ತಲೈವಾ ಜೊತೆ ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ಖ್ಯಾತ ನಿರ್ಮಾಪಕ

Public TV
2 Min Read

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಕಳೆದ ವರ್ಷ ಅಂತ್ಯದಲ್ಲಿ ‘ಜೈಲರ್’ (Jailer) ಮೂಲಕ ಸಕ್ಸಸ್ ಕಂಡಿದ್ದರು. ಆದರೆ ಈ ವರ್ಷ ಶುರುವಿನಲ್ಲೇ ‘ಲಾಲ್ ಸಲಾಮ್’ ಸಿನಿಮಾ ಮಕಾಡೆ ಮಲಗಿತ್ತು. ಈ ಚಿತ್ರದ ಸೋಲಿನ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಿರ್ಮಾಪಕನ ಜೊತೆ ಸಿನಿಮಾ ಮಾಡಲು ತಲೈವಾ ಮುಂದಾಗಿದ್ದಾರೆ.

ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಮ್’ (Lal Salam) ಚಿತ್ರದಲ್ಲಿ ರಜನಿಕಾಂತ್ ಅವರು ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಎಲ್ಲರ ನಿರೀಕ್ಷೆಯಂತೆ ಗಳಿಕೆ ಮಾಡಲಿಲ್ಲ. ಈಗ ಬಾಲಿವುಡ್‌ನ ಫೇಮಸ್ ನಿರ್ಮಾಪಕ ಸಾಜಿದ್ ನಾಡಿಯಾವಾಲ (Sajid Nadiadwala) ಜೊತೆ ತಲೈವಾ ಸಿನಿಮಾ ಮಾಡ್ತಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ನಿರ್ಮಾಪಕ ಸಾಜಿದ್ ಅವರೇ ಮಾಹಿತಿ ನೀಡಿದ್ದಾರೆ.

ರಜನಿಕಾಂತ್ ಜೊತೆ ಕೆಲಸ ಮಾಡುವುದು ಅತ್ಯಂತ ಗೌರವಯುತ ಘಳಿಗೆ. ನಾವು ಒಟ್ಟಿಗೆ ಪ್ರಯಾಣ ಆರಂಭಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ನಿರ್ಮಾಪಕ ಸಾಜಿದ್ ಸೋಷಿಯಲ್ ಮೀಡಿಯಾದಲ್ಲಿ ತಲೈವಾ ಜೊತೆಗಿನ ಫೋಟೋ ಶೇರ್ ಮಾಡಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಬಾಲಿವುಡ್ ಸ್ಟಾರ್ಸ್

ತಲೈವಾ ಹೊಸ ಚಿತ್ರ ಯಾವ ಭಾಷೆಯಲ್ಲಿ ಮೂಡಿ ಬರಲಿದೆ? ನಿರ್ದೇಶಕ, ತಂತ್ರಜ್ಞರು ಯಾರು? ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಎನ್ನುವ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗುತ್ತಿರುವುದುರಿಂದ ಹೆಚ್ಚಿನ ನಿರೀಕ್ಷೆ ಮೂಡಿದೆ.

‘ಜೈ ಭೀಮ್‌’ ನಿರ್ದೇಶಕನ ಜೊತೆ ಮತ್ತು ಲೋಕೇಶ್‌ ಕನಕರಾಜ್‌ ಜೊತೆ ಹೊಸ ಸಿನಿಮಾ ರಜನಿಕಾಂತ್‌ ಮಾಡ್ತಿದ್ದಾರೆ. ಇದರ ಜೊತೆ ಜೈಲರ್‌ ಪಾರ್ಟ್‌ 2ಗೆ ಕಥೆ ರೆಡಿಯಾಗುತ್ತಿದೆ. ಒಪ್ಪಿಕೊಂಡ ಮೊದಲ 2 ಸಿನಿಮಾಗಳು ಮುಗಿದ ಮೇಲೆ ತಲೈವಾ ಜೈಲರ್‌ 2ಗೆ ಸಾಥ್‌ ನೀಡಲಿದ್ದಾರೆ.

Share This Article