀಂಗೆ ಕೇಂದ್ರ ಮಾಹಿತಿ

Share This Article