11 ವರ್ಷಗಳ ಪ್ರೀತಿಗೆ ಫುಲ್‌ ಸ್ಟಾಪ್- ತಾನಿಯಾ ಜೊತೆ ಅಹಾನ್ ಶೆಟ್ಟಿ ಬ್ರೇಕಪ್

Public TV
1 Min Read

ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರ ಅಹಾನ್ ಶೆಟ್ಟಿ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 11 ವರ್ಷಗಳ ಪ್ರೀತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮಾಡೆಲ್ ತಾನಿಯಾ ಶ್ರಾಫ್ (Tania Shroff) ಜೊತೆ ಅಹಾನ್ ಶೆಟ್ಟಿ (Ahan Shetty) ಬ್ರೇಕಪ್ ಮಾಡಿಕೊಂಡಿದ್ದಾರೆ.

ಬಾಲ್ಯದ ಸ್ನೇಹಿತರಾಗಿದ್ದ ತಾನಿಯಾ-ಅಹಾನ್ ಶೆಟ್ಟಿ ಜೋಡಿ ಕಳೆದ 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಅಹಾನ್ ಕುಟುಂಬದ ಕಾರ್ಯಕ್ರಮಗಳಲ್ಲಿ ತಾನಿಯಾ ಭಾಗಿಯಾಗುತ್ತಿದ್ದರು. ಅಥಿಯಾ-ಕೆ.ಎಲ್ ರಾಹುಲ್ ಮದುವೆಯಲ್ಲೂ ಅಹಾನ್ ಶೆಟ್ಟಿ ಜೊತೆ ತಾನಿಯಾ ಮಿಂಚಿದ್ದರು. ಇದನ್ನೂ ಓದಿ:‘ಬಿಗ್ ಬಾಸ್’ ಮನೆ ಪ್ರವೇಶ ಮಾಡಲಿದ್ದಾರೆ ವಿಜಯ್ ರಾಘವೇಂದ್ರ

ಇಬ್ಬರ ಡೇಟಿಂಗ್ ಬಗ್ಗೆ ಇಡೀ ಬಿಟೌನ್ ಅಂಗಳಕ್ಕೆ ಈ ವಿಚಾರ ತಲುಪಿತ್ತು. ಕಳೆದ ತಿಂಗಳು ನವೆಂಬರ್‌ನಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬ್ರೇಕಪ್ ಬಳಿಕ ತಾನಿಯಾ-ಅಹಾನ್, ತಮ್ಮ ಕೆರಿಯರ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.

ಬ್ರೇಕಪ್ ಬಗ್ಗೆ ತಾನಿಯಾ-ಅಹಾನ್ ಜೋಡಿ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಅನ್‌ಫಾಲೋ ಕೂಡ ಮಾಡಿಲ್ಲ. ಬ್ರೇಕಪ್ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಇಬ್ಬರೂ ಸೈಲೆಂಟ್ ಆಗಿದ್ದಾರೆ.

Share This Article