ಫಾಜಿಲ್‌ ಕುಟುಂಬ ಸರ್ಕಾರ ನೀಡಿದ್ದ ಪರಿಹಾರದ ಹಣವನ್ನು ಸುಹಾಸ್‌ ಕೊಲೆಗೆ ಬಳಸಿದೆ: ಸುನಿಲ್‌ ಕುಮಾರ್‌ ಆರೋಪ

Public TV
2 Min Read

– ಸರ್ಕಾರದ ಈ ಪರಿಹಾರ ಇನ್ನೆಷ್ಟು ಕೊಲೆಗೆ ಬಳಕೆಯಾಗಬೇಕು?: ಬಿಜೆಪಿ ಶಾಸಕ

ಬೆಂಗಳೂರು: ಫಾಜಿಲ್‌ (Fazil) ಕುಟುಂಬ ಸರ್ಕಾರ ನೀಡಿದ ಪರಿಹಾರದ ಹಣವನ್ನು ಸುಹಾಸ್‌ ಶೆಟ್ಟಿ (Suhas Shetty) ಕೊಲೆಗೆ ಬಳಸಿಕೊಂಡಿದೆ ಎಂದು ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ (Sunil Kumar) ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಶಾಸಕರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಫಾಜಿಲ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿತ್ತು. ಈ ಪರಿಹಾರದ ಹಣವನ್ನು ಫಾಜಿಲ್ ಕುಟುಂಬ ಕೊಲೆಗೆ ಬಳಸಿಕೊಂಡಿದೆ. ಸುಹಾಸ್ ಶೆಟ್ಟಿ ಹತ್ಯೆಗೆ ಫಾಜಿಲ್ ಸೋದರ 5 ಲಕ್ಷ ರೂ.ಸುಪಾರಿ ನೀಡಿದ್ದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್

ಸರ್ಕಾರ ನೀಡಿದ ಈ ಪರಿಹಾರ ಇನ್ನೆಷ್ಟು ಕೊಲೆಗೆ ಬಳಕೆಯಾಗಬೇಕು? ಮೊದಲು ಬಡ್ಡಿ ಸಹಿತ ಈ ಹಣ ವಸೂಲಿಯಾಗಲಿ. ಸರ್ಕಾರ ರಚಿಸುವ ಆ್ಯಂಟಿ ಕಮ್ಯುನಲ್ ಫೋರ್ಸ್ (ಎಸಿಎಫ್) ಅಸ್ತಿತ್ವಕ್ಕೆ ಬಂದ ತಕ್ಷಣ ಮೊದಲು ಮಾಡಬೇಕಾದ ಕೆಲಸ ಇದಾಗಲಿ. ಇಲ್ಲವಾದರೆ ಎಸಿಎಫ್ ರಚನೆಯ ಉದ್ದೇಶ ಹಿಂದುತ್ವದ ದಮನ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಅವರನ್ನು ಬಜ್ಪೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಯಿತು. ಫಾಜಿಲ್‌ ಹತ್ಯೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಮೇಲೂ ಐದು ಕೇಸ್‌ಗಳಿವೆ.. ಅದ್ಕೆ ಅವರ ಮನೆಗೆ ನಾವು ಭೇಟಿ ಕೊಟ್ಟಿಲ್ಲ: ಪರಮೇಶ್ವರ್

Share This Article