ಕಾಂತಾರದಲ್ಲಿ ಕಾಣಿಸಲಿದ್ದಾರೆ ಸೂಪರ್‌ಸ್ಟಾರ್!

Public TV
2 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ‌ (Rishab Shetty) ಬಳಗದಿಂದ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಕಾಂತಾರ (Kantara) ಪ್ರಿಕ್ವೆಲ್ ಬಿಡುಗಡೆಗೂ ಮುನ್ನ ಕಾಂತಾರ ಸಿಕ್ವೆಲ್ ಕೆಲಸ ಕೂಡ ಭರದಿಂದ ನಡೆಯುತ್ತಿದೆ. ಮೂರು ಮೂರು ಭಾಗಗಳಲ್ಲಿ ಕಾಂತಾರದ ಕಥೆಯನ್ನು ರಿಷಬ್ ಶೆಟ್ಟಿ ಹೇಳಲಿದ್ದಾರೆ. ಅಕ್ಟೋಬರ್ 2ರಂದು ಬಿಡುಗಡೆ ಆಗುವ ಕಾಂತಾರ ಚಿತ್ರದಲ್ಲಿ ಸೂಪರ್ ಸ್ಟಾರ್‌ವೊಬ್ಬರು ಕಾಣಿಸಿಕೊಳ್ಳಲಿದ್ದು, ಅವರೇ ಮುಂದಿನ ಭಾಗದಲ್ಲಿ ಮುಂದುವರೆಯಲಿದ್ದಾರೆ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

ಶ್ರದ್ಧೆ, ಭಕ್ತಿಯಿಂದ ಮಾಡಿದ ಕೆಲಸಕ್ಕೆ ಯಶಸ್ಸು ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ನಟ ರಿಷಬ್ ಶೆಟ್ಟಿ ಹಾಗೂ ಅವರ ಟೀಂ ಪ್ರಸಕ್ತ ನಿದರ್ಶನ. ಕಾಂತಾರ ಸಿನಿಮಾ ನಿರ್ಮಿಸಿದವರಿಗೆನೇ ಗೊತ್ತಿರಲಿಲ್ಲ ಅನ್ಸತ್ತೆ ಈ ಲೆವೆಲ್‌ಗೆ ಕ್ರೇಜ್ ಕ್ರಿಯೇಟ್ ಮಾಡುತ್ತೆ ಅಂತಾ. ರಾಷ್ಟ್ರದ ಗಡಿಮೀರಿ ಕಾಂತಾರ ಅಬ್ಬರಿಸಿ ಬೊಬ್ಬಿರಿದಿದೆ. ಈ ಸಿನಿಮಾದ ಪ್ರಿಕ್ವೇಲ್ ನೋಡಲು ರಾಷ್ಟ್ರವ್ಯಾಪಿ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಕಾಂತಾರ ಜಪ ಮಾಡುತ್ತಿದ್ದಾರೆ. ಇದೇ ಹೊತ್ತಿನಲ್ಲೇ ಕಾಂತಾರ ಅಡ್ಡಾದಿಂದ ಹೊಸ ಸುದ್ದಿಯೊಂದು ಬಂದಿದೆ. ಈ ಹೊಸ ಸುದ್ದಿ ಗಾಂಧಿನಗರದಲ್ಲಿ ಹೊಸ ಹೊಸ ಕಥೆಗಳನ್ನ ಸೃಷ್ಟಿಮಾಡುತ್ತಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 – ಇದು ಬರೀ ಸಿನಿಮಾ ಅಲ್ಲ `ಶಕ್ತಿ’ ಎಂದ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ಸಿಕ್ವೆಲ್ ಮಾಡೋಕೆ ಸಿನಿಮಾತಂಡ ತೆರೆಮರೆಯಲ್ಲಿ ಯೋಜನೆಗಳು ನಡೆಯುತ್ತಿವೆಯಂತೆ. ಸಿಕ್ವೇಲ್‌ಗಾಗಿ ಟಾಲಿವುಡ್ ನಟ ಜೂ.ಎನ್‌ಟಿಆರ್ (Jr, NTR) ಅವರಿಗೆ ಚಿತ್ರತಂಡ ಮಣೆಹಾಕುತ್ತಿದೆ ಎನ್ನಲಾಗ್ತಿದೆ. ಅಂದಹಾಗೆ ಜೂ.ಎನ್‌ಟಿಆರ್ ಹಾಗೂ ರಿಷಬ್ ಶೆಟ್ಟಿ ಸಿನಿಮಾ ಹೊರತುಪಡಿಸಿ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಹಿಂದೆ ಕುಂದಾಪುರಕ್ಕೆ ಭೇಟಿ ನೀಡಿದಾಗ ರಿಷಬ್ ಶೆಟ್ಟಿ ಕುಟುಂಬ ಹಾಗೂ ಜೂ.ಎನ್‌ಟಿಆರ್ ಕುಟುಂಬ ಒಟ್ಟಿಗೆ ಕಾಲ ಕಳೆದಿದೆ. ಜೊತೆಗೆ ದೇವಸ್ಥಾನಗಳಿಗೂ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್

ಜೂ.ಎನ್‌ಟಿಆರ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಾಲಿವುಡ್‌ನಲ್ಲೂ ಹೃತಿಕ್‌ರೋಷನ್ ಜೊತೆ ಸಿನಿಮಾ ಮಾಡಿದ್ದಾರೆ ಯಂಗ್‌ಟೈಗರ್. ಜೂ.ಎನ್‌ಟಿಆರ್ ಕನ್ನಡಕ್ಕೆ ಬಂದರೆ ಚೆನ್ನಾಗಿರುತ್ತೆ ಅನ್ನೋ ಅಭಿಪ್ರಾಯಗಳ ನಡುವೆ ಹೊಂಬಾಳೆ ಸಂಸ್ಥೆ ಜೂ.ಎನ್‌ಟಿಆರ್ ಅವರನ್ನ ಕಾಂತಾರ ಸೀಕ್ವೆಲ್‌ಗೆ ಕರೆತರುತ್ತಾ ಎಂಬ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Share This Article