ಸಂಡೇ ಸ್ಪೆಷಲ್‌ ಮನೆಯಲ್ಲೇ ಮಾಡಿ ಕೀಮಾ ರೋಲ್‌

Public TV
1 Min Read

ಚಿಕನ್‌ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಾನ್‌ ವೆಜ್‌ ಪ್ರಿಯರಿಗಂತೂ ಪಂಚಪ್ರಾಣ. ಅದರಲ್ಲೂ ಜನ ವೆರೈಟಿಯಾಗಿ ತಿನ್ನಲು ಇಷ್ಟಪಡುತ್ತಾರೆ. ಅದಕ್ಕೆ ಇಂದು ಸಂಡೇ ಸ್ಪೆಷಲ್‌ ಕೀಮಾ ರೋಲ್‌ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು:
ಚಿಕನ್ ಕೀಮಾ
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಪೆಪ್ಪರ್‌ ಪೌಡರ್‌
ಜೀರಿಗೆ ಪುಡಿ
ದಾಲ್ಚಿನ್ನಿ ಪುಡಿ
ಕೆಂಪುಮೆಣಸು
ಗರಂ ಮಸಾಲಾ ಪುಡಿ
ಹಸಿರು ಮೆಣಸಿನಕಾಯಿ
ಮೊಟ್ಟೆ
ಕೊತ್ತಂಬರಿ
ರುಚಿಗೆ ಉಪ್ಪು

ಮೊದಲಿಗೆ ಒಂದು ಬಾಣಲಿಗೆ ಎಣ್ಣೆ ಹಾಕಿ, ಅದಕ್ಕೆ ತೊಳೆದುಕೊಂಡ ಚಿಕನ್‌ ಕೀಮಾ ಹಾಕಿ. ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಪೆಪ್ಪರ್‌ ಪೌಡರ್‌, ಜೀರಿಗೆ ಪುಡಿ, ದಾಲ್ಚಿನ್ನಿ ಪುಡಿ, ಖಾರದ ಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ.

ಮಿಶ್ರಣಕ್ಕೆ ಒಂದು ಮೊಟ್ಟೆ ಒಡೆಯಿರಿ, ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾ ಹಾಕಿ ಕಲಸಿ, ಕೊನೆಗೆ ಅದರ ಮೇಲೆ ಕೊತ್ತಂಬರಿ ಉದುರಿಸಿ. ಕೊನೆಗೆ ಮಾಡಿದ ಚಪಾತಿಗೆ ಮಯೋನಿಸ್‌ ಹಚ್ಚಿ. ಈ ಚಿಕನ್‌ ಮಿಶ್ರಣವನ್ನು ಅದರ ಮೇಲೆ ಹಾಕಿ. ಚಪಾತಿಯನ್ನು ಸುತ್ತಿ. ಮಯೋನಿಸ್‌ ಜೊತೆಗೆ ತಿನ್ನಬಹುದು.

Share This Article