ಖುದ್ದು ಕೋರ್ಟಿಗೆ ಹಾಜರಾಗುವಂತೆ ನಿರ್ಮಾಪಕ ಕುಮಾರ್, ಸುರೇಶ್ ಗೆ ಸಮನ್ಸ್

Public TV
2 Min Read

ಕಿಚ್ಚ ಸುದೀಪ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ನಿರ್ಮಾಪಕರಾದ ಎನ್.ಎಂ. ಸುರೇಶ್ (N.M. Suresh) ಮತ್ತು ಎಂ.ಎನ್. ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮೊನ್ನೆಯಷ್ಟೇ ನಟ ಸುದೀಪ್ ಖುದ್ದು ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

ಸುದೀಪ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 13ನೇ ಎಸಿಎಂಎಂ ಕೋರ್ಟ್ ಆರೋಪಿಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವುದರ ಜೊತೆಗೆ ಆಗಸ್ಟ್ 26ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ (Summons) ಜಾರಿ ಮಾಡಿದೆ.

ಈವರೆಗೂ ಆಗಿದ್ದೇನು?

ನಿರ್ಮಾಪಕ ಕುಮಾರ್ ಮತ್ತು ನಟ ಸುದೀಪ್‌ ನಡುವೆ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಮೊನ್ನೆಯಷ್ಟೇ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ತೀರ್ಪು ಕಾಯ್ದಿರಿಸಿದ್ದರು. ನಿನ್ನೆಯಷ್ಟೇ ತೀರ್ಪು ಪ್ರಕಟವಾಗಿದ್ದು, ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ‌ ಅಂಗೀಕಾರವಾಗಿದೆ. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್  ಜಾರಿಯಾಗಿದೆ.

ನಿರ್ಮಾಪಕ ಎಂ.ಎನ್‌. ಕುಮಾರ್‌ (M.n Kumar) ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್‌ (Sudeep) ತಮ್ಮ ಹೇಳಿಕೆಯನ್ನು ನಿನ್ನೆ ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್‌ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.

13ನೇ ಎಸಿಎಂಎಂ ಕೋರ್ಟ್‌ ಮುಂದೆ ಗುರುವಾರ ಹಾಜರಾದ ನಟ ಸುದೀಪ್‌, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದ್ದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಸುದೀಪ್‌ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್‌ ದಾಖಲಿಸಿದ್ದರು.

 

ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್‌ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್‌ ನೀಡಿದರು. ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್