ತಾನೇಕೆ ಪೋರ್ನ್ ಸ್ಟಾರ್ ಆದೆ, ಬಾಲಿವುಡ್ ಗೆ ಬಂದಿದ್ದು ಹೇಗೆ ಎಂಬ ರಹಸ್ಯ ರಿವೀಲ್ ಮಾಡಲಿದ್ದಾರೆ ಸನ್ನಿ ಲಿಯೋನ್

Public TV
1 Min Read

ಮುಂಬೈ: ತನ್ನ ಮಾದಕತೆ ಮತ್ತು ಮೈ ಮಾಟದಿಂದಲೇ ಹೆಸರು ಮಾಡಿರುವ ನಟಿ ಸನ್ನಿ ಲಿಯೋನ್ ಕೆಲವೇ ದಿನಗಳಲ್ಲಿ ತಮ್ಮ ಆತ್ಮಕಥನವನ್ನ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಸನ್ನಿ ಲಿಯೋನ್ ಬಯೋಗ್ರಾಫಿಗೆ ‘ಕರೆನ್ಜಿತ್’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಕರೆನ್ಜಿತ್ ಕೌರ್ ವೋಹ್ರಾ ಎಂಬುದು ಸನ್ನಿ ಲಿಯೋನ್ ಅವರ ಮೊದಲ ಹೆಸರಾಗಿದ್ದು, ಆದೇ ಹೆಸರನ್ನೆ ಈ ಪುಸ್ತಕಕ್ಕೆ ಇಡಲಾಗಿದೆ. ನನ್ನ ಜೀವನಚರಿತ್ರೆ ಶೀಘ್ರದಲ್ಲೇ ವೆಬ್ ವೇದಿಕೆ ಜೀ5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಸನ್ನಿ ತಿಳಿಸಿದ್ದಾರೆ.

ಆತ್ಮಕಥನದಲ್ಲಿ ಏನಿರಲಿದೆ?: ತಾವು ಕೆನಾಡವನ್ನು ತೊರೆದು ಭಾರತಕ್ಕೆ ಬರಲು ಕಾರಣವೇನು? ಕೆರನ್ಜಿತ್ ಆಗಿದ್ದವಳು ಸನ್ನಿ ಲಿಯೋನ್ ಅಂತಾ ಬದಲಾಗಿದ್ದು ಹೇಗೆ? ತಾನೇಕೆ ಪೋರ್ನ್ ಸ್ಟಾರ್ ಆದೆ ಎಂಬ ಖಾಸಗಿ ಮಾಹಿತಿಗಳು ಆತ್ಮ ಕಥನದಲ್ಲಿರಲಿವೆ ಅಂತಾ ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

ಸನ್ನಿ ಲಿಯೋನ್ 2012 ರಲ್ಲಿ `ಜಿಸ್ಮ್ 2′ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ನೀಡಿದ್ರು. ಸನ್ನಿ 2016 ರಲ್ಲಿ ದಿಲೀಪ್ ಮೆಹ್ತಾ ಅವರ ಸಾಕ್ಷ್ಯಚಿತ್ರದಲ್ಲಿಯೂ ನಟಿಸಿದ್ದರು.

2011 ರಲ್ಲಿ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡ ನಂತರ ಸನ್ನಿ ಅವರು ಭಾರತದಲ್ಲಿ ಮನೆ ಮಾತಾಗಿದ್ದಾರೆ. ಸ್ಪ್ಲಿಟ್ಸ್ವಿಲ್ಲಾದಲ್ಲಿ ಸನ್ನಿ ಭಾಗವಹಿಸುವಿಕೆಯಿಂದಾಗಿ ಅವರ ಜನಪ್ರಿಯತೆ ಇನ್ನು ಬಲಗೊಂಡಿತ್ತು. ನಂತರ ಇದು ವಯಸ್ಕರ ಹಾಸ್ಯ ಮತ್ತು ಹಾರ್‍ರ್ ಪ್ರಕಾರದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಲಿಯೋನ್ ಅವರು ಈಗಾಗಲೇ ಶೂಟ್ ಔಟ್ ಆ್ಯಟ್ ವಡಾಲಾ (2013), ರಾಗಿಣಿ ಎಂಎಂಎಸ್-2 (2014), ರೈಯಿಸ್ (2017) ಮತ್ತು ಬಾದ್ ಶಾಹೋ (2017) ನಲ್ಲಿ ಸಿನಿಮಾಗಳಲ್ಲಿ ಮಿಂಚಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *