ಬರ್ತ್ ಡೇ ಸಂಭ್ರಮದಲ್ಲಿ ಮಾದಕ ಚೆಲುವೆ- ಸನ್ನಿ ಇಂದಿಗೂ, ಎಂದೆಂದಿಗೂ ಸೆಕ್ಸಿ ಎಂದ ಪತಿ

Public TV
3 Min Read

-ಸನ್ನಿ ಬಗ್ಗೆ ನಿಮಗೆ ಗೊತ್ತಿರದ 12 ಸಂಗತಿಗಳು ಇಲ್ಲಿವೆ

ಮುಂಬೈ: ಬಾಲಿವುಡ್ ಮಾದಕ ಚೆಲುವೆ, ಲೈಲಾ ಸನ್ನಿ ಲಿಯೋನ್ ಇಂದು ತಮ್ಮ 38ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. 2012ರಲ್ಲಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸನ್ನಿ ತಮ್ಮ ಮೋಹಕತೆಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟಿರುವ ಸನ್ನಿ ಲಿಯೋನ್ ಗೆ ಪತಿ ಡೇನಿಯಲ್ ವೇಬರ್, ಇಂದು ಹಾಗೂ ಎಂದೆಂದಿಗೂ ನೀನೇ ಸೆಕ್ಸಿ ಮಹಿಳೆ ಎಂದು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಸನ್ನಿ ಲಿಯೋನ್ ಕೆನಡದ ಒಂಟೋರಿಯಾದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ್ದು, ಮೂಲ ಹೆಸರು ಕರಣ್‍ಜಿತ್ ಕೌರ್ ವೋಹ್ರಾ. ಇವರು ಪೂಜಾ ಭಟ್ ನಿರ್ಮಾಣದ ‘ಜಿಸ್ಮ್-2’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅದಕ್ಕೂ ಮುಂಚೆ ಭಾರತದ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ತಮ್ಮ ಚಿತ್ರ ಬಿಡುಗಡೆಗೆ ಮುನ್ನವೇ ಸಿನಿ ಅಂಗಳದಲ್ಲಿ ಸದ್ದು ಮಾಡಿದ ಮೋಹಕ ಬೆಡಗಿ ಸನ್ನಿ ಲಿಯೋನ್.

ರೊಮ್ಯಾಂಟಿಕ್ ಪೋಸ್ಟ್: ಪತಿ ಡೇನಿಯಲ್ ವೇಬರ್ ತಮ್ಮಿಬ್ಬರ ರೊಮ್ಯಾಂಟಿಕ್ ಫೋಟೋವನ್ನು ಇನ್ಸ್ ಸ್ಟಾದಲ್ಲಿ ಅಪ್ಲೋಡ್ ಮಾಡಿ, ನಿನ್ನ ಬಗ್ಗೆ ಈ ಪೋಸ್ಟ್ ನಲ್ಲಿ ಕೇವಲ ನಾಲ್ಕು ಪದಗಳಿಂದ ತಿಳಿಸಲು ಸಾಧ್ಯವಿಲ್ಲ. ನಾನು ನೋಡಿದವರಲ್ಲಿ ಅತ್ಯಂತ ಕರುಣಾ ಹೃದಯಿ ಮಹಿಳೆ ನೀನು. ಬೇರೆಯವರು ನಿನ್ನ ಬಗ್ಗೆ ತಿಳಿದುಕೊಂಡಿದ್ದಕ್ಕಿಂತ ಹೆಚ್ಚು ನಾನು ನಿನ್ನನ್ನು ಅರ್ಥ ಮಾಡಿಕೊಂಡಿದ್ದೇನೆ. ನಿನ್ನೊಳಗಿನ ನಂಬಿಕೆ, ಆತ್ಮಸ್ಥೈರ್ಯ ಎಲ್ಲವನ್ನೂ ನಾನು ಗಮನಿಸಿದ್ದೇನೆ. ಜೀವನದ ಪಯಣದಲ್ಲಿ ನಾವಿಬ್ಬರು ಆಯ್ಕೆ ಮಾಡಿಕೊಂಡು ಸುಂದರ ಪ್ರಯಾಣದಲ್ಲಿ ನಾವಿದ್ದೇವೆ.ನಾನು ಕಂಡಂತೆ ಭೂ ಲೋಕದ ಸುಂದರಿಯಾದ ನಿನಗೆ ತಾಯಂದಿರ ದಿನ ಮತ್ತು ಹುಟ್ಟು ಹಬ್ಬದ ಶುಭಾಶಯಗಳು. ಇಂದಿಗೂ ನೀನು ಸೆಕ್ಸಿಯಾಗಿದ್ದು, ಮುಂದೆಯೂ ಎವರ್ ಗ್ರೀನ್ ಚೆಲುವೆ ನೀನು ಎಂದು ಬರೆದುಕೊಳ್ಳುವ ಮೂಲಕ ಪತ್ನಿಯನ್ನು ಬಣ್ಣಿಸಿದ್ದಾರೆ. ಸನ್ನಿ ಲಿಯೋನ್ ಇದೀಗ ಮೂರು ಮಕ್ಕಳ (ಬೇಬಿ ನಿಶಾ, ನೊಹಾ, ಅಶ್ ಹರ್) ತಾಯಿಯಾಗಿದ್ದಾರೆ.

https://www.instagram.com/p/BxXGr0eHPqk/

ಸನ್ನಿ ಲಿಯೋನ್ ಬಗ್ಗೆ ನಿಮಗೆ ಗೊತ್ತಿರದ 12 ವಿಚಾರಗಳು
1. ಸನ್ನಿ ಲಿಯೋನ್ 2001ರ ಮಾರ್ಚ್‍ನಲ್ಲಿ ಅಮೆರಿಕದ ಪೆಂಟ್‍ಹೌಸ್ ಮ್ಯಾಗಜೀನ್‍ನ ಪೆಂಟ್‍ಹೌಸ್ ಪೆಟ್ ಆಫ್ ದಿ ಮಂತ್ ಆಗಿದ್ರು. 2003ರಲ್ಲಿ ಪೆಂಟ್‍ಹೌಸ್ ಪೆಟ್ ಆಫ್ ದಿ ಇಯರ್ ಆಗಿದ್ದಾರೆ.
2. ಸನ್ನಿ ಲಿಯೋನ್‍ಗೆ ಊಟವೆಂದ್ರೆ ಬಲು ಇಷ್ಟ. ಹಬೆಯಲ್ಲಿ ಬೇಯಿಸಿದ ಲೈಮ್ ಫಿಶ್ ಸನ್ನಿಯ ಆಲ್ ಟೈಮ್ ಫೇವರೆಟ್ ಫುಡ್. ದೆಹಲಿಯ ಗಲ್ಲಿಗಳಲ್ಲಿ ಮಾರುವ ಕರಿದ ತಿನಿಸು, ಗೋಲ್‍ಗಪ್ಪಾ ಮತ್ತು ದಹಿ ಚಾಟ್ಸ್, ಪರಾಟಾ ಹಾಗೂ ಚಾಕಲೇಟ್ ಸನ್ನಿಗೆ ಬಲು ಇಷ್ಟವಾದ ತಿನಿಸುಗಳು.

3. ಬಿಬಿಸಿಯ 2016ನೇ ವರ್ಷದ ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರಾಗಿದ್ದರು.
4. ಕ್ಯಾನ್ಸರ್ ರೋಗಿಗಳ ಚಾರಿಟಿಗಳಿಗೆ ಸನ್ನಿ ಧನಸಹಾಯ ಮಾಡ್ತಾರೆ ಹಾಗೂ ಪ್ರಾಣಿ ಹಕ್ಕುಗಳು ಹೋರಾಟಗಾರ್ತಿಯೂ ಆಗಿದ್ದಾರೆ.
5. ನರ್ಸಿಂಗ್ ಓದುತ್ತಿದ್ದ ಸನ್ನಿ ಪಾರ್ಟ್ ಟೈಮ್‍ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ಗೆಳತಿಯ ಸಲಹೆಯ ಮೇರೆಗೆ ಮಾಡೆಲಿಂಗ್ ಮಾಡಲಾರಂಭಿಸಿದ ಸನ್ನಿ ಅದರಲ್ಲೂ ಯಶಸ್ಸು ಗಳಿಸಿದ್ದಾರೆ. ಮುಂದೆ ಪೆಂಟಾಹೌಸ್ ಮ್ಯಾಗಜಿನ್ ಕಡೆಗೆ ಹೋದ್ರು. ಈ ಮ್ಯಾಗಜೀನ್‍ನ ನಿರ್ಮಾತೃ ಸನ್ನಿಗೆ ‘ಲಿಯೋನ್’ ಎಂದು ತನ್ನ ಹೆಸರಿನ ಜೊತೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
6. 2016ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ತನ್ನದೇ ಸ್ವಂತ ಆ್ಯಪ್ ಲಾಂಚ್ ಮಾಡಿದ ಮೊದಲ ಸೆಲೆಬ್ರೆಟಿ ಎಂಬ ಹೆಗ್ಗಳಿಕೆ ಸನ್ನಿ ಲಿಯೋನ್‍ಗಿದೆ.

