ಟಿಕೆಟ್ ಘೋಷಣೆಗೂ ಮುನ್ನ ಆದಿಚುಂಚನಗಿರಿಗೆ ಸುಮಲತಾ ಭೇಟಿ

Public TV
1 Min Read

ಸ್ಯಾಂಡಲ್‌ವುಡ್ ನಟಿ ಕಮ್ ಸಂಸದೆ ಸುಮಲತಾ (Sumalatha) ಇದೀಗ ಟಿಕೆಟ್ ಘೋಷಣೆಗೂ ಮುನ್ನ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಲೋಕಸಭಾ ಚುನಾವಣೆ ಅಖಾಡ ಕಾವೇರುತ್ತಿದ್ದಂತೆ, ಸುಮಲತಾ ಅವರು ಮಂಡ್ಯ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಿಗೆ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಕರಿಮಣಿ ಮಾಲೀಕನನ್ನು ಪರಿಚಯಿಸಿದ ದೀಪಿಕಾ ದಾಸ್

ಈ ಹಿಂದೆ ಸುದ್ದಿಗೋಷ್ಠಿವೊಂದರಲ್ಲಿ ಶ್ರೀಗಳ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುವುದಾಗಿ ಸುಮಲತಾ ಹೇಳಿದ್ದರು. ಅದರಂತೆ ಇದೀಗ ಮೊದಲಿಗೆ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿದ್ದಾರೆ. ಬಳಿಕ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಸುಮಲತಾ ಆಶೀರ್ವಾದ ಪಡೆದು ಬಂದಿದ್ದಾರೆ.

ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಮೈತ್ರಿ ಟಿಕೆಟ್ ಜಟಾಪಟಿ ನಡುವೆ ಸುಮಲತಾ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಈ ಮೂಲಕ ಜೆಡಿಎಸ್ ನಾಯಕರಿಗೆ ಠಕ್ಕರ್ ಕೊಡಲು ಸುಮಲತಾ ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Share This Article