ಮೆಗಾಸ್ಟಾರ್ ಚಿರಂಜೀವಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಸುಮಲತಾ ಅಂಬರೀಶ್

Public TV
2 Min Read

ತೆಲುಗಿನ ಖ್ಯಾತ ನಟ, ಮೆಗಾಸ್ಟಾರ್ ಚಿರಂಜೀವಿ (Chiranjeevi) ಇಂದು ತಮ್ಮ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಿನಿಮಾ ರಂಗದೊಂದಿಗೆ ಆತ್ಮೀಯ ನಂಟು ಇಟ್ಟುಕೊಂಡಿರುವ ಚಿರಂಜೀವಿಗೆ ಸಂಸದೆ, ನಟಿ ಸುಮಲತಾ ಅಂಬರೀಶ್ (Sumalatha Ambarish) ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ಹೇಳಿದ್ದಾರೆ. ಅವರೊಂದಿಗಿನ ಫೋಟೋವನ್ನು ಸುಮಲತಾ ಹಂಚಿಕೊಂಡಿದ್ದಾರೆ.

‘ಹೆಸರಾಂತ ಕಲಾವಿದರಾದ ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಕಲಾಸೇವೆ ಮತ್ತು ಸಮಾಜ ಸೇವೆಗೆ ಇಡೀ ಜೀವವನ್ನೇ ಮೀಸಲಿಟ್ಟ ನಿಮಗೆ ಮತ್ತಷ್ಟು ಆಯುಷ್ಯ ಆರೋಗ್ಯ ದೇವರು ನೀಡಲಿ ಎಂದು ಪ್ರಾರ್ಥಿಸುವೆ. ನಿಮ್ಮೊಂದಿನ ಸ್ನೇಹ ಯಾವತ್ತಿಗೂ ಮಾದರಿ ಆಗಿರುವಂಥದ್ದು’ ಎಂದು ಸುಮಲತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸುಮಲತಾ ಮತ್ತು ಚಿರಂಜೀವಿ ಒಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಅಂಬರೀಶ್ ಅವರ ಜೊತೆ ಚಿರಂಜೀವಿಗೆ ಆತ್ಮೀಯಾ ಗೆಳೆತನವಿತ್ತು. ಮೊನ್ನೆಯಷ್ಟೇ ಅಭಿಷೇಕ್ ಅಂಬರೀಶ್ ಮದುವೆಗೆ ಚಿರಂಜೀವಿ ಬಂದಿದ್ದರು. ಅಷ್ಟರ ಮಟ್ಟಿಗೆ ಎರಡೂ ಕುಟುಂಬಗಳ ಒಡನಾಟವಿದೆ.

ಹೊಸ ಸಿನಿಮಾ ಘೊಷಣೆ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಗಿಂದು ಹುಟ್ಟುಹಬ್ಬದ ಸಂಭ್ರಮ. ಮೆಗಾಸ್ಟಾರ್ ಜನ್ಮದಿನದ ಅಂಗವಾಗಿ 157ನೇ ಸಿನಿಮಾ ಅನೌನ್ಸ್ ಆಗಿದೆ. ತೆಲುಗು ಚಿತ್ರರಂಗದ ಎವರ್‌ಗ್ರೀನ್ ಕ್ಲಾಸಿಕ್‌ಗಳಲ್ಲಿ ಒಂದಾಗಿರುವ ಜಗದೇಕ ವೀರುಡು ಅತಿಲೋಕ ಸುಂದರಿಯಂತಹ ಮತ್ತೊಂದು ಫ್ಯಾಂಟಸಿ ಎಂಟರ್‌ಟೈನರ್‌ನಲ್ಲಿ ಚಿರು ನಟಿಸುತ್ತಿದ್ದಾರೆ.

ಬಿಂಬಿಸಾರ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ವಸಿಷ್ಠ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯುವಿ ಕ್ರಿಯೇಷನ್ಸ್‌ನ ಯಶಸ್ವಿ ಬ್ಯಾನರ್ ಅಡಿಯಲ್ಲಿ ವಿ ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪಟ್ಟಿ ಮತ್ತು ವಿಕ್ರಮ್ ರೆಡ್ಡಿ ನಿರ್ಮಿಸಲಿರುವ #Mega157 ಚಿತ್ರ ಚಿರಂಜೀವಿ ಅವರ ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಚಿತ್ರ ಎನ್ನಲಾಗಿದೆ.

ನಿರ್ದೇಶಕ ವಸಿಷ್ಠ ಈ ಸಿನಿಮಾ ಮೂಲಕ ಮೆಗಾ ಮಾಸ್ ಯೂನಿವರ್ಸ್ ಅನ್ನು ಸಿನಿರಸಿಕರಿಗೆ ಪರಿಚಯಿಸಲಿದ್ದಾರೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶದಂತಹ ಪಂಚಭೂತಗಳು (ಪ್ರಕೃತಿಯ ಐದು ಅಂಶಗಳು) ತ್ರಿಶೂಲದೊಂದಿಗೆ ನಕ್ಷತ್ರಾಕಾರದ ಅಂಶವನ್ನು ಹೊಂದಿರುವ ಪೋಸ್ಟರ್ ಅನಾವರಣ ಮಾಡಲಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್