7. ಸನ್ನಿ ತಾನು ತುಂಬಾ ನಾಚಿಕೆ ಸ್ವಭಾವದವಳು ಅಂತರ್ಮುಖಿ ಅನ್ನೋ ಸಂಗತಿಯನ್ನ ಹೇಳಿಕೊಂಡಿದ್ದರು. 2016ರಲ್ಲಿ ರಯೀಸ್ ಚಿತ್ರದ ಪ್ರಮೋಶನ್ ವೇಳೆ ಎಲ್ಲರೊಂದಿಗೆ ಸ್ನೇಹದಿಂದ ಮಾತನಾಡೋದನ್ನ ಕಲಿತೆ ಎಂಬುದನ್ನ ಬಹಿರಂಗಪಡಿಸಿದ್ದರು.
8. ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮಿರ್ ಖಾನ್ ಅವರೊಂದಿಗೆ ನಟಿಸುವ ಆಸೆಯನ್ನು ಸನ್ನಿ ವ್ಯಕ್ತಪಡಿಸಿದ್ದರು. ಆದರೆ ಇದುವರೆಗೂ ಸನ್ನಿಗೆ ಅಮಿರ್ ಜೊತೆ ನಟಿಸಲು ಅವಕಾಶ ಸಿಕ್ಕಿಲ್ಲ.
9. 2009ರ ಜನವರಿ 20ರಂದು ಸನ್ನಿ ಫಿಲಂ ಮೇಕರ್ ಡೇನಿಯಲ್ ವೇಬರ್ ಅವರೊಂದಿಗೆ ಸಿಖ್ ಸಂಪ್ರದಾಯದಂತೆ ಮದುವೆ ಆಗುವುದರೊಂದಿಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ಡೇನಿಯಲ್ ತಮ್ಮ ಪತ್ನಿಯನ್ನು `ಬೇಬಿ’ ಎಂದು, ಸನ್ನಿ ತಮ್ಮ ಪತಿಯನ್ನು ‘ಡಾಲಿ’ ಎಂದು ಪ್ರೀತಿಯಿಂದ ಕರೆಯುತ್ತಾರಂತೆ.

10. ಟೋರೆಂಟೂ ಮೂಲದ ನಿರ್ದೇಶಕ ದಿಲೀಪ್ ಮೆಹ್ತಾ ಸನ್ನಿ ಬಗ್ಗೆ ಸಾಕ್ಷ್ಯಚಿತ್ರವೊಂದನ್ನ ತಯಾರಿಸಿದ್ದು, ಇದು 2016ರಲ್ಲಿ ಟೊರಾಂಟೋ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ನಲ್ಲಿ ಪ್ರದರ್ಶನಗೊಂಡಿತ್ತು. ಆದರೆ ಇದನ್ನು ಭಾರತದಲ್ಲಿ ರಿಲೀಸ್ ಮಾಡುವುದು ಸನ್ನಿಗೆ ಇಷ್ಟವಿಲ್ಲ.
11. ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಬಗ್ಗೆ ಪ್ರತಿದಿನ ಸಾಕಷ್ಟು ಟ್ರಾಲ್‍ಗಳು ಹರಿದಾಡುತ್ತವೆ. ಇದರಿಂದ ಮುಕ್ತಿ ಹೊಂದಲು ಸನ್ನಿಯ ಬಳಿ ಒಂದು ಮಂತ್ರವಿದೆ- ಅದೇ ಅವರನ್ನು ಬ್ಲಾಕ್ ಮಾಡುವುದು.
12. ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಲಿಯೋನ್ ಬಾಲಿವುಡ್ ಸ್ಟಾರ್ ಗಳನ್ನು ಫಾಲೋ ಮಾಡ್ತಾರೆ. ಮಾಧುರಿ ದೀಕ್ಷಿತ್, ಆಮೀರ್ ಖಾನ್, ಸೋನಮ್ ಕಪೂರ್ ಮತ್ತು ರಣ್‍ವೀರ್ ಸಿಂಗ್ ಅಂದರೆ ಸನ್ನಿಗೆ ಇಷ್ಟ.

Share This Article
Leave a Comment

Leave a Reply

Your email address will not be published. Required fields are marked *