ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂಢನಂಬಿಕೆಗೆ ಸಂಬಂಧಿಸಿದ ದುಷ್ಕೃತ್ಯವೊಂದು ನಡೆದಿದೆ. ಶುದ್ಧೀಕರಣದ ಹೆಸರಲ್ಲಿ ಪೋಷಕರ ಮುಂದೆಯೇ ಅನೇಕ ವರ್ಷಗಳ ಕಾಲ ನಿರಂತರವಾಗಿ ಡೋಂಗಿ ಸನ್ಯಾಸಿಯೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಈ ಘಟನೆ ನೇತಾಜಿ ಸುಭಾಷ್ ಪ್ಲೇಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಶುದ್ಧೀಕರಣದ ಹೆಸರಿನಲ್ಲಿ ಡೋಂಗಿ ಸನ್ಯಾಸಿ 11 ವರ್ಷಗಳ ಕಾಲ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯ ತಂದೆ ದೇವ್ ಶರ್ಮಾ ಹಾಗೂ ಆತನ ಪತ್ನಿ ಮತ್ತು ಸಹೋದರಿ ಕಪಟ ಸನ್ಯಾಸಿ ಮಾತಿಗೆ ತಲೆದೂಗಿದ್ದರು. ಕೆಲ ವರ್ಷಗಳ ಹಿಂದೆ ಈ ಕುಟುಂಬ ಸೋದರ ಸಂಬಂಧಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಆ ಭಯವನ್ನು ಹೋಗಲಾಡಿಸಲು 11 ವರ್ಷಗಳ ಹಿಂದೆ ದೇವಿ ಶರ್ಮಾ ಸನ್ಯಾಸಿಯೊಬ್ಬರನ್ನು ಮನೆಗೆ ಕರೆದಿದ್ದರು.
11 ವರ್ಷಗಳ ಹಿಂದೆ ಮೊದಲ ಬಾರಿ ಮನೆಗೆ ಬಂದ ಸನ್ಯಾಸಿ ಪೂಜೆ ಮಾಡಿ ನಂತರ 14 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಮನೆಯವರು ಕೇಳಿದಾಗ ಇದು ಶುದ್ಧೀಕರಣಕ್ಕೆ ಮಾಡಿದೆ ಎಂದು ಹೇಳಿ ಮನೆಯವರ ಬಾಯಿ ಮುಚ್ಚಿಸಿದ್ದಾನೆ. 11 ವರ್ಷಗಳ ಕಾಲ ದೇವಿ ಶರ್ಮಾ ಮನೆಗೆ ಬಂದಾಗಲೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಈಗ ಯುವತಿ ತನ್ನ ನೋವನ್ನು ಪೊಲೀಸ್ ಮುಂದೆ ಹೇಳಿಕೊಂಡಿದ್ದಾರೆ.
ಸಂತ್ರಸ್ತ ಯುವತಿ ಅನೇಕ ದಿನಗಳಿಂದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಆದ್ರೆ ಯಾರೂ ಈ ಬಗ್ಗೆ ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ. ಕೆಲವು ಬಾರಿ ದೂರು ದಾಖಲಿಸಿಕೊಂಡರೂ ತನಿಖೆಯ ಹೆಸರಿನಲ್ಲಿ ಅನೇಕ ತಿಂಗಳುಗಳು ಕಳೆದಿವೆ. ಅಷ್ಟೇ ಅಲ್ಲದೇ ಪೊಲೀಸರೇ ಸಂತ್ರಸ್ತೆಗೆ ರಾಜಿ ಮಾಡಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದರು ಎನ್ನಲಾಗಿದೆ.
ಕೆಲವು ದಿನಗಳ ನಂತರ ಮನೆಗೆ ಪೊಲೀಸರು ಬಂದಾಗ ಆಕೆಯ ಪೋಷಕರು ಮತ್ತು ಚಿಕ್ಕಮ್ಮ ಮಾಂತ್ರಿಕನ ಜೊತೆ ಯುವತಿಯನ್ನ ಕೋಣೆಯಲ್ಲಿ ಲಾಕ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಇದು ಶುದ್ಧೀಕರಣಕ್ಕಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.