ಸುಡುವ ಬೇಸಿಗೆಯಲ್ಲಿ ಯಾವ ಬಟ್ಟೆ ಬೆಸ್ಟ್- ಇಲ್ಲಿದೆ ಟಿಪ್ಸ್

Public TV
3 Min Read

ಬೇಸಿಗೆ ಆರಂಭವಾಯಿತು. ನಮ್ಮೊಳಗೂ, ಹೊರಗೂ ಧಗೆ ಸಹಿಸಲಸಾಧ್ಯ ಎನ್ನುವಂತಹ ವಾತಾವರಣ. ಈ ರಣಬಿಸಿಲಿಗೆ ಏನೋ ಅಸಹನೆ, ಕಿರಿಕಿರಿ. ಬೆಳಗಾದ್ರೆ ಕೆಲಸದ ಗಡಿಬಿಡಿ. ಕಚೇರಿಗೆ ತೆರಳಬೇಕು ಎಂದರೆ ಇವತ್ತು ಯಾವ ಬಟ್ಟೆ ಧರಿಸಲಿ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತದೆ. ನಾವು ಧರಿಸುವ ಬಟ್ಟೆ ನೋಡಲು ಸುಂದರವಾಗಿದ್ದರೆ ಮಾತ್ರ ಸಾಲದು, ಮನಸ್ಸಿಗೂ ದೇಹಕ್ಕೂ ಹಿತಕರವಾಗಿರಬೇಕು.‌ ಇದನ್ನೂ ಓದಿ:‘ಎಕ್ಕ’ ಸಿನಿಮಾದ ಫಸ್ಟ್‌ ಸಾಂಗ್‌ ಔಟ್- ಯುವ ರಾಜ್‌ಕುಮಾರ್ ಜಬರ್ದಸ್ತ್ ಪರ್ಫಾಮೆನ್ಸ್

ಬೇಸಿಗೆಯಲ್ಲಿ (Summer) ಕಂಫರ್ಟಬಲ್ ಆಗಿರಲು ಯಾವ ರೀತಿಯ ಡ್ರೆಸ್ ಬೆಸ್ಟ್, ಸಮ್ಮರ್‌ನಲ್ಲೂ ಫ್ಯಾಶನೆಬಲ್ ಆಗಿ ಕಾಣಿಸಿಕೊಳ್ಳಲು ಯಾವ ರೀತಿಯ ಉಡುಪು ಒಳ್ಳೆಯದು, ಬೇಸಿಗೆ ಕಾಲದಲ್ಲಿ ನಿಮ್ಮ ವಾಡ್ರೋಬ್‌ನಲ್ಲಿ ಇರಲೇಬೇಕಾದ ಬಟ್ಟೆಗಳು (Dress) ಯಾವುದು ಎನ್ನುವ ಡಿಟೈಲ್ಸ್ ಇಲ್ಲಿದೆ.

1. ಫ್ಯಾಬ್ರಿಕ್ ಮತ್ತು ಮೆಟೀರಿಯಲ್ಸ್ ಹೀಗಿರಲಿ:

ಕಾಟನ್, ಲೆನಿನ್ ಅಥವಾ ಜರ್ಸಿಯಿಂದ ಮಾಡಿದ ಬಟ್ಟೆಗಳು ಸಮ್ಮರ್‌ಗೆ ಸೂಕ್ತ. ಈ ಬಟ್ಟೆಗಳು ಗಾಳಿಯಾಡಲು ಮತ್ತು ದೇಹವು ಶಾಖವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಈ ರೀತಿಯ ಮೆಟೀರಿಯಲ್ಸ್ ನಿಮಗೆ ಕಡಿಮೆ ಬೆವರುವಂತೆ ಮಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲೂ ನೀವು ಕೂಲ್ ಆಗಿರಲು ಬಯಸಿದ್ರೆ ಕಾಟನ್, ಲೆನಿನ್ ಅಥವ ಜೆರ್ಸಿಯಿಂದ ಮಾಡಿದ ಟೀಶರ್ಟ್‌ಳನ್ನು ಧರಿಸಿ.

