ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್‌ ಮೆಂಬರ್ – ಡಿಕೆಶಿ ವ್ಯಂಗ್ಯ

Public TV
2 Min Read

ಹುಬ್ಬಳ್ಳಿ: ಬಿಜೆಪಿಯವರದ್ದು (BJP) ಸುಳ್ಳಿನ ಯುನಿವರ್ಸಿಟಿ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ. ಸುಮಲತಾ (Sumalatha) ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ವ್ಯಂಗ್ಯವಾಡಿದ್ದಾರೆ.

ಮೂರು ವರ್ಷದಿಂದ ಮಹದಾಯಿ ಯೋಜನೆ (Mahadayi Project) ಜಾರಿಗೊಳಿಸಲು ಆಗಿಲ್ಲ. ಮೂರು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಯೋಜನೆ ಜಾರಿ ಮಾಡಲು ಆಗಿಲ್ಲ. ಈಗ ನಾವು ಮತ್ತು ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2D ಮೀಸಲಾತಿ – ಸಂಪುಟ ಸಭೆಯಲ್ಲಿ ನಿರ್ಧಾರ

ಸುಪ್ರೀಂ ಕೋರ್ಟ್ (Supreme Court) ತೀರ್ಪಿಗೆ ಒಳಪಟ್ಟು, ಕಾಮಗಾರಿ ಆರಂಭಿಸಿ ಎಂದು ಪತ್ರ ಸಿದ್ಧಪಡಿಸಿದ್ದಾರೆ. ಗೋವಾ (Goa) ಮಂತ್ರಿಯೊಬ್ಬ ರಾಜೀನಾಮೆ ಕೊಡ್ತಾರಂತೆ, ಕೊಡಲಿ ಬಿಡಿ. ರಾಜ್ಯದಲ್ಲಿ 26 ಸಂಸದರು ಬಿಜಪಿಯವರಿದ್ದಾರೆ. ಮಹದಾಯಿಗೆ ಇವರೆಲ್ಲ ಸೇರಿ ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಕಾಮಗಾರಿಯಾದ್ರು ಪೂರ್ಣಗೊಳಿಸಬೇಕಿತ್ತು. ಪ್ರಹ್ಲಾದ್ ಜೋಶಿ (Pralhad Joshi) ಎಷ್ಟೊಂದು ಅಪ್ಡೇಟ್ ಇದ್ದಾರೆ ಅನ್ನೋದು, ಪತ್ರ ಓದಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡಿಷನ್ ಹಾಕಿದ್ದಾರೆ. ನಾವೆಲ್ಲ ಸತ್ತ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಾ? ಕೊಡ್ರಿ ನಮಗೆ ಅಧಿಕಾರನಾ, ಆರು ತಿಂಗಳಲ್ಲಿ ಆ ಯೋಜನೆಯನ್ನು ಬಡಿದುಹಾಕ್ತೀನಿ ಎಂದು ಹೇಳಿದ್ದಾರೆ.

ಪಂಚಮಸಾಲಿ (Panchamasali), ಒಕ್ಕಲಿಗ (Vokkaliga) ಸಮುದಾಯಗಳ ಮೀಸಲಾತಿ ವಿಚಾರ ಕುರಿತು ಮಾತನಾಡಿ, ಸರ್ಕಾರ ಮೂಗಿಗಲ್ಲ, ತಲೆಗೆ ತುಪ್ಪ ಸವರಿದೆ. ಮೂಗಿಗೆ ಸವರಿದ್ದರೆ ಕನಿಷ್ಟಪಕ್ಷ ವಾಸನೆಯನ್ನಾದ್ರು ನೋಡಬಹುದಿತ್ತು. ಬೊಮ್ಮಾಯಿ ಸರ್ಕಾರ ತೆಲೆಗೆ ತಪ್ಪು ಸವರಿದೆ. ಅದನ್ನು ಹೇಗೆ ತಿನ್ನೋದು? ಜಯಮೃತ್ಯುಂಜಯ ಸ್ವಾಮೀಜಿ ಸರಿಯಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸರ್ಕಾರಕ್ಕೆ ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ? 

ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ನೀಡಿದ ಮೀಸಲಾತಿಯಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಇದನ್ನು ಹೇಗೆ ಒಪ್ಪುತ್ತೆ? ಸಂಪುಟದ ತೀರ್ಮಾನ, ಅದೇಶದ ಬಳಿಕ ಯಾರಾದರೂ ಕೋರ್ಟಿಗೆ ಹೋದರೆ ಮುಗಿತು. ಮೀಸಲಾತಿ ಜಾರಿ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ರೂ ಮುಂದೆ ಜಾರಿ ಆಗಿಲ್ಲ. ಕೇಂದ್ರಕ್ಕೆ‌ ಕಳಿಸಿ ಸಂಸತ್ತಿನಲ್ಲಿ ಮಾಡಿಸಬೇಕಿತ್ತು. ಆದ್ರೆ ಕೇಂದ್ರಕ್ಕೆ ಕಳಿಸಲೇ ಇಲ್ಲ. ಇನ್ನು 90 ದಿನದಲ್ಲಿ ಸರ್ಕಾರವೇ ಇರಲ್ಲ. ಇವರ ಕೈಯಲ್ಲಿ ಅಧಿಕಾರನೇ ಇರುವುದಿಲ್ಲ, ಇನ್ನೂ ಮೀಸಲಾತಿ ಹ್ಯಾಗೆ ಜಾರಿ‌ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನು ಅಲ್ಲ. ಪಂಚಮಸಾಲಿ ನಾಯಕರು ಅನ್ನೋರು ಎಲ್ಲಿ ಹೋದ್ರು. ಸರ್ಕಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ? ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ್ ಯಾಕೆ ಮಾತನಾಡುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಸರ್ವರಿಗೆ ಸಮಪಾಲು-ಸಮ ಬಾಳು ಎಂದು ಭರವಸೆ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *