ಶ್ರೀರಂಗಪಟ್ಟಣದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ

1 Min Read

ಮಂಡ್ಯ: ವರ್ಷದ ಮೊದಲ ಹಬ್ಬ ಸಂಕ್ರಾಂತಿ (Sankranti) ದಿನದಂದು ಸೂರ್ಯ ತನ್ನ ಪಥವನ್ನ ಉತ್ತರಾಯಣಕ್ಕೆ ಬದಲಿಸಿದ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಕಾಶಿ ಚಂದ್ರಮೌಳೇಶ್ವರ ಸ್ವಾಮಿಯ (Chandramouleshwara Temple) ಗರ್ಭ ಗುಡಿಯ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶಿಸಿದೆ.

ಪ್ರತಿ ವರ್ಷ ಸಂಕ್ರಾಂತಿ ದಿನದಂದು ಸೂರ್ಯ ರಶ್ಮಿ ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಪ್ರತೀತಿ ಇದೆ. ಅದೇ ರೀತಿ ಇಂದು ಬೆಳಗ್ಗೆ 7.50 ರ ವೇಳೆಯಲ್ಲಿ ಸೂರ್ಯ ರಶ್ಮಿ ಶಿವ ಲಿಂಗದ ಮೇಲೆ ಬಿದ್ದಿದೆ. ಇದನನ್ನೂ ಓದಿ: ಹಳ್ಳಿಗಳಲ್ಲಿ ಸುಗ್ಗಿ ಸಂಕ್ರಾಂತಿ – ಹಬ್ಬ ಆಚರಣೆ ಹೇಗಿರುತ್ತೆ?

ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳುತ್ತಿದ್ದಂತೆ ಕಾಶಿ ಚಂದ್ರಮೌಳೇಶ್ವರಸ್ಚಾಮಿಗೆ ವಿವಿಧ ಅಭಿಷೇಕ ಮಾಡಿ ವಿಶೇಷ ಪೂಜೆಯನ್ನು ಚಂದ್ರನ ಆಶ್ರಮದ ಪೀಠಾಧ್ಯಕ್ಷ ಮಹಾಂತ ಶಿವಯೋಗಿ ಸ್ವಾಮೀಜಿ ನೆರವೇರಿಸಿದರು. ಈ ವಿಶೇಷ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ. ಇದನನ್ನೂ ಓದಿ: ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ – ಕೆ.ಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

Share This Article