2. ತಿಳಿ ಬಣ್ಣದ ಬಟ್ಟೆಗಳನ್ನು ಆರಿಸಿ:

ಬೇಸಿಗೆಯಲ್ಲಿ ಧರಿಸಲು ತಿಳಿ ಬಣ್ಣದ ಬಟ್ಟೆಗಳನ್ನು ಆರಿಸಿ. ನಿಮ್ಮ ಬೇಸಿಗೆಯ ಉಡುಪನ್ನು ಆರಿಸುವಾಗ, ಗಾಢ ಮತ್ತು ದಪ್ಪ ಬಣ್ಣಗಳಿಂದ ದೂರವಿರಿ. ಕಪ್ಪು ಬದಲಿಗೆ, ಬಿಳಿ, ಕೆನೆಬಣ್ಣ ಅಥವಾ ಬೂದು ಬಣ್ಣವನ್ನು ಧರಿಸಿ. ತೆಳು-ಬಣ್ಣದ ಬಣ್ಣಗಳು ಗಾಢ ಬಣ್ಣಗಳಂತೆ ಸೂರ್ಯನ ಬಿಸಿಲನ್ನು ಹೀರಿಕೊಳ್ಳುವುದಿಲ್ಲ, ಬೇಸಿಗೆಗೆ ತಿಳಿ ಬಣ್ಣ ಹೆಚ್ಚು ಸೂಕ್ತ.

3. ಪಾಲಿಯೆಸ್ಟರ್, ನೈಲಾನ್ ಅಥವಾ ಅಕ್ರಿಲಿಕ್ ಬಟ್ಟೆಗಳನ್ನು ತಪ್ಪಿಸಿ:

ಪಾಲಿಯೆಸ್ಟರ್, ನೈಲಾನ್ ಅಥವಾ ಅಕ್ರಿಲಿಕ್ ಬಟ್ಟೆಗಳು ಚೆನ್ನಾಗಿ ಕಾಣಿಸಬಹುದು. ಆದರೆ ಅವು ವಾಸ್ತವವಾಗಿ ಶಾಖವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ನೀವು ಹೆಚ್ಚು ಬೆವರಬಹುದು. ಹೆಚ್ಚು ಬೆವರುವುದನ್ನು ತಪ್ಪಿಸಲು ಮತ್ತು ಅತ್ಯಂತ ಆರಾಮದಾಯಕವಾಗಿರಲು ಈ ರೀತಿಯ ಅನ್‌ಕಂಫರ್ಟೆಬಲ್ ಬಟ್ಟೆಗಳಿಂದ ದೂರವಿರಿ. ಜೊತೆಗೆ ರೇಯಾನ್ ಮತ್ತು ಉಣ್ಣೆಯಂತಹ ಚಳಿಗಾಲದ ಬಟ್ಟೆಗಳಿಂದ ದೂರವಿರಿ. ಏಕೆಂದರೆ ಬೇಸಿಗೆಕಾಲಕ್ಕೆ ಇದು ಒಳ್ಳೆಯದಲ್ಲ.

4. ಶಾರ್ಟ್ ಸ್ಲೀವ್ ಅಥವಾ ಸ್ಲೀವ್‌ಲೆಸ್ ಬಟ್ಟೆ ಆಯ್ಕೆ ಮಾಡಿ:

