ಸುಡು ಬೇಸಿಗೆಯಲ್ಲಿ ರೆಸಾರ್ಟ್‌ವೇರ್‌ಗಳ ಹಾವಳಿ

Public TV
2 Min Read

ಬೇಸಿಗೆಯ ಸೀಸನ್‌ನಲ್ಲಿ ರೆಸಾರ್ಟ್‌ವೇರ್‌ಗಳ (Resortwear) ಹಂಗಾಮ ತುಸು ಹೆಚ್ಚಾಗಿಯೇ ಇದೆ. ಫೋಟೋಗಳಲ್ಲಿ ಅಂದವಾಗಿ ಕಾಣಿಸುವ ಈ ರೆಸಾರ್ಟ್‌ವೇರ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಯಾವ್ಯಾವ ಬಗೆಯವು ಹೆಚ್ಚು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಐಟಂ ಸಾಂಗ್‌ನಲ್ಲಿ ಪಡ್ಡೆಹುಡುಗರ ನಶೆ ಏರಿಸಿದ ತಮನ್ನಾ ಭಾಟಿಯಾ

ಸಮ್ಮರ್‌ನಲ್ಲಿ ರೆಸಾರ್ಟ್‌ವೇರ್‌ಗಳ (Resortwear) ಹಾವಳಿ ಹೆಚ್ಚಾಗಿದೆ. ಹೌದು, ವೀಕೆಂಡ್ ಹಾಗೂ ರಿಲ್ಯಾಕ್ಸಿಂಗ್ ಸಮಯದಲ್ಲಿ ಧರಿಸಬಹುದಾದ ಈ ಔಟ್‌ಫಿಟ್‌ಗಳು ಈ ಸೀಸನ್‌ನ ಟ್ರೆಂಡಿ ಔಟ್‌ಫಿಟ್‌ಗಳ ಲಿಸ್ಟ್‌ಗೆ ಸೇರಿದೆ. ಆರೆಂಜ್, ಬ್ಲಡ್‌ರೆಡ್, ಲೆಮನ್ ಯೆಲ್ಲೊ, ರೇಡಿಯಂಟ್ ಗ್ರೀನ್, ನಿಯಾನ್, ಕೊಬಾಲ್ಟ್ ಬ್ಲೂನಂತಹ ವೈಬ್ರೆಂಟ್ ಶೇಡ್‌ಗಳು ಸೇರಿದಂತೆ ಕೂಲ್ ಕಲರ್‌ಗಳ ಊಹಿಸಲಾಗದ ಚಿತ್ತಾರವನ್ನೊಳಗೊಂಡ ಯದ್ವಾತದ್ವಾ ಡಿಸೈನ್‌ನ ಕ್ರಾಪ್ ಫ್ರಾಕ್ಸ್, ಲಾಂಗ್‌ಶೇಪ್ ಲೆಸ್‌ಗೌನ್, ಲೇಯರ್‌ಲುಕ್‌ನಂತೆ, ಕಂಡರೂ ಗಾಳಿಯಲ್ಲಿ ಹಾರಾಡುವಂತಿರುವ ಬ್ಯಾಟ್ ವಿಂಗ್ಸ್ ಮ್ಯಾಕ್ಸಿ, ಕಟೌಟ್ ಸ್ಟೈಲ್‌ನವು ಸೇರಿದಂತೆ ನಾನಾ ಬಗೆಯ ರೆಸಾರ್ಟ್‌ವೇರ್‌ಗಳು ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ.

ಯಂಗ್‌ಸ್ಟರ್‌ಗಳ ಫೇವರೇಟ್ ಉಡುಗೆಗಳಿವು. ಮ್ಯಾಚಿಂಗ್ ಮಾಡುವ ಗೊಂದಲವಿಲ್ಲ. ಒಟ್ಟಿನಲ್ಲಿ ಕಲರ್‌ಫುಲ್ ಆಗಿರಬೇಕು. ಕಂಡಕಂಡ ಕಡೆ ಫೋಟೋ ತೆಗೆದರೂ ಚೆನ್ನಾಗಿ ಕಾಣಬೇಕು. ಸ್ಟ್ರೀಕ್ಟ್‌ ಆಗಿ ಪ್ಯಾಂಟ್ ಅದಕ್ಕೆ ಶರ್ಟ್ ಇಲ್ಲವೇ ಟೀ ಶರ್ಟ್ ಶೂ ಹೀಗೆ ಫಾರ್ಮಲ್ ಡ್ರೆಸ್ಸಿಂಗ್‌ಸೆನ್ಸ್‌ ಕಾನ್ಸೆಪ್ಟ್ ಇದಕ್ಕಿಲ್ಲ. ರಜೆ ಮಜದ ಉಲ್ಲಾಸವನ್ನು ಮತ್ತಷ್ಟು ಹೆಚ್ಚಿಸುವ ಇವು ಕಚೇರಿಗೆ ಇಲ್ಲವೇ ಫಾರ್ಮಲ್‌ವೇರ್ ಆಗಿ ಬಳಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಇವನ್ನು ಪಾರ್ಟಿಗಳಿಗೆ ಬಳಸಬಹುದಷ್ಟೇ.

ಇಂದು ರೆಸಾರ್ಟ್‌ವೇರ್‌ಗಳ ಹೆಚ್ಚು ಪ್ರಖ್ಯಾತಿ ಹೊಂದಿರುವುದು ಫೋಟೋಪೋಸ್‌ಗಾಗಿ. ಪ್ರತಿ ಫೋಟೋಗಳಲ್ಲೂ ಕಲರ್‌ಫುಲ್ ಆಗಿ ಕಾಣಿಸುವ ಇವು ಮುಖದ ಫ್ರೆಶ್‌ನೆಸ್ ಹೆಚ್ಚಿಸುತ್ತವೆ. ಪ್ಯಾಂಟ್, ಟೀ ಶರ್ಟ್ ಕಾನ್ಸೆಪ್ಟ್ ಹಳತಾಯಿತು. ಯಾವುದೇ ಹಾಲಿಡೇ ಫ್ಯಾಷನ್‌ಗೆ ಹೋಗಿ, ಇದೀಗ ರಿಸಾರ್ಟ್‌ವೇರ್ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನೂ ಓದಿ: ಐಟಂ ಸಾಂಗ್‌ನಲ್ಲಿ ಪಡ್ಡೆಹುಡುಗರ ನಶೆ ಏರಿಸಿದ ತಮನ್ನಾ ಭಾಟಿಯಾ

ಪುರುಷರಿಗೆ ಹೋಲಿಸಿದ್ದಲ್ಲಿ ಹುಡುಗಿಯರಿಗೆ ಆಯ್ಕೆ ಹೆಚ್ಚು. ಹೌದು. ಶರ್ಟ್ ಟಾಪ್, ಫ್ರಾಕ್, ಗೌನ್‌ನಿಂದಿಡಿದು ಯಾವ ಬಗೆಯದ್ದಾದರೂ ಚೂಸ್ ಮಾಡಬಹುದು. ಆಕ್ಸೆಸರೀಸ್ ಕೂಡ ಅಷ್ಟೇ. ಬಿಸಿಲು ಮಳೆಗೆ ಹೊಂದುವಂತಹ, ಬೆವರಿದರೂ ಬಣ್ಣಗೆಡದ ಫಂಕಿ ಆಕ್ಸೆಸರೀಸ್ ಮ್ಯಾಚ್ ಮಾಡಿ. ಬಿಂದಾಸ್ ಆಗಿ ಸ್ಟೈಲಿಂಗ್‌ ಮಾಡಬಹುದು. ಫ್ಯಾಷನೆಬಲ್ ಹೆಡ್ ಕ್ಯಾಪ್ಸ್ ದೊರಕುತ್ತವೆ. ಬಿಸಿಲಿಗೆ ಸಂರಕ್ಷಣೆಯೊಂದಿಗೆ ನಿಮ್ಮ ಉಡುಪಿಗೆ ಮ್ಯಾಚ್ ಆಗುತ್ತವೆ. ಮಕ್ಕಳಿಗೆ ಆದಷ್ಟು ಫಂಕಿ ಲುಕ್ ಇರುವ ಟೀ ಶರ್ಟ್ಸ್ ಇಲ್ಲವೇ ಫ್ರಾಕ್ಸ್, ಶಾರ್ಟ್ಸ್ ಜೊತೆಗೆ ರೆಸಾರ್ಟ್‌ವೇರ್‌ಗಳು ಆಕರ್ಷಕವಾಗಿ ಕಾಣಿಸುತ್ತವೆ.

ಟಿಪ್ಸ್:
ಹಾಲಿಡೇಗೆ ಹೋದ ಸ್ಥಳದಲ್ಲೆ ಇವನ್ನು ಕೊಳ್ಳಿ.
ಫೋಟೋ ಫ್ರಿಕ್‌ಗಳಾದಲ್ಲಿ ಕಲರ್‌ಫುಲ್ ರೆಸಾರ್ಟ್‌ವೇರ್‌ಗಳ ಆಯ್ಕೆ ನಿಮ್ಮದಾಗಲಿ.
ಇತರೆ ಕ್ಯಾಶುಯಲ್ ಡ್ರೆಸ್‌ಗಳೊಂದಿಗೆ ಮಿಕ್ಸ್ ಮ್ಯಾಚ್ ಮಾಡಿ ಧರಿಸಿ.

Share This Article