ಹಾರರ್‌ ಕಥೆ ಹೇಳಲು ಸಜ್ಜಾದ ಸನ್ನಿ ಲಿಯೋನ್

Public TV
1 Min Read

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ (Sunny Leone) ಸದ್ಯ ಬಾಲಿವುಡ್ ಸಿನಿಮಾಗಳ ಜೊತೆ ಬಹುಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಸನ್ನಿ ಬೆಚ್ಚಿ ಬೀಳಿಸಲು ಬರುತ್ತಿದ್ದಾರೆ. ‘ಮಂದಿರ’ (Mandira Film) ಚಿತ್ರದ ಮೂಲಕ ಹಾರರ್ ಕಥೆ ಹೇಳೋಕೆ ರೆಡಿಯಾಗಿದ್ದಾರೆ.

‘ಮಂದಿರ’ ಚಿತ್ರದಲ್ಲಿನ ಸನ್ನಿ ಪೋಸ್ಟರ್ ರಿವೀಲ್ ಆಗಿದೆ. ರಾಣಿಯ ಲುಕ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ತಲೆಯ ಮೇಲೆ ಕಿರೀಟ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಖ್ಯಾತ ಕಿರುತೆರೆ ನಟಿ ದಿವ್ಯಾಂಕಾಗೆ ಅಪಘಾತ: ಕಾಲಿಗೆ ಶಸ್ತ್ರ ಚಿಕಿತ್ಸೆ

ಸನ್ನಿ ಲಿಯೋನ್ (Sunny Leone) ಇದೀಗ ಸೌತ್ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಸದ್ಯ ‘ಮಂದಿರ’ ಎಂಬ ಸಿನಿಮಾವನ್ನು ನಟಿ ಒಪ್ಪಿಕೊಂಡಿದ್ದಾರೆ. ಹಾರರ್ ಕಮ್ ಕಾಮಿಡಿ ರೂಪದಲ್ಲಿ ಸಿನಿಮಾ ಮೂಡಿ ಬರಲಿದೆ. ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

ಸನ್ನಿ ನಟನೆಯ ‘ಮಂದಿರ’ (Mandira Film) ಚಿತ್ರಕ್ಕೆ ಆರ್. ಯುವನ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಸುಧಾಕರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ ಚಿತ್ರತಂಡ.

Share This Article