ಹೊಸ ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್

Public TV
1 Min Read

ಬಾಲಿವುಡ್ ನಟ ಸನ್ನಿ ಡಿಯೋಲ್‌ಗೆ ‘ಗದರ್ 2’ (Gadar 2) ಸಿನಿಮಾದ ಸಕ್ಸಸ್‌ನಿಂದ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿರುವ ಸನ್ನಿ ಡಿಯೋಲ್ (Sunny Deol) ಈಗ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ.

ಜೂನ್ 13ನೇ ದಿನಾಂಕದಂದು ಇದೇ 27 ವರ್ಷಗಳ ಹಿಂದೆ ‘ಬಾರ್ಡರ್’ ಎಂಬ ಸಿನಿಮಾ ಕಥೆ ಹೇಳಲಾಗಿತ್ತು. ಈಗ ಇದೇ ದಿನಾಂಕದಂದು ‘ಬಾರ್ಡರ್ ಪಾರ್ಟ್ 2’ (Border 2) ಸಿನಿಮಾ ಬರೋದಾಗಿ ಸನ್ನಿ ಡಿಯೋಲ್ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

 

View this post on Instagram

 

A post shared by Sunny Deol (@iamsunnydeol)

ಇಂಡಿಯಾದ ಬಿಗ್‌ಯೇಷ್ಟ್ ವಾರ್ ಎಂದು ಅಡಿಬರಹ ‘ಬಾರ್ಡರ್ 2’ ಬಗ್ಗೆ ಘೋಷಣೆ ಮಾಡಿದ್ದಾರೆ. ಮೊದಲ ಭಾಗದಲ್ಲಿ ಮೇಜರ್ ಕುಲದೀಪ್ ಸಿಂಗ್ ಎಂಬ ಪಾತ್ರದಲ್ಲಿ ನಟ ಸನ್ನಿ ಜೀವತುಂಬಿದ್ದರು. ಈ ಚಿತ್ರದ ಮುಂದುವರೆದ ಭಾಗವನ್ನೇ ಅದ್ಧೂರಿಯಾಗಿ ತೋರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಅನುರಾಗ್ ಸಿಂಗ್ ಅವರ ನಿರ್ದೇಶನದಲ್ಲಿ ಬಾರ್ಡರ್ 2 ಸಿನಿಮಾ ಮೂಡಿ ಬರಲಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಿದೆ ಚಿತ್ರತಂಡ.

Share This Article