ಬೇಸಿಗೆಯಲ್ಲಿ ಯಾವಾಗಲೂ ಶಾರ್ಟ್‌ ಸ್ಲೀವ್ ಅಥವಾ ತೋಳುಗಳಿಲ್ಲದ ಬಟ್ಟೆಗಳನ್ನು ಧರಿಸಿ. ಈ ಶೈಲಿಯ ಬಟ್ಟೆಗಳು ನಿಮ್ಮ ಚರ್ಮವನ್ನು ತೇವಾಂಶದಲ್ಲಿ ಉಸಿರಾಡಲು ಅವಕಾಶ ಮಾಡಿಕೊಡುತ್ತವೆ. ನೀವು ಆಫೀಸ್‌ಗೆ ಹೋಗುವವರಾಗಿದ್ದರೆ ಸಣ್ಣ ತೋಳಿನ ಕಾಲರ್ ಬಟನ್-ಡೌನ್ ಬಟ್ಟೆ ಧರಿಸಿ. ಗೆಟ್ ಟುಗೆದರ್‌ಗೆ ಅಥವಾ ಹೊರಗೆ ಹೋಗುತ್ತಿದ್ದರೆ ಸ್ಲೀವ್ ಲೆಸ್ ಡ್ರೆಸ್ ಅಥವಾ ಕಂಫರ್ಟೆಬಲ್ ಆಗಿರುವ ಟೀಶರ್ಟ್ ಧರಿಸಿ.

5. ಬಿಗಿಯಾದ ಬಟ್ಟೆ ಬೇಡವೇ ಬೇಡ:

ಬೇಸಿಗೆಯಲ್ಲಿ ಬಿಗಿಯಾಗಿ ಮೈಗಂಟು ಬಟ್ಟೆಗಳ ಸಹವಾಸಕ್ಕಂತೂ ಹೋಗಲೇಬೇಡಿ. ಬೇಸಿಗೆಯಲ್ಲಿ ಕಂಫರ್ಟೆಬಲ್ ಆಗಿರಲು ಸಡಿಲವಾದ ಬಟ್ಟೆಗಳೇ ಹೆಚ್ಚು ಬೆಸ್ಟ್. ವಾತಾವರಣ ಬಿಸಿಯಾಗಿರುವಾಗ, ಬೆವರುವಾಗ ಚರ್ಮಕ್ಕೆ ಅಂಟಿಕೊಂಡಿರುವ ಬಟ್ಟೆಗಳು ಕಿರಿಕಿರಿಯುಂಟುಮಾಡಬಹುದು. ಸಡಿಲವಾದ ಟಾಪ್ ಅಥವಾ ತ್ವಚೆ ಉಸಿರಾಡುವಂತೆ ಮಾಡುವ ಉಡುಪನ್ನು ಆಯ್ಕೆ ಮಾಡಿ. ಸಡಿಲವಾದ ತೋಳು ಹೊಂದಿರುವ ಎ-ಲೈನ್ ಟಾಪ್, ರಾತ್ರಿ ಔಟಿಂಗ್ ಆದರೆ ಸ್ಕರ್ಟ್, ಮಧ್ಯಾಹ್ನ ಹೊರಹೋಗುವುದಾದರೆ ಕ್ರಾಪ್‌ಟಾಪ್ ಧರಿಸುವುದು ಸೂಕ್ತ.

6. ಬೇಸಿಗೆಯಲ್ಲಿ ವರ್ಕ್ಔಟ್ ಕ್ಲೋತಿಂಗ್ ಕೂಡ ಬೆಸ್ಟ್:

ವರ್ಕ್ಔಟ್ ಮಾಡೋವಾಗ ಮಾತ್ರವಲ್ಲ ನೀವು ಇತರ ಕೆಲಸ ಮಾಡುವಾಗಲೂ ಸ್ಪೋರ್ಟ್ಸ್ ಬ್ರಾ, ಲೆಗ್ಗಿಂಗ್ಸ್, ವರ್ಕೌಔಟ್ ಟಾಪ್ ಮತ್ತು ಸ್ಪೋರ್ಟ್ಸ್ ಶಾರ್ಟ್ಸ್ ಧರಿಸಬಹುದು. ಇವು ಆರಾಮದಾಯಕವಾಗಿರುವುದು ಮಾತ್ರವಲ್ಲ ಚರ್ಮವು ಉಸಿರಾಡಲು ಮತ್ತು ಸುಲಭವಾಗಿ ಚಲಿಸಲು ಸಹಕಾರಿ. ನೀವು ಮನೆಯಲ್ಲಿರುವಾಗ ವರ್ಕ್ಔಟ್ ಡ್ರೆಸ್ ಧರಿಸಲು ಅಡ್ಡಿಯಿಲ್ಲ.

