ʼಸುಖೀಭವ’ ಎನುತ್ತಾ ಸ್ಯಾಂಡಲ್‌ವುಡ್‌ಗೆ ಬಂದ ಡೈರೆಕ್ಟರ್ ಎನ್.ಕೆ ರಾಜೇಶ್ ನಾಯ್ಡು

2 Min Read

ನ್ನಡದ ಪ್ರತಿಭಾನ್ವಿತ ನಿರ್ದೇಶಕ ಎನ್.ಕೆ ರಾಜೇಶ್ ನಾಯ್ಡು (NK Rajesh Naidu) ‘ಪರಪಂಚ’ ಚಿತ್ರ ಸೇರಿದಂತೆ ಅನೇಕ‌ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಿನಿ ಜರ್ನಿ ಶುರು ಮಾಡಿದರು. ಈಗ ‘ಸುಖೀಭವʼ ಚಿತ್ರದ ಮೂಲಕ ಮೊದಲ‌ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇದವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಬಿ.ಎ ಓದಿರೋ ಮೈಸೂರು ಮೂಲದ ಪ್ರತಿಭೆ ಎನ್.ಕೆ ರಾಜೇಶ್ ನಾಯ್ಡು ಈಗೀನ ಕಾಲಕ್ಕೆ ತಕ್ಕಂತೆ ವಿಭಿನ್ನ ಪ್ರೇಮ ಕಥೆಯನ್ನು ಪ್ರೇಕ್ಷಕರಿಗೆ ಊಣ ಬಡಿಸಲು ಹೊರಟಿದ್ದಾರೆ. ಈ ವಿಭಿನ್ನ ಲವ್‌ಸ್ಟೋರಿಗೆ ಸುಖೀಭವ (Sukhibhavaa) ಎಂಬ ಕ್ಯಾಚಿ ಟೈಟಲ್ ಅನ್ನೇ ಇಟ್ಟಿದ್ದಾರೆ.

ಕೆಲ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅನುಭವಿದ್ದ ರಾಜೇಶ್‌ಗೆ ನಂತರದ ದಿನಗಳಲ್ಲಿ ನಿರ್ದೇಶಕನಾಗೋ ಆಸಕ್ತಿ ಶುರುವಾಯ್ತು. ಅದಕ್ಕಾಗಿ ಅವರು ತಾಲೀಮು ನಡೆಸಿದ್ದರು. ನಮ್ಮ ಸುತ್ತಮುತ್ತ ನಡೆಯುವ ಘಟನೆಯನ್ನೇ ಸ್ಫೂರ್ತಿಯಾಗಿಟ್ಟುಕೊಂಡು 2012ರ ಬಳಿಕ ‘ಸುಖೀಭವ’ ಕಥೆ ಬರೆದರು. ಆ ನಂತರ 2017ರ ನಂತರ ಈ ಕಥೆಯನ್ನು ಸಿನಿಮಾ ರೂಪದಲ್ಲಿ ತೋರಿಸಲು ತಯಾರಿ ನಡೆಸಿದರು.

ಆಗ ಸ್ನೇಹಿತರೊಬ್ಬ ಮೂಲಕ ಪರಿಚಯವಾಗಿದ್ದ ನಿರ್ಮಾಪಕ ಸಂತೋಷ್ ಕುಮಾರ್ ರವರು ರಾಜೇಶ್ ಸಿನಿ ಕನಸಿನ ಬೆನ್ನಿಗೆ ನಿಂತರು. ಈ ಮೂಲಕ ‘ಸುಖೀಭವ’ ಕಥೆಗೆ ಜೀವ ಬಂತು ಎಂದು ರಾಜೇಶ್ ನಾಯ್ಡು ತಮ್ಮ ಸಿನಿಮಾ ಕನಸನ್ನು ಬಿಚ್ಚಿಟ್ಟಿದ್ದಾರೆ.  ಇದನ್ನೂ ಓದಿ: Dhurandhar 2 Teaser; ಹಮ್ಜಾ ಆಗಿ ರಣವೀರ್ ಸಿಂಗ್ ಮತ್ತೆ ಮಾಸ್ ಎಂಟ್ರಿ

ಇನ್ನೂ ‘ಸುಖೀಭವ’ ಚಿತ್ರಕ್ಕೆ ಪ್ರಮುಖ ಪಾತ್ರಗಳ ಆಯ್ಕೆ ಹೇಗೆ ಆಯ್ತು ಎಂಬುದನ್ನು ವಿವರಿಸಿದ್ದಾರೆ. ಕಥೆ ಮತ್ತು ಬಜೆಟ್‌ಗೆ ತಕ್ಕಂತೆ ಮುಖ್ಯ ಪಾತ್ರಧಾರಿಗಳ ಆಯ್ಕೆ ಮಾಡಿರೋದಾಗಿ ತಿಳಿಸಿದ್ದಾರೆ.

ಪ್ರತಿಯೊಬ್ಬರು ಪ್ರೀತಿಯನ್ನು ಭಿನ್ನವಾಗಿ ನೋಡ್ತಾರೆ. ನಿಮ್ಮಲ್ಲಿಯೂ ಕೂಡ ಪ್ರೀತಿ ಎಂಬುದು ಇದೆ. ಅದನ್ನು ಫೀಲ್ ಮಾಡೋ ರೀತಿ ಬೇರೆ ಅನ್ನೋದನ್ನು ತೋರಿಸಲು ಹೊರಟಿದ್ದೇವೆ. ಯುವಜನತೆಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ನಮ್ಮ ಸಿನಿಮಾ ಕನೆಕ್ಟ್ ಆಗುತ್ತೆ ಎಂಬ ನಂಬಿಕೆಯಿದೆ ಎನುತ್ತಾರೆ ಡೈರೆಕ್ಟರ್.

ಈ ಚಿತ್ರದಲ್ಲಿ ನಾಯಕನಾಗಿ ಮಹೇಂದ್ರ ನಟಿಸಿದ್ದು, ಅವರಿಗೆ ಸುಶ್ಮಿತ ನಾಯಕ್ ಹಾಗೂ ವಿಯಾನ್‌ಶಿ ಹೆಗ್ಡೆ ನಾಯಕಿಯಾಗಿದ್ದಾರೆ. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿಸಂತು, ಮೈತ್ರಿ ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಇನ್ನೂ ನಟ ಶರಣ್ ‘ಬೇಡ ಮಚ್ಚಾ ಬೇಡ’ ಸಾಲಿನ ಹಾಡನ್ನು ಹಾಡಿದ್ದಾರೆ. ಇದು ಈ ಚಿತ್ರದ ಹೈಲೈಟ್ ಆಗಿದೆ.

‘ಸುಖೀಭವ’ ಟೀಸರ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಇದೇ ಫೆ.6ರಂದು ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.

 

Share This Article