ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್​​​ಗೆ ರಿಲೀಫ್

Public TV
3 Min Read

ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ದೊಡ್ಡ ರಿಲೀಫ್ ಸಿಕ್ಕಿದೆ. ದೆಹಲಿಯ ರೌಸ್ ಅವೆನ್ಯೂ ಸ್ಪೆಷಲ್ ಕೋರ್ಟ್ ಬುಧವಾರ ಸುನಂದಾ ಪುಷ್ಕರ್ ಮರಣ ಪ್ರಕರಣದಿಂದ ಶಶಿ ತರೂರ್ ಅವರನ್ನು ಖುಲಾಸೆಗೊಳಿಸಿದೆ. .

2014ರಲ್ಲಿ ದೆಹಲಿ ಹೋಟೆಲ್ ನಲ್ಲಿ ಸುನಂದಾ ಅವರ ಮೃತದೇಹ ಪತ್ತೆಯಾಗಿತ್ತು. ಸುನಂದಾ ಮರಣಕ್ಕೆ ಶಶಿ ತರೂರ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳು ಕೇಳಿ ಬಂದಿದ್ದವು.

ಬುಧವಾರ ತೀರ್ಪು ಪ್ರಕಟವಾದ ಬಳಿಕ ಶಶಿ ತರೂರ್ ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ ಏಳು ವರ್ಷಗಳ ಸಂಕಷ್ಟದಿಂದ ಮುಕ್ತಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತರೂರ್ ಗೆ ಅಕ್ರಮ ಸಂಬಂಧ-ಸುನಂದಾ ಗೆಳತಿ ಹೇಳಿಕೆ:
ಸುನಂದಾ ಪುಷ್ಕರ್ ಗೆಳತಿ, ಪತ್ರಕರ್ತೆ ನಳಿನಿ ಸಿಂಗ್ ಹೇಳಿಕೆ ಈ ಪ್ರಕರಣದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಮೆಹರ್ ತರಾರ್ ಎಂಬ ಮಹಿಳೆ ಜೊತೆ ಶಶಿ ತರೂರ್ ಅಕ್ರಮ ಸಂಬಂಧ ಹೊಂದಿದ್ದರು. ಒಮ್ಮೆ ಶಶಿ ತರೂರ್ ಮತ್ತು ಮೆಹರ್ ದುಬೈನ ಹೋಟೆಲ್ ನಲ್ಲಿ ಮೂರು ದಿನ ಉಳಿದುಕೊಂಡಿದ್ದರು ಎಂದು ಸುನಂದಾ ನನ್ನ ಮುಂದೆ ಹೇಳಿಕೊಂಡಿದ್ದರು. ಒಮ್ಮೆ ಸುನಂದಾ ನನಗೆ ಫೋನ್ ಮಾಡಿದಾಗ ದುಃಖದಲ್ಲಿದ್ದರು. ತರೂರ್ ಮತ್ತು ಮೆಹರ್ ನಡುವೆ ಮೆಸೇಜ್ ಮೂಲಕ ಸಂಪರ್ಕ ಹೊಂದಿದ್ದರು. ಚುನಾವಣೆ ಬಳಿಕ ಸುನಂದಾಗೆ ವಿಚ್ಛೇದನ ನೀಡುವದಾಗಿ ತರೂರ್ ಮೆಸೇಜ್ ಮಾಡಿದ್ದರು ಎಂದು ನಳಿನಿ ಸಿಂಗ್ ಹೇಳಿಕೆ ದಾಖಲಿಸಿದ್ದರು. ಇದನ್ನೂ ಓದಿ: ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ

ದೆಹಲಿಯ ಹೋಟೆಲ್‍ನಲ್ಲಿ ಶವ:
ಜುಲೈ 17, 2014ರಂದು ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಶವ ಪತ್ತೆಯಾಗಿತ್ತು. ಲಕ್ಷುರಿ ಕೋಣೆಯ ಬೆಡ್ ಮೇಲೆ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸುನಂದಾ ಮರಣದ ಬಳಿಕ ಶಶಿ ತರೂರ್ ಆರೋಪಗಳು ಕೇಳಿ ಬಂದ ಹಿನ್ನೆಲೆ ದೆಹಲಿ ಪೊಲೀಸರು ಐಪಿಸಿ 498ಎ ಮತ್ತು 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿತ್ತು?
* ಸುನಂದಾ ದೇಹದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿಲ್ಲ.
* ಸುನಂದಾ ಅವರ ಮುಖ ಮತ್ತು ಕೈಗಳ ಮೇಲೆ 10ಕ್ಕೂ ಹೆಚ್ಚು ಪರಿಚಿದ ರೀತಿಯ ಗುರುತು ಕಂಡು ಬಂದಿದ್ದವು. ಆದ್ರೆ ಇದು ಪ್ರಾಣಕ್ಕೆ ಅಪಾಯ ತಂದಿದೆ ಅಂತ ಹೇಳಲು ಸಾಧ್ಯವಿಲ್ಲ.
* ವರದಿ ಪ್ರಕಾರ ಸುನಂದಾ ಅವರದ್ದು ಸಹಜ ಸಾವಲ್ಲ.
* ಸುನಂದಾ ಮರಣಕ್ಕೆ ಪ್ರಮುಖ ಕಾರಣ ಖಿನ್ನತೆಗೆ ತೆಗೆದುಕೊಳ್ಳುತ್ತಿದ್ದ ಅಲ್ಪ್ರಾಜೋಲಮ್ ಔಷಧಿಯ ಓವರ್ ಡೋಸ್ ಆಗಿರುವ ಸಾಧ್ಯತೆ.
* ತಜ್ಞರ ಪ್ರಕಾರ ಅಲ್ಪ್ರಾಜೋಲಮ್ ಔಷಧಿ ಓವರ್ ಡೋಸ್ ಮೆದುಳಿನ ಕಾರ್ಯನಿರ್ವಹಣೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಮೂರ್ಛೆ ಹೋಗಬಹುದು ಅಥವಾ ಸಾವು ಸಂಭವಿಸಬಹುದು.

* ಪೊಲೀಸರು ಸುನಂದಾ ಅವರಿದ್ದ ಕೋಣೆಯಿಂದ ಅಲ್ಪ್ರಾಜೋಲಮ್ ಔಷಧಿಯ ಎರಡು ಖಾಲಿ ಬಾಟೆಲ್ ವಶಕ್ಕೆ ಪಡೆದುಕೊಂಡಿದ್ದರು. ಅಂದು ಅವರು ಸುಮಾರು ಅಲ್ಪ್ರಾಜೋಲಮ್ 27 ಮಾತ್ರೆ ಸೇವಿಸಿದ್ದರು. ಇದನ್ನೂ ಓದಿ: ಒಂದು ಕೇಸ್ ಪತ್ತೆ- ಮೂರು ದಿನ ನ್ಯೂಜಿಲೆಂಡ್ ಲಾಕ್‍ಡೌನ್

* ಸುನಂದಾ ಅವರ ಮರಣಕ್ಕೆ ವಿಷವೇ ಕಾರಣ. ಆದ್ರೆ ಮರಣೋತ್ತರ ವರದಿ ಇದನ್ನು ಆತ್ಮಹತ್ಯೆ ಎಂದು ದೃಢಪಡಿಸಿಲ್ಲ ಮತ್ತು ಇದರ ಬಗ್ಗೆ ಅನುಮಾನ ಸಹ ವ್ಯಕ್ತಪಡಿಸಿಲ್ಲ. ಆದ್ರೆ ವೈದ್ಯರು ಸುನಂದಾ ದೇಹದಲ್ಲಿದ್ದ ವಿಷ ಅಂಶದ ಮೂಲವನ್ನು ಖಚಿತಪಡಿಸಿಲ್ಲ.
* ಸುನಂದಾ ಅವರ ಸಾವು ಸಂಜೆ ನಾಲ್ಕರಿಂದ ಏಳು ಗಂಟೆ ಮಧ್ಯೆ ಸಂಭವಿಸಿದೆ.

* ಸುನಂದಾ ಪುಷ್ಕರ್ ಸಾವು ಉದ್ದೇಶಪೂರ್ವಕವಾಗಿ ಓವರ್ ಡೋಸ್ ತೆಗೆದುಕೊಂಡಿದಲ್ಲ. ಅವರ ಮಾತ್ರೆಗಳನ್ನು ಉದ್ದೇಶಪೂರ್ವಕವಾಗಿ ಓವರ್ ಡೋಸ್ ಮಾಡಲಾಗಿತ್ತು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿತ್ತು. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

Share This Article
Leave a Comment

Leave a Reply

Your email address will not be published. Required fields are marked *