7.ಒಂದರ ಮೇಲೆ ಇನ್ನೊಂದು ಬಟ್ಟೆ ಧರಿಸಬೇಡಿ:

ಬೇಸಿಗೆ ಕಾಲದಲ್ಲಿ ಬಟ್ಟೆಗಳನ್ನು ಲೇಯರ್ ರೀತಿ ಧರಿಸಬೇಡಿ. ಆದಷ್ಟು ಕಡಿಮೆ ಬಟ್ಟೆ ಧರಿಸಿ. ಸಿಂಪಲ್ ಆಗಿರುವ ಉದ್ದನೆಯ ಉಡುಪು, ಸ್ಕರ್ಟ್ ಅಥವಾ ಉದ್ದ ತೋಳು ಹೊಂದಿರುವ ಶರ್ಟ್‌ಗಳು ಉತ್ತಮ. ಒಂದರ ಮೇಲೆ ಇನ್ನೊಂದು ಬಟ್ಟೆ ಧರಿಸಿದರೆ ನೀವು ಬಿಸಿಯಾಗುತ್ತೀರಿ.

ಬೇಸಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳು:

1.ಬೇಸಿಗೆಯಲ್ಲಿ ಸ್ಟೈಲಿಶ್ ಆಗಿಯೂ ಕಾಣಬೇಕೆಂದರೆ ಸನ್‌ಗ್ಲಾಸ್ ಧರಿಸಿ, ಇದು ತೀಕ್ಷ್ಣ ಸೂರ್ಯನ ಕಿರಣಗಳಿಂದ ಕಣ್ಣನ್ನು ರಕ್ಷಿಸುವುದಲ್ಲದೇ ಫ್ಯಾಶನಬಲ್ ಆಗಿಯೂ ನೀವು ಕಾಣುತ್ತೀರಿ.

2.ಬಿಸಿಲಿನಲ್ಲಿ ಹೊರಗೆ ಸುತ್ತಾಡುವುದಾದರೆ ಟೋಪಿ ಧರಿಸುವುದು ಸೂಕ್ತ. ಇದು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ.

3.ಹೆಚ್ಚಿನವರು ಬೇಸಿಗೆಯಲ್ಲಿ ಕಾಲು ಪೂರ್ತಿಯಾಗಿ ಮುಚ್ಚಿರುವ ಶೂಸ್ ಧರಿಸುತ್ತಾರೆ. ಇದರಿಂದಾಗಿ ಬೆವರಿ ವಾಸನೆ ಬರಲು ಆರಂಭವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕ್ಯಾನ್ವಾಸ್ ಅಥವಾ ಕಾಟನ್‌ನಿಂದ ಮಾಡಿರುವ ಶೂಸ್ ಅಥವಾ ಆರಾಮದಾಯಕ ಚಪ್ಪಲಿ ಧರಿಸಿ.

4.ಬಿಸಿಲಿನಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಬೇಸಿಗೆಯಲ್ಲಿ ಸನ್‌ಸ್ಕ್ರೀನ್ ಹಚ್ಚುವುದನ್ನಂತೂ ಮರೆಯಲೇಬೇಡಿ. ಹೊರಗೆ ಹೋಗುವುದಾದರೆ ಸನ್‌ಸ್ಕ್ರೀನ್ ಲೋಷನ್ ನಿಮ್ಮ ಬ್ಯಾಗ್‌ನಲ್ಲಿರಲಿ. ಕನಿಷ್ಠ ಎರಡು ಗಂಟೆಗೊಮ್ಮೆಯಾದರೂ ಸನ್‌ಸ್ಕ್ರೀನ್ ಲೋಷನ್ ಹಚ್ಚಿ.

Share This Article