ಕೋರ್ಟ್‌ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ

Public TV
2 Min Read

– ವಿಷ್ಣು ಸರ್ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದ ನೆನಪಿರಲಿ ಪ್ರೇಮ್

ಬೆಂಗಳೂರು: ಅಭಿಮಾನಿಗಳ ನೋವಲ್ಲಿ ಅರ್ಥ ಇದೆ. ಇದು ನೋವಾಗುವಂತಹ ವಿಷಯವೇ. ಏಕೆ ಹೀಗಾಗಿದೆ ಅನ್ನೋದು ಗೊತ್ತಿಲ್ಲ. ಹೈಕೋರ್ಟ್ ಆದೇಶದ ಮುಂದೆ ನಾವೆಲ್ಲರು ನಿಸ್ಸಹಾಯಕರಾಗಿದ್ದೇವೆ ಎಂದು ನಟಿ ಹಾಗೂ ಮಾಜಿ ಸಂಸದೆ ಸುಮಾಲತಾ (Sumalatha Ambareesh) ಬೇಸರ ಹೊರಹಾಕಿದ್ದಾರೆ.

ಮೇರುನಟ ಡಾ. ವಿಷ್ಣುವರ್ಧನ್ ಸಮಾಧಿ (Vishnuvardhan Memorial) ತೆರವು ವಿಚಾರವಾಗಿ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌

ಅಭಿಮಾನಿಗಳ (Vishnuvardhan Fans) ನೋವಲ್ಲಿ ಅರ್ಥ ಇದೆ. ಇದು ನೋವಾಗುವಂತಹ ವಿಷಯವೇ. ಏಕೆ ಹೀಗಾಗಿದೆ ಅನ್ನೋದು ಗೊತ್ತಿಲ್ಲ. ಹೈಕೋರ್ಟ್ ಆದೇಶ. ಅದರ ಮುಂದೆ ನಾವೆಲ್ಲರು ನಿಸ್ಸಹಾಯಕರು. ನೋವನ್ನ ಮಾತ್ರ ವ್ಯಕ್ತಪಡಿಸುವ ಪರಿಸ್ಥಿತಿಯಲ್ಲಿದ್ದೀವಿ. ಒಂದು ಕಡೆ ಅಧಿಕೃತ ಸಮಾಧಿ ಮೈಸೂರಿನಲ್ಲಿ ಸುಂದರವಾಗಿ ಬಂದಿದೆ. ಅದೊಂದು ಸ್ವಲ್ಪ ಸಮಾಧಾನ ಮಾಡಿಕೊಳ್ಳುವ ಅವಕಾಶ. ತೆರವು ಮಾಡುವ ಬಗ್ಗೆ ಮುಂಚೆನೇ ತಿಳಿಸಿ ಮಾಡಬೇಕಿತ್ತು. ಅಂತ್ಯಕ್ರಿಯೆ ನಡೆದ ಜಾಗವಾದ ಕಾರಣ ಸಣ್ಣದಾಗಿಯಾದ್ರು ಅಭಿಮಾನಿಗಳಿಗೆ ತಿಳಿಸುವ ಕೆಲಸ ಮಾಡಬೇಕಿತ್ತು. ಮೊದಲೇ ಘೋಷಣೆ ಮಾಡಿದ್ರೆ, ಅಭಿಮಾನಿಗಳಿಗೆ ಸಮಾಧಾನ ಇರುತ್ತಿತ್ತು. ಇದು ತಪ್ಪು ಅಂತ ನನಗೂ ಕೂಡ ಅನ್ನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ

ವಿಷ್ಣು ಸರ್ ನಮ್ಮ ಜೊತೆ ಜೀವಂತವಾಗಿದ್ದಾರೆ: ನೆನಪಿರಲಿ ಪ್ರೇಮ್
ಇನ್ನೂ ಇದೇ ವಿಚಾರಕ್ಕೆ ನಟ ನೆನಪಿರಲಿ ಪ್ರೇಮ್‌ ಮಾತನಾಡಿ, ನಾನು ಕೂಡ ವಿಷ್ಣುವರ್ಧನ್‌ರ ಅಭಿಮಾನಿ. ಸಮಾಧಿ ಕಟ್ಟೋದು ಸತ್ತವರಿಗೆ. ಆದರೆ ವಿಷ್ಣು ಸರ್ ಸತ್ತಿಲ್ಲ. ನಮ್ಮಂತ ನಿಮ್ಮಂತ ಅಭಿಮಾನಿಗಳ ಮನಸ್ಸಿನಲ್ಲಿದ್ದಾರೆ. ಈ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಳ್ಳೋದು ಬೇಡ. ಅವರು ನಮ್ಮ ಜೊತೆ ಇದ್ದಾರೆ. ಸಮಾಧಿ ನೋಡಿದಾಗ, ಅವರು ಇಲ್ಲ ಅನ್ನೋ ನೋವು ಕಾಡುತ್ತೆ. ಅವರು ನಟನೆ ಮೂಲಕ ನಮ್ಮ ಜೊತೆ ಜೀವಂತವಾಗಿ ಇದ್ದಾರೆ. ಹಾಗಾಗಿ ಅಭಿಮಾನಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.  ಇದನ್ನೂ ಓದಿ: `ಶೋಧ’ಕ್ಕಾಗಿ ಪವನ್ ಕುಮಾರ್ ಜೊತೆ ಒಂದಾದ ಸಿರಿ ರವಿಕುಮಾರ್

Share This Article