ಸುಮಲತಾ ಕಾರು ಚಾಲಕನ ಮೇಲೆ ಹಲ್ಲೆ- ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ದೂರು

Public TV
1 Min Read

ಮೈಸೂರು: ತಮ್ಮ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ಸುಮಲತಾ ದೂರು ನೀಡಿದ್ದಾರೆ.

ಕೆ.ಆರ್.ನಗರ, ತಾಲೂಕು ಮುಂಜನಹಳ್ಳಿ ಗ್ರಾಮದಲ್ಲಿ ಮಂಡ್ಯ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು. ಇದನ್ನೂ ಓದಿ: ‘ಕರ್ನಾಟಕ ಅದ್ಭುತ ರಾಜ್ಯ’: ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಸುಳಿವು..!?

50 ಲಕ್ಷ ರೂ. ವೆಚ್ಚದ ನೀರಾವರಿ ಇಲಾಖೆ ಕಾಮಗಾರಿ ಪೂಜೆಗೆ ಆಗಮಿಸಿದ್ದ ಸುಮಲತಾ ಅವರು ಚರಂಡಿ, ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕೆ.ಆರ್.ನಗರ ತಾಲೂಕಿನ ಚೌಕಹಳ್ಳಿ, ಬ್ಯಾಡಹಳ್ಳಿ, ಹಂಪಾಪುರ ಸೇರಿದಂತೆ ಮುಂಜನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್‌ ಅವರನ್ನು ಬಿಟ್ಟು ನೀವು ಗುದ್ದಲಿ ಪೂಜೆ ಮಾಡಿದ್ದು ಸರಿಯಲ್ಲ. ಪ್ರೋಟೊಕಾಲ್‌ ನಿಯಮಗಳನ್ನು ಗಾಳಿಗೆ ತೂರಿದ್ದೀರಿ ಎಂದು ಜೆಡಿಎಸ್‌ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಸಂಸದೆ ಗ್ರಾಮದ ಮಹಿಳೆಯರನ್ನು ಸೇರಿಸಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ, ಶಿಷ್ಟಾಚಾರ ಪಾಲಿಸಿಲ್ಲವೆಂದು ಸಾರಾ ಬೆಂಬಲಿಗರ ತಕರಾರು ತೆಗೆದಿದ್ದಾರೆ. ಗ್ರಾಮಕ್ಕೆ ಬಾರದಂತೆ ಸಂಸದರು ಹಾಗೂ ಜೊತೆಯಲ್ಲಿದ್ದವರನ್ನು ತಡೆದಿದ್ದಾರೆ. ಈ ವೇಳೆ ಗಲಾಟೆಯನ್ನೂ ಆರಂಭಿಸಿದ್ದಾರೆ. ಗಲಾಟೆ ತಡೆಯಲು ಬಂದ ಸಂಸದರ ಕಾರು ಚಾಲಕ ನಂಜುಂಡನ ಮೇಲೆ ಸಾರಾ ಬೆಂಬಲಿಗರ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಸಾರಾ ಬೆಂಬಲಿಗರ ವಿರುದ್ದ ಖುದ್ದು ಸಾಲಿಗ್ರಾಮ ಠಾಣೆಗೆ ತೆರಳಿ ಸಂಸದೆ ಸುಮಲತಾ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ: ಎಚ್‍ಡಿಕೆ

Share This Article
Leave a Comment

Leave a Reply

Your email address will not be published. Required fields are marked *